ನಾಲ್ಕು ದೊಡ್ಡ ಕ್ರಿಶ್ಚಿಯನ್ ಮಶಿನರಿ ಗಳಿಗೆ ಶಾಕ್, ದಿಟ್ಟ ನಿರ್ಧಾರ ತೆಗೆದುಕೊಂಡ ಅಮಿತ್ ಶಾ ಏನು ಗೊತ್ತಾ??

ನಾಲ್ಕು ದೊಡ್ಡ ಕ್ರಿಶ್ಚಿಯನ್ ಮಶಿನರಿ ಗಳಿಗೆ ಶಾಕ್, ದಿಟ್ಟ ನಿರ್ಧಾರ ತೆಗೆದುಕೊಂಡ ಅಮಿತ್ ಶಾ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಕಷ್ಟು ಬಾರಿ ವಿದೇಶಗಳಿಂದ ಎನ್ಜಿಒ ಗಳ ಮೂಲಕ ಲಕ್ಷಾಂತರ ಕೋಟಿ ಹರಿದು ಬರುತ್ತಿದ್ದು ಈ ಹಣದಲ್ಲಿ ಜನರಿಗೆ ಆಮಿಷ ನೀಡಿ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಇದಕ್ಕಾಗಿ ಈಗಾಗಲೇ ವಿದೇಶದಿಂದ ಲಕ್ಷಾಂತರ ಕೋಟಿ ಹಣ ಭಾರತಕ್ಕೆ ಅರಿದು ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಇನ್ನು ಇತ್ತೀಚೆಗೆ ಕೊರೊನ ಸಮಯದಲ್ಲಿ ಕೂಡ ಜನರ ಕಷ್ಟವನ್ನು ಬಳಸಿಕೊಂಡು ಅವರಿಗೆ ಹಣದ ಆಮಿಷ ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಬದಲಾಯಿಸಲಾಗುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ, ಇಂತಹ ಸಮಯದಲ್ಲಿ ಇದರ ಕುರಿತು ಸೂಕ್ತವಾಗಿ ಗಮನ ಹರಿಸಿರುವ ಅಮಿತ್ ಶಾ ರವರು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಮತ್ತೊಂದು ಕಠಿಣ ಕ್ರಮ ಕೈಗೊಂಡಿದ್ದು ಬಹುದೊಡ್ಡ ಮಿಷನರಿಗಳ ಹಣಕ್ಕೆ ಬ್ರೇಕ್ ಹಾಕಲಾಗುತ್ತಿದೆ.

ಗೃಹ ಸಚಿವಾಲಯ ಈಗಾಗಲೇ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದು ಇದೀಗ ವಿದೇಶದಿಂದ ಲಕ್ಷಾಂತರ ಕೋಟಿ ಹರಿದು ಬರುತ್ತಿರುವ ಎನ್‌ಜಿಒ ಗಳಿಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದು, ನಾಲ್ಕು ಪ್ರಮುಖ ಎನ್ಜಿಓಗಳು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ ಲೈಸೆನ್ಸನ್ನು ಅಮಾನತುಗೊಳಿಸಿದೆ. ಈ ನಾಲ್ಕು ಎನ್‌ಜಿಒ ಇನ್ನು ಮುಂದೆ ವಿದೇಶದಿಂದ ಒಂದು ರೂಪಾಯಿ ದೇಣಿಗೆಯನ್ನೂ ಕೂಡ ಪಡೆದು ಕೊಳ್ಳಲು ಸಾಧ್ಯವಿಲ್ಲ. ಈ ನಾಲ್ಕು ಎನ್‌ಜಿಒ ವಿದೇಶದಿಂದ ಹಣ ಪಡೆದುಕೊಂಡು ಇಲ್ಲಿನ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ತಿಳಿದು ಬಂದ ಕಾರಣ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.