ಬಹು ನಿರೀಕ್ಷೆಯ ಸೀತಾ ಪಾತ್ರಕ್ಕೆ ನಟಿ ಕಂಗನಾ ರಣಾವತ್ ಸಾಂಭಾವನೆ ಎಷ್ಟು ಗೊತ್ತೆ?? ಯಾವ ಟಾಪ್ ನಟರಿಗೂ ಕಡಿಮೆ ಇಲ್ಲ.

ನಮಸ್ಕಾರ ಸ್ನೇಹಿತರೇ ಕರೊನಾ ಕಾರಣದಿಂದಾಗಿ ಚಿತ್ರಮಂದಿರಗಳು ಹೆಚ್ಚು ಕಡಿಮೆ ಮುಚ್ಚಿವೆ. ಹಾಗಾಗಿ ಯಾವ ಚಿತ್ರ ನಿರ್ಮಾಣವಾದರೂ ಅದು ತೆರೆಕಾಣುವುದಕ್ಕೆ ಸಾಕಷ್ಟು ವಿಳಂಬವಾಗುತ್ತಿದೆ. ಹಾಗಾಗಿ ಒಂದರ ಹಿಂದೆ ಒಂದರಂತೆ ಸಿನಿಮಾಗಳ ಟೀಸರ್ ಗಳು ರಿಲಿಸ್ ಆದರೂ ಚಿತ್ರಮಾತ್ರ ತೆರೆಕಾಣುತ್ತಿಲ್ಲ. ಹಾಗಾಗಿ ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ನ ವರೆಗೆ ಸುಮಾರು ಚಿತ್ರಗಳು ಇನ್ನು ಬಿಡುಗಡೆಗೆ ಕಾಯ್ತಾ ಇವೆ. ಇನ್ನೂ ಕೆಲವು ಚಿತ್ರಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದ್ದು ಸಿನಿಪ್ರಿಯರಿಗೆ ತುಸು ಸಮಾಧಾನ ಎನ್ನಬಹುದು.

ಇನ್ನು ಬಹುನಿರೀಕ್ಷೆಯನ್ನು ಹುಟ್ಟುಹಾಕಿರುವ ಒಂದು ಸಿನಿಮಾ ಸೀತಾ ದಿ ಇನ್ಲಾರ್ನೇಷನ್. ಇದರಲ್ಲಿ ಸೀತಾ ಆಗಿ ಕಾಣಿಸಿಕೊಳ್ಳುತ್ತಿರುವುದು ನಟಿ ಕಂಗನಾ ರಣಾವತ್. ಇವರು ಇತ್ತೀಚಿಗೆ ಯುರೋಪ್ ನಲ್ಲಿ ಧಾಡಕ್ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದಾರೆ ಇದರ ಜೊತೆಗೆ ತೇಜಸ್, ಮಣಿಕರ್ಣಿಕಾ ರಿಟರ್ನ್ಸ್ ಚಿತ್ರ ನಟನೆಯಲ್ಲಿಯೂ ಬ್ಯುಸಿಯಾಗಿದ್ದಾರೆ ನಟಿ ಕಂಗನಾ. ಇನು ಜಯಲಲಿತಾ ಅಮ್ಮನ ಬಯೋಪಿಕ್ ನಲ್ಲಿ ಕಂಗನಾ ನಟಿಸಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಇನ್ನು ಇಷ್ಟೆಲ್ಲ ಸದ್ದು ಮಾಡುತ್ತಿರುವ ಕಂಗನಾ ರವರು ಇದೀಗ ಸೀತ ಪಾತ್ರಕ್ಕೆ ಪಡೆದುಕೊಂಡ ಸಂಭಾವನೆ ಕುರಿತು ಸುದ್ದಿಯಲ್ಲಿದ್ದಾರೆ. ಹೌದು ಸ್ನೇಹಿತರೇ ಇದೀಗ ಸೀತಾ ಪಾತ್ರಕ್ಕೆ ಕಂಗನಾ ಪಡೆದುಕೊಂಡ ಸಂಭಾವನೆ ಬಗ್ಗೆ ಚರ್ಚೆಗಳು ಏರ್ಪಟ್ಟಿವೆ. ಕಂಗನಾ ಈ ಚಿತ್ರಕ್ಕೆ 32 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಅವರಿಗೆ ಇಷ್ಟು ಕೊಡುವ ಅಗತ್ಯವಿತ್ತೇ ಎಂಬುದು ಕೆಲವರ ಪ್ರಶ್ನೆ. ಇದು ಸಿನಿಮಾ ರಂಗದಲ್ಲಿಯೇ ಒಬ್ಬ ನಟಿ ಇಷ್ಟು ಹೆಚ್ಚು ಸಂಭಾವನೆ ಪಡೆಯುತ್ತಿರುವುದು. ಹಾಗಾಗಿ ಸಿನಿಮಾ ನಿರ್ಮಾಪಕರನ್ನು ಪ್ರಶ್ನಿಸುತ್ತಿದ್ದಾರೆ ಜನ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav