ಕೊನೆಗೂ ಸಮಂತಾ ಹಾಗೂ ನಾಗ ಚೈತನ್ಯ ಡೈವೋರ್ಸ್ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಾಗ ಚೈತನ್ಯ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕಲಾವಿದರ ಬದುಕು ಎಂದರೆ ಅದು ವಯಕ್ತಿಕ ಕಡಿಮೆ ಖಾಸಗಿ ಹೆಚ್ಚು ಎನ್ನುವಂತೆ. ಯಾಕೆಂದರೆ ಕಲಾವಿದರ ಬದುಕಿನಲ್ಲಿ ಏನೇ ನಡೆದರೂ ಕೂಡ ಅದು ಅತ್ಯಂತ ಬೇಗ ಸುದ್ದಿಯಾಗುತ್ತೆ. ಅದರಲ್ಲೂ ಸ್ವಲ್ಪ ಹೆಸರು ಮಾಡಿದ ನಟ ನಟಿಯರ ಬದುಕಿನ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತವೆ. ಈ ಬಗ್ಗೆ ಕಲವರು ಸ್ಪಂದಿಸಿದರೆ ಇನ್ನೂ ಕೆಲವರು ನಿರ್ಲಕ್ಷಿಸುತ್ತಾರೆ. ಆದರೆ ಈ ಬಾರಿ ನಾಗ ಚೈತನ್ಯ ತಮ್ಮ ವಯಕ್ತಿಕ ವಿಚಾರದದ ಬಗ್ಗೆ ತುಸು ಬಾಯಿಬಿಟ್ಟಿದ್ದಾರೆ!

ತೆಲಗು ಸ್ಟಾರ್ ನಟ ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ಅವರ ವಿಚ್ಛೇಧನಕ್ಕೆ ಸಂಬಂಧಪಟ್ಟಂತೆ ಹಲವಾರು ವಿಷಯಗಳು ಸುದ್ದಿಯಲ್ಲಿತ್ತು. ಇವರಿಬ್ಬರೂ ಬೇರೆ ಯಾಗುತ್ತಿರುವ ವಿಷಯ ದಕ್ಷಿಣ ಭಾರತದಾತ್ಯಂತ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಸಮಂತಾ ಅವರ ವರ್ತನೆ ಕೂಡ ಇತ್ತು ಎನ್ನಬಹುದು. ಆದರೆ ತಮ್ಮ ಹೊಸ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದ ನಟ ನಾಗ ಚೈತನ್ಯ ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿರಲಿಲ್ಲ. ಆದರೆ ಈ ಬಾರಿ ತಮ್ಮ ವಯಕಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ ನಟ ನಾಗ ಚೈತನ್ಯ.

ನಾಗ ಚೈತನ್ಯ ಹಾಗೂ ನಟಿ ಸಾಯಿ ಪಲ್ಲವಿ ಅಭಿನಯದ ’ಲವ್ ಸ್ಟೋರಿ’ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರ. ತೆಲಂಗಾಳ ಭಾಗದಲ್ಲಿ ಚಿತ್ರೀಕರಣ ಕಂಡ ಈ ಚಿತ್ರದಲ್ಲಿ ನಾಗ ಚೈತನ್ಯ ಪಕ್ಕಾ ಲೋಕಲ್ ತೆಲುಗು ಮಾತನಾಡುತ್ತಾರಂತೆ. ಒಮಿಗೋ ಕ್ರಿಯೇಷನ್ಸ್‌, ಏಷ್ಯನ್‌ ಸಿನಿಮಾಸ್‌, ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಸಂಸ್ಥೆಗಳು ಒಟ್ಟಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಶೇಖರ್ ಕಮಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಈ ಚಿತ್ರದ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಇನ್ನು ಸಂದರ್ಶನ ಒಂದರಲ್ಲಿ ಮಾತನಾಡಿದ ನಾಗ ಚೈತನ್ಯ, “ನನ್ನ ಅಜ್ಜನ ಕಾಲದಲ್ಲಿ ವಾರಕ್ಕೊಂದು ಬರುತ್ತಿದ್ದ ನಿಯತಕಾಲಿಕೆಗಳೇ ಇನ್ನೊಂದು ಬರುವವರೆಗೂ ಸುದ್ದಿಯಲ್ಲಿರುತ್ತಿತು. ಆದರೆ ಇತ್ತೀಚಿಗೆ ಸುದ್ದಿಯೇ ಸುದ್ದಿಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಹೊಸ ಸುದ್ದಿ ಹುಟ್ಟಿಕೊಳ್ಳುತ್ತದೆ. ನನ್ನ ಪಾಲಕರು ವೃತ್ತಿಯ ಬಗ್ಗೆ ಮನೆಗೆ ಬಂದು ಮಾತನಾಡುತ್ತಿರಲಿಲ್ಲ, ವೃತ್ತಿಯಲ್ಲಿ ವಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಿರಲಿಲ್ಲ. ನಾನೂ ಅದನ್ನೇ ಕಲಿತಿದ್ದೇನೆ’. ಎಂದಿದ್ದಾರೆ. ಜೊತೆಗೆ ತನ್ನ ವಯಕ್ತಿಕ ಜೀವನದ ಬಗ್ಗೆ ಇತರರು ಮಾತನಾಡುವುದಕ್ಕೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

Post Author: Ravi Yadav