ಸಿನಿ ಪ್ರಿಯರು ಕಾದು ಕುಳಿತಿರುವ ಹಾಗೂ ಅತಿ ಹೆಚ್ಚು ಹೈಪ್ ನೀಡಲಾಗುತ್ತಿರುವ ಟಾಪ್ 10 ಬಹುನಿರೀಕ್ಷೆಯ ಸಿನಿಮಾಗಳು ಯಾವ್ಯಾವು ಗೊತ್ತೇ??
ಸಿನಿ ಪ್ರಿಯರು ಕಾದು ಕುಳಿತಿರುವ ಹಾಗೂ ಅತಿ ಹೆಚ್ಚು ಹೈಪ್ ನೀಡಲಾಗುತ್ತಿರುವ ಟಾಪ್ 10 ಬಹುನಿರೀಕ್ಷೆಯ ಸಿನಿಮಾಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿವೆ. ಬಾಹುಬಲಿ ಚಿತ್ರದಿಂದ ಪ್ರಾರಂಭವಾದಂತಹ ಈ ಒಳ್ಳೆಯ ಬೆಳವಣಿಗೆ ಈಗ ಕೆಜಿಎಫ್ ಚಿತ್ರದಲ್ಲಿ ಕೂಡ ಮುಂದುವರೆದಿದೆ. ಇಂದಿನ ವಿಚಾರದಲ್ಲಿ ನಾವು ಮುಂದಿನ ದಿನಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೊಂದಿರುವ ದಕ್ಷಿಣ ಭಾರತದ ಟಾಪ್ 10 ಚಿತ್ರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.
ಕುರುಪ್ ದುಲ್ಕರ್ ಸಲ್ಮಾನ್ ನಟನೆಯಲ್ಲಿ ಮೂಡಿಬರುತ್ತಿರುವ ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿರುವುದರಿಂದ ದುಲ್ಕರ್ ಸಲ್ಮಾನ್ ರವರು ಈ ಚಿತ್ರವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಲು ಯೋಜಿಸಿದ್ದಾರೆ.
ಅನ್ನಾತೆ ಭಾರತೀಯ ಚಿತ್ರರಂಗಕ್ಕೆ ಕ್ರೇಜ್ ಎಂಬ ಪದದ ಅರ್ಥವನ್ನು ಹೇಳಿ ಕೊಟ್ಟಂತಹ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ನಟನೆಯ ಅನ್ನಾತೆ ಚಿತ್ರ ಕೂಡ ಈ ಲಿಸ್ಟಿನಲ್ಲಿ ಇದೆ. ವಿಂಟೇಜ್ ರಜನಿಕಾಂತ ರವರನ್ನು ಈ ಚಿತ್ರದ ಮೂಲಕ ಕಾಣಲು ಪ್ರೇಕ್ಷಕರು ಕಾತರರಾಗಿದ್ದಾರೆ.
777 ಚಾರ್ಲ ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರ ಈಗಾಗಲೇ ಟೀಸರ್ರ್ ಹಾಗೂ ಹಾಡುಗಳಿಂದಾಗಿ ಸಾಕಷ್ಟು ಜನಮಾನಸವನ್ನು ಗೆದ್ದಿದೆ. ಇನ್ನು ಇದು ಪ್ಯಾನ್ ಇಂಡಿಯಾ ರಿಲೀಸ್ ನ್ನು ಕೂಡ ಕಾಣಲಿದೆ.
ವಾಲಿಮೈ & ಸರ್ಕಾರು ವಾರಿ ಪಾಟ ಒಂದು ತಮಿಳು ಚಿತ್ರವಾದರೆ ಇನ್ನೊಂದು ತೆಲುಗು ಚಿತ್ರ. ಅಜಿತ್ ಕುಮಾರ್ ನಟನೆಯ ವಾಲಿಮೈ ಚಿತ್ರ ಹಾಗೂ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಚಿತ್ರ ಇವೆರಡು ಕೂಡ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿದೆ. ಈಗಾಗಲೇ ಪ್ರೇಕ್ಷಕರು ಕೂಡ ಇವುಗಳನ್ನು ನೋಡಲು ಕಾತರರಾಗಿ ಕುಳಿತಿದ್ದಾರೆ.
ಮರಕ್ಕರ್ ಬಹು ತಾರಾಗಣವನ್ನು ಹೊಂದಿರುವ ಲಲೆಟ್ಟನ್ ಮೋಹನ್ ಲಾಲ್ ನಟನೆಯ ಬಾಲಿವುಡ್ ಚಿತ್ರ ವಾಗಿರುವ ಮರಕ್ಕರ್ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದು ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಕಾತರರಾಗಿದ್ದಾರೆ. ಕೇವಲ ಬಹು ತಾರಾಗಣ ಮಾತ್ರವಲ್ಲದೆ ದೊಡ್ಡ ಬಜೆಟ್ ನಲ್ಲಿ ಕೂಡ ಈ ಸಿನಿಮಾ ಮೂಡಿ ಬರುತ್ತಿದೆ.
ಸಲಾರ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹಾಗೂ ನ್ಯಾಷನಲ್ ಸ್ಟಾರ್ ಪ್ರಭಾಸ್ ರವರ ನಟನೆಯಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರಕ್ಕೆ ಈಗಾಗಲೇ ದೇಶ-ವಿದೇಶದಾದ್ಯಂತ ನಿರೀಕ್ಷೆಗಳ ಸರಮಾಲೆ ಹರಿದುಬರುತ್ತಿದೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ವಿಕ್ರಾಂತ್ ರೋಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ವಿಕ್ರಾಂತ್ ರೋಣ ಚಿತ್ರ ಈಗಾಗಲೇ ಸೂಪರ್ ಟೀಸರ್ ಮೂಲಕ ದೇಶದಾದ್ಯಂತ ಸಿನಿಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ. ಇನ್ನು ಈ ಚಿತ್ರ 14 ಭಾಷೆಗಳಲ್ಲಿ 50ಕ್ಕೂ ಅಧಿಕ ದೇಶಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಪುಷ್ಪ, ರಂಗಸ್ಥಳಂ ನಂತರ ಸುಕುಮಾರ್ ನಿರ್ದೇಶನದಲ್ಲಿ ಹಾಗೂ ಅಲಾ ವೈಕುಂಠಪುರಮುಲೋ ಚಿತ್ರದ ಯಶಸ್ಸಿನ ನಂತರ ಅಲ್ಲು ಅರ್ಜುನ್ ಅವರು ಮೊದಲ ಬಾರಿಗೆ ಮಾಡುತ್ತಿರುವ ಸಿನಿಮಾ ಪುಷ್ಪ. ಈಗಾಗಲೇ ಟೀಚರ್ ಹಾಗೂ ಹಾಡಿನಿಂದ ಆಗಿ ಪರಭಾಷಿಗರ ಮನಸ್ಸನ್ನು ಕೂಡ ಗೆದ್ದಿರುವ ಈ ಚಿತ್ರ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುವುದು ಗ್ಯಾರಂಟಿ.
ಆರ್.ಆರ್.ಆರ್ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ನಿಜವಾಗಲೂ ಕೂಡ ಸದ್ದಾಗುತ್ತಿರುವುದು ನಿರ್ದೇಶಕ ರಾಜಮೌಳಿಯವರ ಜನಪ್ರಿಯತೆಯಿಂದಾಗಿ. ಈಗಾಗಲೇ ಬಾಹುಬಲಿ ಚಿತ್ರದ ಮೂಲಕ ತನ್ನನ್ನು ತಾನು ಸಾಬೀತುಪಡಿಸಿ ಕೊಂಡಿರುವ ನಿರ್ದೇಶಕ ಈ ಚಿತ್ರದ ಮೂಲಕ ಈಗಾಗಲೇ ಬಿಡುಗಡೆ ಮುನ್ನವೇ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಇದು ರಾಜಮೌಳಿ ಸಿನಿಮಾದ ಗತ್ತು.
ಕೆಜಿಎಫ್ ಚಾಪ್ಟರ್ 2 ಈಗಾಗಲೇ ಕೆಜಿಎಫ್ ಬಿಡುಗಡೆಯಾಗಿ ಎಲ್ಲಾ ಭಾಷೆಯ ಜನರ ಮೆಚ್ಚುಗೆಯನ್ನು ಗಳಿಸಿಕೊಂಡು ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿ ಕಾಣಿಸಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಯೋಜನೆಯನ್ನು ಹಾಕಿಕೊಂಡಿದೆ. ಬಹುತೇಕ ಎಲ್ಲ ಭಾಷೆಯ ಕಲಾವಿದರು ಈ ಚಿತ್ರದಲ್ಲಿ ಇರುವುದರಿಂದಾಗಿ ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಈ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.