ಕನ್ನಡ ಬಿಡಿ ಸ್ವಾಮಿ, ಹಿಂದಿಯಲ್ಲಿ ರಾಬರ್ಟ್ ಹವಾ, ಯೌಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದ ದರ್ಶನ್ ಏನು ಗೊತ್ತಾ??

ಕನ್ನಡ ಬಿಡಿ ಸ್ವಾಮಿ, ಹಿಂದಿಯಲ್ಲಿ ರಾಬರ್ಟ್ ಹವಾ, ಯೌಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದ ದರ್ಶನ್ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಸಿನಿಮಾಗಳು ಬಿಡುಗಡೆಯಾಗಿ ಅದಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಾಗ ಮಾತ್ರ ಸಿನಿಮಾ ತಂಡಕ್ಕೆ ಸಮಾಧಾನ. ಸಾಕಷ್ಟು ಸಿನಿಮಾಗಳು ಹೆಚ್ಚಿನ ಲಾಭ ಗಳಿಸುತ್ತವೆ. ಅದರಲ್ಲೂ ದರ್ಶನ್, ಸುದೀಪ್, ಪುನೀತ್, ಯಶ್ ಮೊದಲಾದ ಚಿತ್ರಗಳು ಎಷ್ಟು ಯಶಸ್ಸು ಸಾಧಿಸುತ್ತವೆ ಎಂದರೆ ಕನ್ನಡದಲ್ಲಿ ಮಾತ್ರ ಅಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಬೇಡಿಕೆಯನ್ನು ಹೊಂದಿವೆ. ಇದೀಗ ನಟ ದರ್ಶನ್ ಅವರ ಚಿತ್ರ ಹಿಂದಿಯಲ್ಲಿ ಡಬ್ಬಿಂಗ್ ಕಾಣುವುದರ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.

ದರ್ಶನ್ ಅವರ ಚಿತ್ರಗಳನ್ನು ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲೂ ಕೂಡ ಸಾಕಷ್ಟು ಟ್ರೆಂಡಿಂಗ್ ಆಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ರಾಬರ್ಟ್ ಸಿನಿಮಾ. ಹೌದು ಸ್ನೇಹಿತರೆ ದರ್ಶನ್ ಅಭಿನಯದ ಇತ್ತೀಚಿಗೆ ತೆರೆ ಕಂಡ ರಾಬರ್ಟ್ ಸಿನಿಮಾ ಹಿಂದಿಯಲ್ಲಿ ಡಬ್ಬಿಂಗ್ ಮಾಡಲಾಗಿದ್ದು ಯೂಟ್ಯೂಬ್ ನಲ್ಲಿ ಪ್ರಸಾರಮಾಡಲಾಗಿದೆ. ರಾಬರ್ಟ್ ಮೊದಲು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫಿಸ್ ಕೊಳ್ಳೆಹೊಡೆದಿತ್ತು. ಇನ್ನು ಯೂಟ್ಯೂಬ್ ನಲ್ಲಿ ಹಿಂದಿಯಲ್ಲಿ ಡಬ್ಬಿಂಗ್ ಆಗಿ ಕೇವಲ 5 ದಿನಗಳಲ್ಲಿ 20 ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಮೊದಲ 2 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದ್ದು ನಂತರ ಕೇವಲ 5 ದಿನಗಳಲ್ಲಿ 20 ಮಿಲಿಯನ್ ವೀಕ್ಷಣೆ ಕಂಡಿದ್ದು ಕನ್ನಡ ಚಿತ್ರರಂಗದ ಹೆಮ್ಮೆಯ ವಿಷಯ. ಸ್ನೇಹಿತರೆ ದರ್ಶನ್ ಅವರ ಇನ್ನೂ ಸಾಕಷ್ಟು ವಿಷಯಗಳು ಹಿಂದಿಯಲ್ಲಿ ಡಬ್ಬಿಂಗ್ ಕಂಡಿದೆ. ಕನ್ನಡದಲ್ಲಿ ದರ್ಶನ್ ಸಿನಿಮಾ ಬಂದ್ರೆ ಯಾವಾಗ ಹಿಂದಿಯಲ್ಲಿ ಪ್ರಸಾರವಾಗುತ್ತೆ ಎಂದು ಕಾಯುವಂಥ ಟ್ರೆಂಡ್ ಶುರುವಾಗಿದೆ.

ಆರ್‌ಕೆಡಿ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ರಾಬರ್ಟ್ ಹಿಂದಿ ಡಬ್ಬಿಂಗ್ ಚಿತ್ರವನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದೆ. ಇದೇ ಆಗಸ್ಟ್ 29 ರಂದು ರಾಬರ್ಟ್ ಸಿನಿಮಾ ಹಿಂದಿಯಲ್ಲಿ ಪ್ರದರ್ಶನ ಕಂಡಿದ್ದು. ಇನ್ನು ಟಿವಿಯಲ್ಲಿಯೂ ಕೂಡ ರಾಬರ್ಟ್ ಪ್ರಸಾರವಾಗಿದೆ. ಕಲರ್ಸ್ ಸಿನಿಪ್ಲೆಕ್ಸ್ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಿತ್ತು. ರಾಬರ್ಟ್ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ದರ್ಶನ್ ಜೊತೆ ಆಶಾ ಭಟ್, ರವಿಶಂಕರ್ ಗೌಡ, ಜಗಪತಿ ಬಾಬು, ವಿನೋದ್ ಪ್ರಭಾಕರ್ ಮೊದಲಾದವರ ಅದ್ಭುತ ನಟನೆಯನ್ನು ಕಾಣಬಹುದು. ನಟ ದರ್ಶನ್ ಅವರ ಗಜ, ಚಿಂಗಾರಿ, ಪೊರ್ಕಿ ಮೊದಲಾದ ಹಲವು ಚಿತ್ರಗಳು ಹಿಂದಿಯಲ್ಲಿ ಡಬ್ಬಿಂಗ್ ಆಗಿದೆ. ಇನ್ನು ಕೆಜಿಎಫ್ ಹಾಗೂ ಪೊಗರು ಹಿಂದಿ ಡಬ್ ಆಗಿದ್ದು ದಾಖಲೆಯ ವೀಕ್ಷಣೆ ಕಂಡಿದೆ.