ಆರ್ಸಿಬಿ ಸೋಲಿಗೆ ಈತನೇ ಕಾರಣ ಎಂದ ಕೊಹ್ಲಿ, ಆದರೂ ಖುಷಿಯಾಗುತ್ತಿದೆ ಎಂದದ್ದು ಯಾಕೆ ಗೊತ್ತೇ?? ಇದು ನಿಜವಾದ ಕೊಹ್ಲಿ.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೊದಲ ಪಂದ್ಯದಲ್ಲೇ ಆರ್ಸಿಬಿ ಹೀನಾಯವಾಗಿ ಸೋತಿತು. ಆರ್ಸಿಬಿ ತನ್ನ ಕೋಟಾದ ಇಪ್ಪತ್ತು ಓವರ್ ಗಳನ್ನು ಪೂರ್ಣಗೊಳ್ಳಿಸದೇ, ಹತ್ತೊಂಬತ್ತು ಓವರ್ ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಗೆ ಇಳಿದ ಕಿಂಗ್ ಖಾನ್ ಪಡೆ ಕೆಕೆಆರ್, ಗುರಿಯನ್ನ ಹತ್ತು ಓವರ್ ಗಳಲ್ಲಿ ತಲುಪಿ , ರನ್ ರೇಟ್ ಸಹ ಅತ್ಯುತ್ತಮಗೊಳಿಸಿತು. ಆದರೇ ಆರ್ಸಿಬಿಯ ನೀರಸ ಪ್ರದರ್ಶನ ಮಾತ್ರ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನು ಉಂಟು ಮಾಡಿತು. ಬ್ಯಾಟಿಂಗ್,ಬೌಲಿಂಗ್,ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲಿ ಆರ್ಸಿಬಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.

ಇನ್ನು ಕೆಕೆಆರ್ ನ ಮಿಸ್ಟರಿ ಬೌಲರ್ ವರುಣ್ ಚಕ್ರವರ್ತಿ, ಪಂದ್ಯದ ಮೊದಲ ಓವರ್ ಎಸೆದು ಆರ್ಸಿಬಿಗೆ ಕಠಿಣ ಸವಾಲು ಹಾಕಿದರು. ನಂತರ ಮತ್ತೆ ದಾಳಿಗಿಳಿದ ವರುಣ್ ಚಕ್ರವರ್ತಿ ಒಂದೇ ಓವರ್ ನಲ್ಲಿ ಗ್ಲೆನ್ ಮ್ಯಾಕ್ಸವೇಲ್ ಹಾಗೂ ವನಿಂದು ಹಸರಂಗರವರ ವಿಕೇಟ್ ಪಡೆದು ಆಘಾತ ನೀಡಿದರು‌. ನಂತರ ಕೈಲ್ ಜೇಮಿಸನ್ ರನ್ನ ರನೌಟ್ ಮಾಡಿ, ಸಚಿನ್ ಬೇಬಿಯವರ ವಿಕೇಟ್ ಸಹ ಪಡೆದರು. ತಮ್ಮ ಕೋಟಾದ ನಾಲ್ಕು ಓವರ್ ನಲ್ಲಿ ಕೇವಲ 12 ರನ್ ನೀಡಿ ಪ್ರಮುಖ ಮೂರು ವಿಕೇಟ್ ಪಡೆದಿದ್ದಲ್ಲದೇ, ಆರ್ಸಿಬಿ ತಂಡದ ರನ್ ಗತಿಗೆ ಕಡಿವಾಣ ಸಹ ಹಾಕಿದ್ದು ವರುಣ್ ಚಕ್ರವರ್ತಿ ಎಂದು ಹೇಳಬಹುದು.

ಇನ್ನು ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ವರುಣ್ ಚಕ್ರವರ್ತಿಯವರ ಪ್ರದರ್ಶನವನ್ನು ಮನತುಂಬಿ ಹೊಗಳಿದ್ದು, ಇಂದು ಆರ್ಸಿಬಿ ತಂಡವನ್ನು ಸೋಲಿಸಿರುವ ವರುಣ್ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಗೆಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಭವಿಷ್ಯದಲ್ಲಿ ಭಾರತ ತಂಡದ ಮ್ಯಾಚ್ ವಿನ್ನರ್ ಆಗಿ, ಮುಂದಿನ ದಿನಗಳಲ್ಲಿ ಪ್ರಮುಖ ಆಟಗಾರನಾಗಿ ಮಿಂಚಲಿದ್ದಾರೆ ಎಂದು ಹೇಳಿದರು.

ಅದ್ಭುತ ಪ್ರದರ್ಶನದ ಮೂಲಕ ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೂರು ವಿಕೇಟ್ ಜೊತೆ ಒಂದು ಕ್ಯಾಚ್ ಸಹ ಪಡೆದ ವರುಣ್ ಚಕ್ರವರ್ತಿ, ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟಿ 20 ಕಪ್ ಗೆ ಆಡುವ ಬಳಗದಲ್ಲಿ ಪರೋಕ್ಷವಾಗಿ ಸ್ಥಾನ ಪಡೆದರು. ಮುಂದಿನ ಪಂದ್ಯವನ್ನ ಆರ್ಸಿಬಿ ತಂಡ ಸಿ.ಎಸ್.ಕೆ ವಿರುದ್ದ ಆಡಲಿದ್ದು, ಆ ಪಂದ್ಯವನ್ನಾದರೂ ಜಯಿಸುವ ಮೂಲಕ ಅಭಿಮಾನಿಗಳ ಆಸೆ ಈಡೇರತ್ತದೆಯೋ ಎಂಬುದನ್ನ ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav