ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಭಿನ್ನಮತ, ಸಿದ್ದು ಗೆ ಬ್ರೇಕ್ ಹಾಕಲು ಮುಂದಾದ ಡಿಕೆಶಿ, ಮಾಡುತ್ತಿರುವುದೇನು ಗೊತ್ತೇ??
ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಭಿನ್ನಮತ, ಸಿದ್ದು ಗೆ ಬ್ರೇಕ್ ಹಾಕಲು ಮುಂದಾದ ಡಿಕೆಶಿ, ಮಾಡುತ್ತಿರುವುದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ದೇಶದಲ್ಲಿ ಕಾಂಗ್ರೇಸ್ ಪಕ್ಷದ ಗತಿ ಪಾತಾಳಕ್ಕೆ ಕುಸಿಯುತ್ತಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೇಸ್ ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಯಿದೆಯಾದರೂ, ವಿರೋಧ ಪಕ್ಷವಾಗಿ ಹೇಳಿಕೊಳ್ಳುವಂತಹ ಕೆಲಸ ಮಾಡುತ್ತಿಲ್ಲ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೋಡೆತ್ತಿನ ರೀತಿ ಸಾಗಬೇಕಿತ್ತು. ಆದರೇ ಇಬ್ಬರ ನಡುವಿನ ಶೀತಲ ಸಮರ ಮಾತ್ರ ಇನ್ನು ಮುಗಿಯುತ್ತಿಲ್ಲ. ಅದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ.
ಇತ್ತಿಚೆಗಷ್ಟೇ ಸಿದ್ದರಾಮಯ್ಯ ಅಹಿಂದ ಅಸ್ತ್ರ ಪ್ರಯೋಗಿಸಿದ್ದರು. ಸಿದ್ದು ಮೊದಲಿನಿಂದಲೂ ಪ್ರಯೋಗ ಮಾಡಿಕೊಂಡು ಬಂದಿದ್ದ ಅಹಿಂದ ಸೂತ್ರವನ್ನೇ ಮುಂದಿನ ಚುನಾವಣೆಗೂ ಮುಂದುವರೆಸಿಕೊಳ್ಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅದರಲ್ಲಿ ಯಶಸ್ವಿಯಾದರೇ,ಮುಂದಿನ ಚುನಾವಣೆಯ ಗೆಲುವಿನ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಿಗುತ್ತದೆ ಎಂಬುದು ಡಿಕೆಶಿಯವರ ಭಯಕ್ಕೆ ಕಾರಣವಂತೆ. ಹಾಗಾಗಿ ಅಹಿಂದ ಮತದಾರರನ್ನೇ ಟಾರ್ಗೇಟ್ ಮಾಡಿರುವ ಡಿಕೆಶಿ ಈಗ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡಲು ಹೊಸ ಯೋಜನೆಯೊಂದನ್ನ ಹಾಕಿಕೊಂಡಿದ್ದಾರಂತೆ.
ಇತ್ತಿಚೆಗಷ್ಟೇ ಪ್ರಗತಿಪರ ಚಿಂತಕ ಸಿ.ಎಸ್.ದ್ವಾರಕನಾಥ್ ರವರನ್ನ ಡಿ.ಕೆ.ಶಿವಕುಮಾರ್ ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸಮ್ಮುಖದಲ್ಲೇ ದ್ವಾರಕನಾಥ್ ಪಕ್ಷಕ್ಕೆ ಸೇರಿದ್ದರು. ಈಗ ದ್ವಾರಕನಾಥ್ ರನ್ನು ಬಳಸಿಕೊಂಡು ಡಿ.ಕೆ.ಶಿವಕುಮಾರ್ ರವರು , ಈಗ ತಾನೇ ಹೊಸದಾಗಿ ಸಂಘಟನೆಗೊಂಡಿರುವ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮೂಲಕ ಸಂವಾದ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿದ್ದಾರೆ. ಈ ಮೂಲಕ ಸದಾ ಅಹಿಂದ ಜಪ ಮಾಡುವ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಸಂವಾದದ ಮೂಲಕವೇ ಟಾಂಗ್ ನೀಡಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದ ಮಧ್ಯೆ ಕೂಸು ಬಡವಾಯ್ತು ಎನ್ನುವ ರೀತಿ, ಸಿದ್ದು – ಡಿಕೆಶಿ ನಡುವಿನ ಜಗಳದಲ್ಲಿ ಕಾಂಗ್ರೇಸ್ ಪಕ್ಷ ಹಾಗೂ ಕಾರ್ಯಕರ್ತರು ಬಡವಾಗದಿರಲಿ ಎಂಬುದು ಕಾಂಗ್ರೇಸ್ ಕಾರ್ಯಕರ್ತರ ಆಶಯವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.