ಮತ್ತೆ ಸಂಭಾವನೆ ಏರಿಸಿಕೊಂಡ ಅನುಶ್ರೀ, ಹೊಸ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಒಂದು ಎಪಿಸೋಡಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಚಾನೆಲ್ಗಳಲ್ಲಿ ದಾರವಾಹಿಗಳು ಹಾಗೂ ಸಿನಿಮಾಗಳು ಹೇಗೆ ಜನಪ್ರಿಯತೆಯನ್ನು ಪಡೆದಿದ್ದಾವೋ ಹಾಗೆಯೇ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಕೂಡ ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲಿ ಒಂದು ಪ್ರಮುಖವಾದ ಕಾರ್ಯಕ್ರಮವೆಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ. ಹೌದು ಸ್ನೇಹಿತರೆ ಈ ಸರಿಗಮಪ ಕಾರ್ಯಕ್ರಮದಲ್ಲಿ ನಾಡಿಗೆ ಎಷ್ಟೋ ಜನ ಅತ್ಯದ್ಭುತ ಸಂಗೀತ ಪ್ರತಿಭೆಗಳು ಪರಿಚಯವಾಗಿದೆ ಎಂದರೆ ತಪ್ಪಾಗಲಾರದು.

ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಸಂಜಿತ್ ಹೆಗಡೆ ಈಗಾಗಲೇ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲಿ ಕೂಡ ಅತ್ಯಂತ ಬಹುಬೇಡಿಕೆ ಗಾಯಕ ಎಂದರೆ ತಪ್ಪಾಗಲಾರದು. ಈಗ ಇದೇ ಸರಿಗಮಪ ಸಾಕಷ್ಟು ಸೀಸನ್ ಗಳನ್ನು ಕಂಡು ಯಶಸ್ವಿಯಾಗಿ ಕನ್ನಡಿಗರ ಮನ ಮಾನಸದಲ್ಲಿ ಹರಡಿದೆ. ಇನ್ನು ಈಗ ಜೀ ಕನ್ನಡ ವಾಹಿನಿ ಈಗಾಗಲೇ ತಮ್ಮ ಸಂಗೀತದ ಚಾತುರ್ಯತೆ ಯನ್ನು ಸಾಬೀತು ಪಡಿಸಿರುವ 36 ಜನ ಗಾಯಕರನ್ನು ಒಳಗೊಂಡಿರುವ ಸರಿಗಮಪ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ಈ ಶನಿವಾರದಿಂದ ಆರಂಭಿಸಲಿದೆ.

ಇದರ ಕುರಿತಂತೆ ಜೀ ಕನ್ನಡ ವಾಹಿನಿ ತನ್ನ ಚಾನೆಲ್ನಲ್ಲಿ ಹಲವಾರು ಪ್ರೋಮೋ ಗಳನ್ನು ಕೂಡ ಬಿಡುಗಡೆ ಮಾಡಿದ್ದು ಕಾರ್ಯಕ್ರಮದ ಕುರಿತಂತೆ. ಜನಪ್ರಿಯತೆ ಹೆಚ್ಚಾಗತೊಡಗಿದೆ. ಇನ್ನು ಈ ಸರಿಗಮಪ ಕಾರ್ಯಕ್ರಮವನ್ನು ಮೊದಲಿನಿಂದಲೂ ಅನುಶ್ರೀ ಅವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಎಪಿಸೋಡಿಗೆ 80 ಸಾವಿರ ರೂಪಾಯಿ ಪಡೆಯುತ್ತಿದ್ದಂತಹ ಅನುಶ್ರೀ ಅವರು ಈ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಪ್ರತಿ ಎಪಿಸೋಡಿಗೆ 1.20 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ. ಇನ್ನು ತೀರ್ಪುಗಾರರಾಗಿ ಮಹಾಗುರುಗಳು ಹಂಸಲೇಖರವರು ವಿಜಯಪ್ರಕಾಶ್ ಹಾಗೂ ಅರ್ಜುನ್ ಜನ್ಯ ರವರು ಕಾಣಿಸಿಕೊಳ್ಳಲಿದ್ದಾರೆ. ನೀವು ಕೂಡ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದೀರಾ ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Post Author: Ravi Yadav