ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಪತ್ತೆಯಾಗಿದ್ದ ಹಳ್ಳಿಮೇಷ್ಟು ಕಪ್ಪೆರಾಯ ಈಗ ಹೇಗಿದ್ದಾರೆ ಗೊತ್ತಾ?? ಇವರ ಹೆಂಡತಿ ಯಾರು ಗೊತ್ತೇ? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

5

ನಮಸ್ಕಾರ ಸ್ನೇಹಿತರೇ ಕೈಕಾಲು ಸರಿ ಇದ್ದರೂ ಕೂಡ ಕೆಲವರು ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯವಾಗಿರುವುದಿಲ್ಲ. ಆದರೆ ಕೆಲವರು ಮಾತ್ರ ದೇಹದಲ್ಲಿ ನ್ಯೂನ್ಯತೆಗಳು ಇದ್ದರೂ ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸುತ್ತಾರೆ. ಇಂದು ಅಂತಹ ವ್ಯಕ್ತಿಗಳು ಇಂದಿಗೂ ಕೂಡ ಕೆಲವರು ನಮ್ಮ ಮನಸ್ಸಿನ ಆಳದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಆಲ್ ಟೈಮ್ ಸೂಪರ್ ಹಿಟ್ ಚಿತ್ರ ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ನಟಿಸಿರುವ ಕಪ್ಪೆರಾಯ ಕುರಿತಂತೆ. ಹೌದು ಸ್ನೇಹಿತರೆ ಕಪ್ಪೆರಾಯ ಎಂದಾಕ್ಷಣ ನಿಮ್ಮ ಮುಖದಲ್ಲಿ ಒಮ್ಮೆ ನಗು ಮೂಡುವುದಂತೂ ಗ್ಯಾರಂಟಿ.

ಹಳ್ಳಿಮೇಷ್ಟ್ರು ಚಿತ್ರದಲ್ಲಿ ಕಪ್ಪೆರಾಯ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಶಾಲೆಯಲ್ಲಿ ಕಾಮಿಡಿ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಹೀರೋಯಿನ್ ಜೊತೆ ಕೂಡ ಮಕ್ಕಳ ಗ್ಯಾಂಗ್ ನಲ್ಲಿ ಇವರದೇ ಮುಂದಾಳತ್ವ. ಇನ್ನು ಇವರ ನಿಜವಾದ ಹೆಸರು ಪಕೀರಪ್ಪ ದೊಡ್ಡಮನಿ ಎಂದು. ಇವರು ಮೂಲತಹ ಹಾವೇರಿ ಜಿಲ್ಲೆಯವರು. ಇನ್ನು ಇವರು ಇರೋದು ಕೇವಲ ಎರಡುವರೆ ಅಡಿ ಮಾತ್ರ. ತಮ್ಮ ಕುಬ್ಜ ದೇಹದ ವಿಷಯವಾಗಿ ಅವರು ಸಾಕಷ್ಟು ಬೇಸರವಾಗಿದ್ದು ತಮ್ಮ ಜೀವನವನ್ನು ಕೂಡ ಕೊನೆಗಾಣಿಸುವ ಪ್ರಯತ್ನವನ್ನು ಕೂಡ ಮಾಡಿದ್ದರಂತೆ.

ನಂತರ ಧೈರ್ಯ ತೆಗೆದುಕೊಂಡು ಚಿತ್ರರಂಗದಲ್ಲಿ ನಟಿಸುವ ಹಾಗೂ ಎಲ್ಲರ ಮುಖದಲ್ಲಿ ನಗು ಮೂಡಿಸುವ ಕಾರ್ಯವನ್ನು ಮಾಡುತ್ತೇನೆ ಎಂಬ ಧೈರ್ಯವನ್ನು ತುಂಬಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇದರ ಫಲವಾಗಿ ಪಕೀರಪ್ಪ ರವರು ಕನ್ನಡ ಚಿತ್ರರಂಗದಲ್ಲಿ 16 ಹೆಚ್ಚಿನ ಚಿತ್ರಗಳಲ್ಲಿ ಬಣ್ಣ ಹಚ್ಚಿ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಾರೆ. ಇನ್ನು ಪಕೀರಪ್ಪ ನವರು ಇದೆ 2017 ರಲ್ಲಿ ಕವಿತಾ ಎನ್ನುವ ರೊಡನೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಕವಿತಾ ರವರು ಕೂಡ ಮೂರುವರೆ ಅಡಿ ಇರುವುದರಿಂದ ಇಬ್ಬರಿಗೂ ಕೂಡ ಎತ್ತರದ ಸಮಸ್ಯೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇನ್ನು ಇವರಿಬ್ಬರ ಮದುವೆ ಫೋಟೋವನ್ನು ಮೇಲುಗಡೆ ನೋಡಬಹುದಾಗಿದೆ.