ಭಾರತ ತಂಡವನ್ನು ತಂಡವನ್ನು ಟೀಕಿಸುತ್ತಿರುವ ಮುಂಬೈ ಲಾಬಿಗಳಿಗೆ ಠಕ್ಕರ್ ನೀಡಿದ ಸೆಹ್ವಾಗ್, ಹೇಳಿದ್ದೇನು ಗೊತ್ತೇ??
ಭಾರತ ತಂಡವನ್ನು ತಂಡವನ್ನು ಟೀಕಿಸುತ್ತಿರುವ ಮುಂಬೈ ಲಾಬಿಗಳಿಗೆ ಠಕ್ಕರ್ ನೀಡಿದ ಸೆಹ್ವಾಗ್, ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ವಿರೇಂದ್ರ ಸೆಹ್ವಾಗ್ ಭಾರತ ಕಂಡ ಅತ್ಯಂತ ಶ್ರೇಷ್ಠ ಬ್ಯಾಟ್ಸಮನ್. ನಜಾಫಘಡ್ ದ ನವಾಬ ಎಂದೇ ಕರೆಸಿಕೊಳ್ಳುತ್ತಿದ್ದ ಸೆಹ್ವಾಗ್ ರನ್ನ ಸಿಡಿಲಮರಿ ಸೆಹ್ವಾಗ್ ಎಂದೇ ಕರೆಯುತ್ತಿದ್ದರು. ಮೊದಮೊದಲು ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಬಂದಿದ್ದ ಸೆಹ್ವಾಗ್ ನಂತರದ ದಿನಗಳಲ್ಲಿ ಆರಂಭಿಕ ಬ್ಯಾಟ್ಸಮನ್ ಆಗಿ ಬಡ್ತಿ ಪಡೆದರು. ಡ್ಯಾಶಿಂಗ್ ಓಪನರ್ ಎಂದೇ ಪ್ರಸಿದ್ದಿಯಾದ ಸೆಹ್ವಾಗ್ ಭಾರತ ಕ್ರಿಕೇಟ್ ತಂಡದ ಅವಿಭಾಜ್ಯ ಅಂಗವಾದರು. ಇತ್ತೀಚಿನ ದಿನಗಳಲ್ಲಿ ಹಿಂದಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಿರೇಂದ್ರ ಸೆಹ್ವಾಗ್ ನಿನ್ನೆಯ ದಿನ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಸಂದರ್ಭದಲ್ಲಿ ತಾವು ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಆದ ಒಂದು ಘಟನೆಯನ್ನ ಹಂಚಿಕೊಂಡಿದ್ದಾರೆ.
1999ರಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪೆಪ್ಸಿ ಕಪ್ ನಲ್ಲಿ ವಿರೇಂದ್ರ ಸೆಹ್ವಾಗ್ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರು. ಪಾಕಿಸ್ತಾನದ ವಿರುದ್ದದ ಆ ಪಂದ್ಯ ಬಹಳ ರೋಚಕತೆಗೆ ಸಾಕ್ಷಿಯಾಗಿತ್ತು. ಆದರೇ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ವಿರೇಂದ್ರ ಸೆಹ್ವಾಗ್ ಗೆ ಪಾಕಿಸ್ತಾನದ ಆಟಗಾರರಾದ ಶಾಹೀದ್ ಅಫ್ರಿದಿ, ಶೋಯೆಬ್ ಅಖ್ತರ್, ಮಹಮದ್ ಯೂಸೂಫ್ ಸೇರಿ ಎಲ್ಲರೂ ಕೆಟ್ಟ ಕೆಟ್ಟ ಪದಗಳಿಂದ ನಿಂದಿಸಲು ಶುರು ಮಾಡಿದರಂತೆ. ಎರಡು ಎಸೆತ ಎದುರಿಸಿ, ಕೇವಲ ಒಂದು ರನ್ ಗಳಿಸಿ ಔಟಾಗಿದ್ದರಂತೆ.
ಆದರೇ ಆ ಪಾಕ್ ಆಟಗಾರರು ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ದನ್ನ ನಾನು ಎಂದಿಗೂ ಮರೆಯಲಿಲ್ಲ. ಮುಂದೆ ಅದೇ ಪಾಕಿಸ್ತಾನದ ವಿರುದ್ದ ಮುಲ್ತಾನ್ ಟೆಸ್ಟ್ ನಲ್ಲಿ ತ್ರಿಶತಕಗಳಿಸಿ ಸೇಡು ತೀರಿಸಿಕೊಂಡೆ. ವಿಶ್ವಕಪ್ ನಲ್ಲಿಯೂ ಸಹ ಶೊಯೇಬ್ ಅಖ್ತರ್ ಗೆ ಥರ್ಡ್ ಮ್ಯಾನ್ ನಲ್ಲಿ ಸಿಕ್ಸರ್ ಗಟ್ಟಿದೆ. ಪಾಕಿಸ್ತಾನದ ನೆಲದಲ್ಲಿಯೇ ಪಾಕಿಸ್ತಾನದ ವಿರುದ್ದ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದಿದ್ದೆವು ಎಂದು ನೆನಪು ಹಂಚಿಕೊಂಡರು. ಹೊಸ ಆಟಗಾರರಿಗೆ ಹಿರಿಯ ಆಟಗಾರರು ಧೈರ್ಯ ತುಂಬಿ, ಉಪಯುಕ್ತ ಸಲಹೆಗಳನ್ನ ನೀಡಬೇಕೆ ಹೊರತು, ಅವರ ಆತ್ಮವಿಶ್ವಾಸ ಕುಂದುವಂತಹ ಕೆಲಸಗಳನ್ನು ಎಂದಿಗೂ ಮಾಡಬಾರದು ಎಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ರ ಈ ಹೇಳಿಕೆಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.