ಈಕೆ ಯಾವ ಸಿನೆಮಾದ ನಾಯಕಿ ಅಲ್ಲ, ರಿಯಲ್ ನಾಯಕಿ, ಈಕೆಯ ಧೈರ್ಯಕ್ಕೆ ಭಾರತ ಸರ್ಕಾರವೇ ಬೆರಗು, ಈಕೆಯ ಬಗ್ಗೆ ನಿಮಗೆ ಎಷ್ಟು ಗೊತ್ತೇ??

ಈಕೆ ಯಾವ ಸಿನೆಮಾದ ನಾಯಕಿ ಅಲ್ಲ, ರಿಯಲ್ ನಾಯಕಿ, ಈಕೆಯ ಧೈರ್ಯಕ್ಕೆ ಭಾರತ ಸರ್ಕಾರವೇ ಬೆರಗು, ಈಕೆಯ ಬಗ್ಗೆ ನಿಮಗೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಎಷ್ಟೋ ಮಹಿಳೆಯರಿಗೆ ಈಗ ನಾವು ಹೇಳುತ್ತಿರುವ ಹೆಣ್ಣುಮಗಳು ಮಾದರಿ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಅದೆಷ್ಟೋ ಜನರ ಪ್ರಾಣ ರಕ್ಷಣೆ ಮಾಡಿದಂತಹ ನೀರಜಾ ಭಾನೋಟ್ ರವರ ಕುರಿತಂತೆ. ಹೌದು ಸ್ನೇಹಿತರೆ ನೀರಜಾ ಭಾನೋಟ್ ಅವರು ಪಂಜಾಬ್ ಮೂಲದ ಬ್ರಾಹ್ಮಣ ಕುಟುಂಬದ ಹುಡುಗಿ. ಇನ್ನು ಚಿಕ್ಕಂದಿನಿಂದಲೇ ಸಾಕಷ್ಟು ಸೌಂದರ್ಯವತಿ ಯಾಗಿದ್ದ ನೀರಜಾ ಭಾನೋಟ್ ಅಮೆರಿಕಾದ ಪ್ಯಾನ್ ಏಮ್ ಏರ್ಲೈನ್ಸ್ ಗೆ ಏರ್ ಹೋಸ್ಟೆಸ್ ಆಗಿ ಸಂದರ್ಶನವನ್ನು ನೀಡಿ ಆಯ್ಕೆಯಾಗುತ್ತಾರೆ.

ಇನ್ನು ಆ ದಿನ ನಡೆದ ಘಟನೆಯ ಕುರಿತಂತೆ ಹೇಳುವುದಾದರೆ ಅಂದು ಮುಂಬೈನಿಂದ ವಿಮಾನ ಅಮೆರಿಕದತ್ತ ಪಯಣ ಬೆಳೆಸಿತ್ತು. ಆಗ ವಿಮಾನ ಕರಾಚಿಯಲ್ಲಿ ತಿಳಿಯುತ್ತದೆ. ಅಲ್ಲಿಗೆ ಸೆಕ್ಯೂರಿಟಿ ಗಾರ್ಡ್ ಗಳ ವೇಷಭೂಷಣದಲ್ಲಿ ಬಂದಂತಹ ಆತಂಕವಾದಿಗಳು ವಿಮಾನವನ್ನು ಹೈಜಾಕ್ ಮಾಡುತ್ತಾರೆ. ಆಗ ಬುದ್ಧಿವಂತಿಗೆ ತೋರಿಸಿದ ನೀರಜಾ ಭಾನೋಟ್ ಪೈಲೆಟ್ ಗಳಿಗೆ ಹೈಜಾಕ್ ಆಗಿರುವ ಕುರಿತಂತೆ ವರದಿ ನೀಡಿ ಕಮಂಡ್ ರೂಮಿಗೆ ಸುದ್ದಿಯನ್ನು ತಲುಪಿಸಲು ಹೇಳುತ್ತಾರೆ. ಇನ್ನು ಆತಂಕವಾದಿಗಳು ಅಮೇರಿಕಾದ ಪಾಸ್ಪೋರ್ಟ್ ಹೊಂದಿರುವವರನ್ನು ಒತ್ತೆಯಾಳಾಗಿ ಮಾಡಲು ಬಂದಿರುತ್ತಾರೆ. ಆಗ ಬುದ್ಧಿವಂತಿಕೆ ತೋರಿಸುವ ನೀರಜಾ ಭಾನೋಟ್ ಅವರು ಅಮೆರಿಕದ ಪಾಸ್ಪೋರ್ಟ್ ಹೊಂದಿರುವ ಅಮೆರಿಕನ್ ನಾಗರಿಕರ ಪಾಸ್ಪೋರ್ಟ್ಗಳನ್ನು ಬಚ್ಚಿಡಲು ಸಹಾಯ ಮಾಡುತ್ತಾರೆ.

ಇತ್ತ ಕಮಾಂಡ್ ರೂಮಿಗೆ ಸುದ್ದಿ ನೀಡುವ ಮೂಲಕ ಕಮಾಂಡ್ ಗಳು ಕೂಡ ವಿಮಾನವನ್ನು ಸುತ್ತುವರಿಯುತ್ತಾರೆ. ಆಗ ಅದೇ ಸಮಯದಲ್ಲಿ ನೀರಜಾ ಭಾನೋಟ್ ಏನು ಮಾಡುತ್ತಾರೆ ಗೊತ್ತಾ ಸ್ನೇಹಿತರೆ. ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆಯುವ ಮೂಲಕ ವಿಮಾನದಲ್ಲಿದ್ದ 300ಕ್ಕೂ ಹೆಚ್ಚಿನ ಯಾತ್ರಿಕರನ್ನು ಹೊರಗೆ ಕಳಿಸುತ್ತಾರೆ. ಹೀಗೆ ತುರ್ತು ದ್ವಾರದ ಮೂಲಕ ತಾವೇ ಮೊದಲು ಹೊರಗೆ ಹೋಗಿ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದ್ದರೂ ಕೂಡ ಯಾತ್ರಿಕರ ಜೀವರಕ್ಷಣೆಗೆ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾರೆ ನೀರಜಾ ಭಾನೋಟ್. ನೀರಜಾ ಭಾನೋಟ್ ರವರಿಗೆ ಭಾರತ ಸರ್ಕಾರ ಅಶೋಕಚಕ್ರ ಪುರಸ್ಕಾರವನ್ನು ನೀಡಿ ಅವರ ಸಾಧನೆಯನ್ನು ನೆನಪಿಸುವ ಕೆಲಸ ಮಾಡಿದೆ. ನಮ್ಮ ಭಾರತಕ್ಕೆ ನೀರಜಾ ಭಾನೋಟ್ ರವರ ಮಹಿಳೆಯರ ಅವಶ್ಯಕತೆ ತುಂಬಾ ಇದೆ.