ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಡೀ ಭಾರತದಲ್ಲಿಯೇ ಕಥೆಗಳ ಮೂಲಕ ಹೆಸರು ಮಾಡಿರುವ ರಾಜಮೌಳಿ ತಂದೆ ಅಣ್ಣಾವ್ರ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ??

6

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಕೂಡ ಬರಹಗಾರರಾಗಿ ಉತ್ತಮ ಕಥೆಗಳನ್ನು ಚಿತ್ರಗಳ ರೂಪದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಫುಲ್ ಮೀಲ್ಸ್ ಅನ್ನು ಉಣಬಡಿಸುವ ಮೂಲಕ ಬಹುಬೇಡಿಕೆಯ ಕಥೆ ಬರಹಗಾರರಾಗಿ ಮಿಂಚುತ್ತಿರುವವರು ಯಾರಿಗೊತ್ತೇ ಸ್ನೇಹಿತರೆ ಅವರೇ ನಮ್ಮ ವಿಜಯೇಂದ್ರ ಪ್ರಸಾದ್ ರವರು. ಹೌದು ಸ್ನೇಹಿತರೆ ವಿಜಯೇಂದ್ರ ಪ್ರಸಾದ್ ರವರು ಕೇವಲ ಬರಹಗಾರರು ಮಾತ್ರವಲ್ಲದೆ ಭಾರತ ಚಿತ್ರರಂಗ ಕಂಡಂತಹ ಅತ್ಯಂತ ಉತ್ಕೃಷ್ಟ ನಿರ್ದೇಶಕರಾಗಿರುವ ಎಸ್ ರಾಜಮೌಳಿ ಅವರ ತಂದೆ ಕೂಡ ಹೌದು.

ಇನ್ನು ವಿಜಯೇಂದ್ರ ಪ್ರಸಾದ್ ರವರು ಈಗಾಗಲೇ ತಮ್ಮ ಉನ್ನತ ವಾದಂತಹ ಕಥೆಗಳ ಮೂಲಕ ಈಗಾಗಲೇ ಛತ್ರಪತಿ ಬಾಹುಬಲಿ ಭಜರಂಗಿ ಭಾಯಿಜಾನ್ ಗಳಂತಹ ಹಲವಾರು ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ್ದಾರೆ. ಅದರಲ್ಲೂ ಅವರು ಬರೆದಿರುವ ಭಜರಂಗಿ ಭಾಯಿಜಾನ್ ಚಿತ್ರ ನಮ್ಮ ಕನ್ನಡಿಗರೇ ಆದಂತಹ ರಾಕ್ಲೈನ್ ವೆಂಕಟೇಶರವರು ನಿರ್ಮಾಣ ಮಾಡಿದ್ದಾರೆ. ಇನ್ನು ವಿಜಯೇಂದ್ರ ಪ್ರಸಾದ್ ರವರಿಗೆ ಇಷ್ಟೆಲ್ಲಾ ಸಾಧನೆ ಮಾಡಿದ್ದರು ಕೂಡ ಅವರ ಜೀವನದಲ್ಲಿ ಮಾಡಬೇಕಾದಂತ ಒಂದು ಸಾಧನೆಯನ್ನು ಮಾಡಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಹೌದು ಸ್ನೇಹಿತರು ಆ ಕೊರಗು ಏನೆಂಬುದನ್ನು ನಾವು ನಿಮಗೆ ಹೇಳುತ್ತೇನೆ ಬನ್ನಿ.

ಹೌದು ಸ್ನೇಹಿತರೇ ವಿಜಯೇಂದ್ರ ಪ್ರಸಾದ್ ರವರಿಗೆ ಕನ್ನಡ ಚಿತ್ರರಂಗದ ನಟಸಾರ್ವಭೌಮ ಕನ್ನಡ ಚಿತ್ರರಂಗದ ದೇವರೆಂದೇ ಖ್ಯಾತರಾಗಿರುವ ಅಣ್ಣಾವ್ರ ಜೊತೆಗೆ ಸಿನಿಮಾ ಮಾಡಲಿಲ್ಲ ಎಂಬ ವ್ಯಥೆ ಇನ್ನು ಕೂಡ ಅವರನ್ನು ಕಾಡುತ್ತಿದೆ. ಅವರ ಪುತ್ರನಾಗಿರುವ ಶಿವಣ್ಣನವರ ಕುರುಬನರಾಣಿ ಚಿತ್ರಕ್ಕೆ ಕಥೆಯನ್ನು ಬರೆದಿದ್ದು ಅಂತಹ ವಿಜಯೇಂದ್ರ ಪ್ರಸಾದ್ ರವರಿಗೆ ಒಮ್ಮೆ ಅಣ್ಣಾವ್ರನ್ನು ನೋಡುವ ಸೌಭಾಗ್ಯ ಸಿಕ್ಕಿತ್ತು. ಆಗಲೇ ಅವರ ವ್ಯಕ್ತಿತ್ವ ಹಾಗೂ ಕನ್ನಡಿಗರು ಅವರನ್ನು ದೇವರಂತೆ ಪೂಜಿಸುವುದು ಏಕೆ ಎಂಬುದು ಅರ್ಥವಾಗಿತ್ತು. ಹೀಗಾಗಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂಬ ಬೇಜಾರು ಇಂದು ಕೂಡ ಅವರನ್ನು ಕಾಡುತ್ತಿದೆ. ಇನ್ನು ಬಾಹುಬಲಿ ಚಿತ್ರ ಕೂಡ ಅಣ್ಣಾವ್ರು ನಟನೆಯ ಮಯೂರ ಚಿತ್ರದ ಸ್ಪೂರ್ತಿಯನ್ನು ಪಡೆಯಲಾಗಿದೆ.