ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ ನಟರು ಯಾರ್ಯಾರು ಗೊತ್ತಾ?? ಇವರಲ್ಲಿ ನಿಮ್ಮ ಫೇವರಿಟ್ ಯಾರು??

ನಮಸ್ಕಾರ ಸ್ನೇಹಿತರೇ ನಟ ಎಂದರೆ ನಮಗೆ ಕನ್ನಡ ಚಿತ್ರರಂಗದಲ್ಲಿ ಕಂಡುಬರುವುದು ಒಂದು ಡೈಲಾಗು 2 ಸಾಹಸ ದೃಶ್ಯ ಹಾಗೂ ಒಂದು ಡ್ಯಾನ್ಸ್ ಎಂಬುದಾಗಿ. ಆದರೆ ನಿಜವಾಗಿಯೂ ಕೂಡ ನಟನೆ ಎಂದರೆ ವಿಭಿನ್ನ ಪಾತ್ರಗಳ ಮೂಲಕವೂ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಲ್ಲ ಅಂತಹ ಶಕ್ತಿಯನ್ನು ಹೊಂದಿರುವುದು ಸ್ನೇಹಿತರೆ. ಬನ್ನಿ ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಸಹನಟರ ಕುರಿತಂತೆ ನೋಡೋಣ.

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದ ಖ್ಯಾತ ನಟನಾಗಿರುವ ನವರಸ ನಾಯಕ ಜಗ್ಗೇಶ್ ಅವರು ಮನ್ಮಥ ಚಿತ್ರದಲ್ಲಿ ವಿಕಲಚೇತನ ಪಾತ್ರದಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ಪ್ರೀತಿಯ ರಾಮು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರುಡನಾಗಿ ಸಾಕಷ್ಟು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರವರು ನಾನು ಅವನಲ್ಲ ಅವಳು ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಇನ್ನೂ ತಲೆದಂಡ ಚಿತ್ರದಲ್ಲಿ ಬುದ್ಧಿಮಾಂದ್ಯ ಪಾತ್ರದಲ್ಲಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಸುದೀಪ್ ರವರು ಹೆಸರಾಗಿದ್ದು ನಟನೆಯಲ್ಲಿ. ಅದರಲ್ಲಿ ಕೂಡ ಅವರ ಮೊದಲ ಯಶಸ್ಸಿನ ಹುಚ್ಚ ಚಿತ್ರದ ಹುಚ್ಚ ಪಾತ್ರದಲ್ಲಿ ಸಾಕಷ್ಟು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸ್ವಾತಿ ಮುತ್ತು ಚಿತ್ರದಲ್ಲಿ ಕೂಡ ಮಗುವಿನಂತಹ ಮುಗ್ಧತೆಯನ್ನು ಹೊಂದಿರುವ ಪಾತ್ರವನ್ನು ಮಾಡುವುದರ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅವರು ಅನಾಥರು ಚಿತ್ರದಲ್ಲಿ ಮಾಡಿರುವ ವೈಶಿಷ್ಟ್ಯ ಉಳ್ಳ ಪಾತ್ರ ಹಾಗೂ ಕುಷ್ಟರೋಗ ಪಾತ್ರ ದಲ್ಲಿ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಪಾತ್ರಗಳು ಕೂಡ ರಿಯಲ್ ಸ್ಟಾರ್ ಉಪೇಂದ್ರ ರವರ ಗಮನಾರ್ಹ ಪಾತ್ರಗಳು ಎಂದು ಹೇಳುವುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ‌

Post Author: Ravi Yadav