ಎಬಿಡಿ ರವರನ್ನು ಮೊದಲನೇ ಎಸೆತದಲ್ಲಿ ಔಟ್ ಮಾಡಲು ರಸೆಲ್ ಎಸೆತ ಯಾರ್ಕರ್ ಹೇಗಿದೆ ಗೊತ್ತಾ?? ವಿಡಿಯೋ ನೋಡಿದ್ದೀರಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆ ನಡೆದ ಎರಡನೇ ಐಪಿಎಲ್ ಇನಿಂಗ್ಸ್ನಲ್ಲಿ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಕೆಕೆಆರ್ ತಂಡದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ಆರ್ಸಿಬಿ ತಂಡ ಗೆಲ್ಲುವ ಎಲ್ಲಾ ಸಾಧ್ಯತೆಯಿತ್ತು ಯಾಕೆಂದರೆ ಈ ಮೈದಾನದಲ್ಲಿ ಬಹುತೇಕ ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಕಂಡಿದೆ. ಅದೇ ಕಾರಣಕ್ಕಾಗಿ ಟಾಸ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಆದರೆ ಕೆಲವೇ ಕೆಲವು ಓವರ್ ಗಳಲ್ಲಿ ಕೊಹ್ಲಿ ರವರ ಲೆಕ್ಕಾಚಾರಗಳನ್ನು ಮಕಾಡೆ ಮಲಗಿದವು, ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದಾಗ ಆರ್ಸಿಬಿ ತಂಡ ಒಟ್ಟಾರೆಯಾಗಿ ಕೇವಲ 92 ರನ್ ಕಲೆ ಹಾಕುವುದರಲ್ಲಿ ಮಾತ್ರ ಯಶಸ್ವಿಯಾಗಿತ್ತು, ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನು ಕೂಡ ದಾಟಲಿಲ್ಲ ಅದರಲ್ಲಿಯೂ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ಅವರು ಮೊದಲನೇ ಬಾಲಿನಲ್ಲಿ ಔಟ್ ಆಗುವ ಮೂಲಕ ಆರ್ಸಿಬಿ ತಂಡಕ್ಕೆ ಸೋಲು ಖಚಿತ ಪಡಿಸಿದರು.

ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಗೆ ತಮ್ಮ ಆಟವನ್ನು ಸೀಮಿತಗೊಳಿಸಿದರೆ, ಮ್ಯಾಕ್ಸ್ವೆಲ್ ರವರು 10 ರನ್ ಗಳಿಸುವಷ್ಟರಲ್ಲಿ ತಾಳ್ಮೆ ಕಳೆದುಕೊಂಡು ಪೆವಿಲಿಯನ್ ಸೇರಿಕೊಂಡರು, ಇನ್ನೂ ಯುವ ಆಟಗಾರರು ಒಂದಿಷ್ಟು ರನ್ ಕಲೆಹಾಕುವ ಮೂಲಕ ಹೇಗೋ 92 ರನ್ನ ಗಳಿಸುವುದರಲ್ಲಿ ಆರ್ಸಿಬಿ ಯಶಸ್ವಿಯಾಗಿತ್ತು. ಆದರೆ ಈ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡ ಕೇವಲ ಹತ್ತು ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪುವುದರಲ್ಲಿ ಯಶಸ್ವಿಯಾಯಿತು. ಮೊದಲನೇ ಬಾಲ್ ನಲ್ಲಿ ಎಬಿ ಡಿವಿಲಿಯರ್ಸ್ ರವರನ್ನು ಔಟ್ ಮಾಡಲು ಆಂಡ್ರೆ ರಸೆಲ್ ರವರು ಮಾಡಿದ ಯಾರ್ಕರ್ ಬಾಲ್ ಇದೀಗ ವೈರಲ್ ಆಗುತ್ತಿದೆ, ವಿಡಿಯೋ ಕೆಳಗಡೆ ಇದ್ದು ನೀವು ಕೂಡ ನೋಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav