ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಾರ್ನರ್, ರೈನಾ, ವಿರಾಟ್ ಅಲ್ವಂತೆ ಐಪಿಎಲ್ ನ ಕಿಂಗ್, ಈತ ನಿಜವಾದ ಐಪಿಎಲ್ ಕಿಂಗ್ ಅಂತೆ. ಆತ ಯಾರು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಥಾತ್ ಐಪಿಎಲ್. ಭಾರತದ ಕ್ರಿಕೇಟ್ ಲೋಕಕ್ಕೆ ಹೊಸ ಭಾಷ್ಯ ಬರೆದ ಟೂರ್ನಮೆಂಟ್. ಅದೆಷ್ಟೋ ಪ್ರತಿಭೆಗಳನ್ನ ದೇಶ ವಿದೇಶಗಳಿಗೆ ಪರಿಚಯಿಸಿತು. ಆರ್ಥಿಕವಾಗಿಯೂ ಸಹ ಆಟಗಾರರಿಗೆ ವಿಶೇಷವಾದ ಗೌರವ ಸಹ ನೀಡಿತು. 2008 ರಿಂದ ಶುರುವಾದ ಈ ಟೂರ್ನಿ ಇಲ್ಲಿಯವರೆಗೂ ಅದರ ಖದರ್ ನ್ನು ಹಾಗೆ ಉಳಿಸಿಕೊಂಡಿದೆ. ಈಗ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಚರಣ ಶುರುವಾಗಲಿದೆ.

ಇನ್ನು ಪ್ರತಿ ಭಾರಿಯೂ ಐಪಿಎಲ್ ನಲ್ಲಿ ಆರೇಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಎಂಬ ವಿಶೇಷವಾದ ಗೌರವವೊಂದನ್ನ ರೂಢಿಸಿಕೊಂಡು ಬರಲಾಗುತ್ತಿದೆ. ಆರೇಂಜ್ ಕ್ಯಾಪ್ ಎಂಬುದು, ಆ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್ ಗೆ ಹೋದರೇ, ಪರ್ಪಲ್ ಕ್ಯಾಪ್ ಎಂಬುದು ಆ ಸರಣಿಯ ಹೆಚ್ಚು ವಿಕೇಟ್ ಟೇಕಿಂಗ್ ಬೌಲರ್ ಗೆ ಹೋಗುತ್ತದೆ. ಇನ್ನು ಈ ಸರಣಿಯಲ್ಲಿ ಅತಿ ಹೆಚ್ಚು ರನ್ನು ಭಾರಿಸಿದವರು ಸುರೇಶ್ ರೈನಾ ಹಾಗೂ ವಿರಾಟ್ ಕೋಹ್ಲಿ ಎಂದು ಹೇಳಲಾಗಿದೆ. ಜೊತೆಗೆ ಡೇವಿಡ್ ವಾರ್ನರ್ ಸಹ ಈ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಆದರೇ ಈ ಮೂವರು ಆಟಗಾರರು ಐಪಿಎಲ್ ನ ಕಿಂಗ್ ಅಲ್ಲ, ಆತ ಬೇರೊಬ್ಬ ಆಟಗಾರ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ.

ಹೌದು ಐಪಿಎಲ್ ನ ಕಿಂಗ್ ಬೇರಾರೂ ಅಲ್ಲ. ಆತ ಎಬಿ ಡಿ ವಿಲಿಯರ್ಸ್. ಎಬಿ ಡಿ ವಿಲಿಯರ್ಸ್ ಸಹ ಐಪಿಎಲ್ ನಲ್ಲಿ 5000 ರನ್ ಪೂರೈಸಿದ್ದಾರೆ. ಆದರೇ ವಿಶೇಷತೆ ಎಂದರೇ, ಎಬಿಡಿ 5000 ರನ್ ಪೂರೈಸಲು ಎಬಿಡಿ ಎಸೆತಗಳು ಕೇವಲ 3288. ಆದರೇ ಉಳಿದ ಆಟಗಾರರು ಎಬಿಡಿ ಗಿಂತ ಹೆಚ್ಚು ಎಸೆತಗಳನ್ನು ಎದುರಿಸಿದ್ದಾರೆ. ಹಾಗಾಗಿ ಐಪಿಎಲ್ ನಲ್ಲಿ ಎಬಿಡಿ ವಿಲಿಯರ್ಸ್ ರವರ ಈ ಸಾಧನೆಗೆ ವಿಶೇಷತೆಯಾಗಿದೆ. ಡೇವಿಡ್ ವಾರ್ನರ್ ಐದು ಸಾವಿರ ರನ್ ಪೂರೈಸಲು 3544 ಎಸೆತಗಳನ್ನು ಎದುರಿಸಿದ್ದರೇ, ಇನ್ನು ಸುರೇಶ್ ರೈನಾ 3620 ಎಸೆತಗಳನ್ನು ಎದುರಿಸಿದ್ದಾರೆ. ಒಟ್ಟಿನಲ್ಲಿ ಎಬಿ ಡಿ ವಿಲಿಯರ್ಸ್ ರವರ ಸಾಧನೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.