ನಮಸ್ಕಾರ ಸ್ನೇಹಿತರೇ ಜೊತೆ ಜೊತೆಯಲಿ ಧಾರಾವಾಹಿ ಮೊದಲಿಗಿಂತಲೂ ಈಗ ಹೆಚ್ಚು ವೀಕ್ಷಣೆಯನ್ನು ಗಳಿಸಿಕೊಂಡಿದೆ. ಈ ಮೊದಲು ಹಲವಾರು ತಿರುವುಗಳನ್ನು ಕಂಡ ಈ ಧಾರಾವಾಹಿ ಕಥೆ ಕೆಲವು ಗೊಂದಲಗಳನ್ನೂ ಕೂಡ ಸೃಷ್ಟಿಮಾಡಿತ್ತು. ಹೀಗಾಗಿ ಇದರ ಟಿ ಆರ್ ಪಿ ರೇಟ್ ನಲ್ಲಿಯೂ ಕೂಡ ಸಾಕಷ್ಟು ಏರುಪೇರುಗಳಾಗುತ್ತಿತ್ತು. ಇನ್ನು ಅನು ಸಿರಿಮನೆ ಪಾತ್ರಧಾರಿ ಮೇಘನಾ ಶೆಟ್ಟಿ ಧಾರಾವಾಹಿ ಬಿಡುತ್ತಿದ್ದಾರೆ ಎನ್ನುವ ಮಾತುಗಳೂ ಕೂಡ ಸಮಸ್ಯೆ ಸೃಷ್ಟಿಸಿತ್ತು. ಆದರೆ ಈ ಎಲ್ಲಾ ಗೊಂದಲಗಳೂ ನಿವಾರಣೆಯಾಗಿ ’ಜೊತೆ ಜೊತೆಯಲಿ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.
ಹೌದು ಅನು ಹಾಗೂ ಆರ್ಯವರ್ಧನ್ ಅವರ ಮದುವೆ ಸನ್ನಿವೇಶವನ್ನು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಣ ಮಾಡಿದೆ ಧಾರಾವಾಹಿ ತಂಡ. ಆದರೆ ಈ ಮದುವೆಯ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಬೇಕೆಂದು ಧಾರಾವಾಹಿ ತಂದ ನಿರ್ಧರಿಸಿತ್ತು. ಸಾಕಷ್ಟು ಸೆಲಿಬ್ರೆಟಿಗಳ ಮದುವೆ ನಿಜ ಜೀವನದಲ್ಲಿ ವಿದೇಶಗಳಲ್ಲಿ ನೆರವೇರುವುದನ್ನು ನಾವು ನೋಡಿದ್ದೇವೆ. ಹಾಗೆಯೇ ಈ ದಾರಾವಾಹಿಯಲ್ಲೂ ಮದುವೆ ಸನ್ನಿವೇಶವೌ ವಿದೇಶದಲ್ಲಿ ಚಿತ್ರೀಕರಿಸಲು ನಿರ್ದೇಶಕ ಆರೂರು ಜಗದೀಶ್ ಹಾಗೂ ತಂಡ ನಿರ್ಧಾರ ಮಾಡಿತ್ತು. ಆದರೆ ಕರೋನಾ ಲಾಕ್ ಡೌನ್ ಕಾರಣದಿಂದಾಗಿ ವಿದೇಶದಲ್ಲಿ ಚಿತ್ರೀಕರಿಸುವ ಕನಸು ಸಾಕಾರಗೊಳ್ಳಲೇ ಇಲ್ಲ. ಹಾಗಾಗಿ ಇಲ್ಲಿಯೇ ಮದುವೆಯನ್ನು ನಡೆಸಬೇಕಾಯಿತು.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತನಾಗಿರುವ ಆರ್ಯವರ್ಧನ್ ಅವರ ಮದುವೆಯನ್ನು ಬಹಳ ಅತ್ಯುತ್ತಮವಾಗಿ ಚಿತ್ರಿಕರಿಸಿದೆ ಧಾರಾವಾಹಿ ತಂಡ. ಅತ್ಯಂತ ವರ್ಣಮಯ ಮದುವೆ ಸೆಟ್ ಜೊತೆಗೆ ಪಾತ್ರಧಾರಿಗಳ ಉಡುಪು ಆಭರಣಗಳೂ ಕೂಡ ಅತ್ಯದ್ಭುತವಾಗಿ ಆಯ್ಕೆ ಮಾಡಿದೆ ಧಾರಾವಾಹಿ ತಂಡ. ಹಾಗಾಗಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಮದುವೆ ನೆರವೇರುತ್ತದೆಯೋ ಇಲ್ಲವೋ ಎಂಬ ಅಭಿಮಾನಿಗಳ ಗೊಂದಲಕ್ಕೂ ತೆರೆಬಿದ್ದಂತಾಗಿದೆ.