ಸಾಲು ಸಾಲು ಹಬ್ಬಗಳು ಬರುವಾಗ ಕೊನೆಗೂ ಜನರಿಗೆ ಸಿಹಿ ಸುದ್ದಿ ಹೊತ್ತು ತಂದ ಕೇಂದ್ರ, ತುಸು ನೆಮ್ಮದಿ.

ಸಾಲು ಸಾಲು ಹಬ್ಬಗಳು ಬರುವಾಗ ಕೊನೆಗೂ ಜನರಿಗೆ ಸಿಹಿ ಸುದ್ದಿ ಹೊತ್ತು ತಂದ ಕೇಂದ್ರ, ತುಸು ನೆಮ್ಮದಿ.

ನಮಸ್ಕಾರ ಸ್ನೇಹಿತರೇ ಆಷಾಢ ಮುಗಿದು ಭಾರತ ಬಂತೆಂದರೆ, ಭಾರತದಂತಹ ಸಾಂಪ್ರದಾಯಕ ದೇಶಗಳಲ್ಲಿ ಹಬ್ಬಗಳ, ಆಚರಣೆಗಳ ದಂಡು ಜೋರಾಗಿ ಶುರುವಾಗುತ್ತವೆ. ಸಾಲು ಸಾಲು ಹಬ್ಬಗಳು, ಆಚರಣೆಗಳು, ಶುರುವಾಗುತ್ತವೆ. ಹಬ್ಬಗಳ ಸೀಜನ್ ಆದ ಕಾರಣ ಸಹಜವಾಗಿಯೇ ಕುಟುಂಬದ ಖರ್ಚು ಕೊಂಚ ಜಾಸ್ತಿಯಾಗಿಬಿಡುತ್ತದೆ. ಆದರೇ ಈ ಭಾರಿ ವಿಪರೀತ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದರು. ಪೆಟ್ರೋಲ್,ಡಿಸೇಲ್, ಅಡುಗೆ ಅನಿಲದ ಜೊತೆ ದಿನನಿತ್ಯ ಬಳಸುವ ಅಡುಗೆ ಎಣ್ಣೆಯ ಬೆಲೆಗಳು ಸಹ ವೀಪರೀತ ಏರಿದ್ದವು. ಇದು ಜನಸಾಮಾನ್ಯ ಕಣ್ಣನ್ನು ಕೆಂಪಗಾಗಿಸಿತ್ತು.

ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ ಸರ್ಕಾರ ಕೆಲವು ಬಿಗಿ ಕ್ರಮಗಳನ್ನು ಕೈಗೊಂಡು ಕೊನೆಗೂ ಜನರ ಅತಿ ಅವಶ್ಯಕವಾಗಿದ್ದ ಅಡುಗೆ ಎಣ್ಣೆಯ ಬೆಲೆಯನ್ನ ನಿಯಂತ್ರಿಸುವುದಕ್ಕೆ ಮುಂದಾಗಿದೆ. ಹೌದು ಈ ಬಗ್ಗೆ ಖುದ್ದು ಸಭೆ ನಡೆಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನ ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಶೇಕಡಾ 30 ರಿಂದ ಶೇಕಡಾ 24.5 ಕ್ಕೆ ಇಳಿಸಿದ್ದಾರೆ. ಅಂದರೇ ಶೇ 5.5 ಕ್ಕೆ ಇಳಿಸಿದ್ದಾರೆ. ಇದರಿಂದ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಬೆಲೆ ಕಡಿಮೆಯಾಗಲಿದೆ.

ಇದು ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿಸಿದ್ದು ಮುಕ್ತ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಕೊಂಚ ಇಳಿಮುಖದತ್ತ ಸಾಗುತ್ತಿವೆ. ಗಣೇಶ ಚತುರ್ಥಿ, ನಂತರ ನವರಾತ್ರಿ, ದಸರಾ, ದೀಪಾವಳಿ, ಕಾರ್ತೀಕ ಮಾಸ, ಕ್ರಿಸ್ ಮಸ್ ಹೀಗೆ ಮುಂದಿನ ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದವು. ಪೆಟ್ರೋಲ್,ಡಿಸೇಲ್ ರೇಟ್ ಜೊತೆ ದಿನನಿತ್ಯ ಬಳಸುತ್ತಿದ್ದ ಅಡುಗೆ ಎಣ್ಣೆಯ ಬೆಲೆಗಳು ಏರಿದ್ದವು. ಇದು ಜನಸಾಮಾನ್ಯರ ಕಣ್ಣು ಕೆಂಪಗಾಗುವಂತೆ ಮಾಡಿದ್ದವು. ಇದನ್ನ ಮನಗಂಡ ಸರ್ಕಾರ ಕೊನೆಗೂ ಬೆಲೆ ಏರಿಕೆಯನ್ನು ನಿಯಂತ್ರಿಸಿದೆ. ಪೆಟ್ರೋಲ್,ಡಿಸೇಲ್, ಅಡುಗೆ ಅನಿಲದ ಬೆಲೆ ಸಹ ನಿಯಂತ್ರಿಸಿ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.