ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಂಜು ಪಾವಗಡ ಅವರಿಗೆ ಕೊಟ್ಟ ವಿಶೇಷ ಗಿಫ್ಟ್ ಏನು ಗೊತ್ತಾ?? ಧನ್ಯನಾದೆ ಎಂದ ಮಂಜು.
ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಂಜು ಪಾವಗಡ ಅವರಿಗೆ ಕೊಟ್ಟ ವಿಶೇಷ ಗಿಫ್ಟ್ ಏನು ಗೊತ್ತಾ?? ಧನ್ಯನಾದೆ ಎಂದ ಮಂಜು.
ನಮಸ್ಕಾರ ಸ್ನೇಹಿತರೇ ಮಂಜು ಪಾವಗಡ ಅವರು ಅದೇಷ್ಟು ಕನಸು ಕಂಡಿದ್ದರೋ ಗೊತ್ತಿಲ್ಲ, ಬಿಗ್ ಬಾಸ್ ಸೀಸನ್ 8 ರ ಶೋ ಕರೋನ ಹೆಚ್ಚಾದ ನಿಮಿತ್ತ ಅರ್ಧದಲ್ಲಿಯೇ ನಿಂತಿತು. ಇದು ಮಂಜು ಅವರ ಆಸೆಗೆ ತಣ್ಣೀರೆರೆಚಿದ ಹಾಗೆ ಆಯ್ತು. ಆದರೆ ದೇವರ ದಯ ಅಥವಾ ಅದೃಷ್ಟ ಅಂತಾರಲ್ಲ ಅದು ಮಂಜು ಜೊತೆಗೆ ಇತ್ತು ಎನ್ನಿಸುತ್ತದೆ ಮತ್ತೆ ಶುರುವಾಯ್ತು ನೋಡಿ ಬಿಗ್ ಬಾಸ್. ಮಂಜು ಅವರ ಅದೃಷ್ಟ ಎಷ್ಟಿತ್ತೆಂದರೆ, ಬಿಗ್ ಬಾಸ್ ಶೋ ವಿನ್ನರ್ ಕೂಡ ಆಗಿ ತಮ್ಮ ಕನಸು ನನಸಾದ ಸಾರ್ಥಕತೆಯಲ್ಲಿದ್ದಾರೆ ಮಂಜು ಪಾವಗಡ.
ಸ್ನೇಹಿತರೇ ಬಿಗ್ ಬಾಸ್ ಟಾಪ್ 5 ನಲ್ಲಿರುವ ಎಲ್ಲಾ ಸ್ಪರ್ಧಿಗಳು ಟಿ ವಿ ಮಾಧ್ಯಮಗಳಲ್ಲಿ ಸಂದರ್ಶನ ನೀಡಿ ತಮ್ಮ ಬಿಗ್ ಬಾಸ್ ಅನುಭವವನ್ನು ಹೇಳಿ ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಂಜು ಪಾವಗಡ ಸ್ವಲ್ಪ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಯಾವುದು ಅಂತೀರಾ! ಮಂಜು ಪಾವಗಡ ತಾನು ಗೆಲ್ಲುವುದಕ್ಕೆ ದೇವರ ಆಶೀರ್ವಾದ ಕಾರಣ ಎಂದು ಎಲ್ಲಾ ಇಷ್ಟ ದೇವರ ದರ್ಶನ ಮಾಡುತ್ತಿದ್ದಾರೆ. ಮೊದಲು ಶಿವಣ್ಣ ಅವರನ್ನ ಭೇಟಿ ಮಾಡಿ ತಮ್ಮ ಸಂತೋಷವನ್ನು ಹಂಚಿಕೊಂಡ ನಂತರ ದೇವಾಲಯಗಳಿಗೆ ಭೇಟಿ ನೀಡಿದರು.
ಮಂಜು ಪಾವಗಡ ಇತ್ತೀಚೆಗೆ ಭೇಟಿ ನೀಡಿದ್ದು ಧರ್ಮಸ್ಥಳಕ್ಕೆ. ಶ್ರೀ ಮಂಜುನಾಥನ ದರ್ಶನ ಪಡೆದು ಶ್ರೀ ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿಯಾದರು ಮಂಜು. ಇನ್ನು ಬಿಗ್ ಬಾಸ್ ವಿನ್ನರ್ ಮಂಜು ಅವರಿಗೆ ವಿಶೇಷ ದರ್ಶನ ಸಿಕ್ಕಿದ್ದು ಮಾತ್ರವಲ್ಲದೇ ವೀರೇಂದ್ರ ಹೆಗ್ಗಡೆಯವರೆ ಸ್ವತಃ ದೇವರ ಪ್ರಸಾದ ನೀಡಿ ಮಂಜು ಪಾವಗಡ ಅವರ ಭವಿಷ್ಯಕ್ಕೆ ಆಶೀರ್ವದಿಸಿದರು. ಹೀಗೆ ಮಂಜು ಪಾವಗಡ ಮಂಜುನಾಥನ ದರ್ಶನದ ಜೊತೆಗೆ ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿ ಮಾಡಿ ಹಾರೈಕೆ ಪಡೆದು ಮುಂದಿನ ಕಲಾವಿದ ಬದುಕಿಗೆ ನಾಂದಿ ಹಾಡಲಿದ್ದಾರೆ.