ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದೆ ಸ್ಯಾಂಡಲ್ ವುಡ್ ನಲ್ಲಿ ನಟಿಯರಾಗಿ ಮಿಂಚಬಹುದಾದ ಟಾಪ್ 5 ಕಿರುತೆರೆ ನಟಿಯರು ಯಾರ್ಯಾರು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ನಟಿಸಿ, ತಮ್ಮ ಅತ್ಯುತ್ತಮ ನಟನೆಯ ಮೂಲಕ ಸೀರಿಯಲ್ ಪ್ರಿಯರ ಮನಗೆದ್ದ ಅದೆಷ್ಟೋ ನಟ ನಟಿಯರು ಬೆಳ್ಳಿಪರದೆಯ ಮೇಲೂ ಕಾಣಿಸಿಕೊಂಡು ಯಶಸ್ವಿಯಾಗುವುದು ಖುಷಿಯ ವಿಚಾರ. ಕನ್ನಡ ಚಿತ್ರರಂಗದಲ್ಲಿ ಇಂಥ ಹಲವಾರು ಉದಾಹರಣೆಗಳಿಗೆ. ಇಂದು ಕನ್ನಡ ಕಿರುತೆರೆಯ ನಟಿಯರು ಯಾವ ಹಿರಿತೆರೆ ನಟಿಯರಿಗೂ ಕಮ್ಮಿಯಿಲ್ಲ. ಅವರ ನಟನೆ, ನೋಟ ಎಲ್ಲವೂ ಸಿನಿಮಾಗೆ ಫರ್ಪೆಕ್ಟ್ ಎನ್ನುವಂತೆ ಇದೆ. ಹಾಗಾದರೆ ಯಾವೆಲ್ಲಾ ಕಿರುತೆರೆ ನಟಿಯರು ಹಿರಿತೆರೆಯಲ್ಲಿ ಮಿಂಚಬಹುದು? ಇಲ್ಲಿದೆ ಆ ಹೆಸರುಗಳು.

ನಮ್ರತಾ ಗೌಡ: ನಟಿ ನಮ್ರತಾ ಗೌಡ ಅವರು ನಾಗಿಣಿ-2 ಧಾರಾವಾಹಿಯ ಪ್ರಮುಖ ಪಾತ್ರವನ್ನು ನ್ಬಾಯಿಸುತ್ತಿರುವವರು. ಅವರು ಶಿವಾನಿ ಪಾತ್ರಧಾರಿಯಾಗಿ ಬಹಳ ಸಹಜ ನಟನೆಯ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯರಾದವರು. ಇನ್ನು ನಮ್ರತಾ ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು. ಈ ಹಿಂದೆ ಕಲರ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ’ಪುಟ್ಟ ಗೌರಿ ಮದುವೆ’ ಧಾರಾವಾಹಿಯಲ್ಲಿಯೂ ಕೂಡ ಉತ್ತಮ ಪಾತ್ರವನ್ನು ನಿಭಾಯಿಸಿ ಅಲ್ಲಿಯೂ ಕೂಡ ನಟನೆಗೆ ಸೈ ಎನಿಸಿಕೊಂಡವರು. ಈಗಾಗಲೇ ಕೆಲವು ಚಿತ್ರಗಳಲ್ಲಿ ಬಾಲ ನಟಿಯಾಗಿಯೂ ಬಣ್ನ ಹಚ್ಚಿರುವ ನಟಿ ನಮ್ರತಾ ಬೆಳ್ಳಿತೆರೆಯ ಮೇಲೆ ಮುಂದೆ ಹೆಚ್ಚು ಕಾಣಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಮೋಕ್ಷಿತಾ ಪೈ: ಕನ್ನಡ ಕಿರುತೆರೆಯಲ್ಲಿ ಹೆಸರಾಂತ ಧಾರಾವಾಹಿ ’ಪಾರು’ ವಿನಲ್ಲಿ ಪಾರುವಾಗಿ ಮುದ್ದಾಗಿ ಕಾಣಿಸುವ ಉದಯೋನ್ಮುಖ ನಟಿ ಈಕೆ. ಫೇಸ್ ಬುಕ್ ಮೂಲಕ ಆಯ್ಕೆಯಾದ ಈ ನಟಿ ನಟನೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಇವರೂ ಕೂಡ ಸಧ್ಯದಲ್ಲಿ ಹಿರಿತೆರೆಯಲ್ಲಿ ಕಾನಿಸಿಕೊಂಡರೆ ಆಶ್ಚರ್ಯವಿಲ್ಲ.

ಇನ್ನು ನಟಿ ಅಂಕಿತಾ ಅಮರ್: ಇವರು ತಮ್ಮ ಮುಗ್ಧ ನಟನೆಗೆ ಹೆಸರಾದವರು ’ನಮ್ಮನೆ ಯುವರಾಣಿಯ ಧಾರಾವಾಹಿಯ ಈ ಗುಬ್ಬಿಮರಿ ಕಲರ್ಸ್ ಕನ್ನಡದ ’ಎದೆ ತುಂಬಿ ಹಾಡುವೆನು’ ಹೊಸ ಮಾಲಿಕೆಯ ನಿರೂಪಕಿಯೂ ಹೌದು. ಇವರ ಈ ಮುದ್ದಾದ ಮುಖ ಹಿರಿತೆರೆಯಲ್ಲಿ ಮಿಂಚಬೇಕು ಎಂಬುದು ಅಭಿಮಾನಿಗಳ ಆಶಯ.

ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ. ಅದ್ಭುತವಾಗಿ ನಟಿಸಿ ಅನು ಎಂದೇ ಖ್ಯಾತ ರಾಗಿರುವ ಮೇಘಾ ಶೆಟ್ಟಿ ಚಂದನ್ ಶೆಟ್ಟಿಯವರ ಅಲ್ಬಂ ಒಂದರಲ್ಲಿ ನಟಿಸಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಈಗಾಗಲೇ ಕನ್ನಡದ ಹಿರಿತೆರೆಯಲ್ಲಿ ವೃತ್ತಿ ಆರಂಭಿಸಿದ್ದಾರೆ.

ಇನ್ನು ಗಟ್ಟಿ ಮೇಳ ಧಾರಾವಾಹಿಯ ಅಮೂಲ್ಯಾ ಅಲಿಯಾಸ್ ನಿಶಾ ರವಿಕೃಷ್ಣನ್. ಚಟಪಟಾ ಅಂತ ಮಾತನಾಡುವ ಈ ಚೂಟಿ ಹುಡುಗಿ ತೆಲುಗು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಇವರನ್ನೂ ಕೂಡ ಹಿರಿತೆರೆಯ ಹಿರೋಯಿನ್ ಆಗಿ ಖಂಡಿತ ನಿರೀಕ್ಷಿಸಬಹುದು.