ಮತ್ತೊಮ್ಮೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲು ಜೆಡಿಎಸ್ ಸಿದ್ಧವಿದೆ, ಆದರೆ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೆಡಿಎಸ್ ಪಕ್ಷವು ಹಲವಾರು ಬಾರಿ ಮೈತ್ರಿಯಲ್ಲಿ ಸರ್ಕಾರ ರಚಿಸಿ ಯಾವುದೇ ಮೈತ್ರಿಯನ್ನು ಐದು ವರ್ಷ ಉಳಿಸಿ ಕೊಳ್ಳುವಲ್ಲಿ ವಿಫಲವಾಗಿದೆ, ರಾಷ್ಟ್ರೀಯ ಪಕ್ಷಗಳೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿ ಆಗುವ ಕುಮಾರಸ್ವಾಮಿಯವರು ಎರಡು ಬಾರಿ ಇದೇ ರೀತಿ ಮುಖ್ಯಮಂತ್ರಿಯಾಗಿದ್ದಾರೆ‌. ವಿಪರ್ಯಾಸವೆಂಬಂತೆ ಎರಡು ಬಾರಿಯೂ ಮೈತ್ರಿಗಳು ಐದು ವರ್ಷ ಸಂಪೂರ್ಣ ಅವಧಿಯನ್ನು ಪೂರೈಸುವಲ್ಲಿ ವಿಫಲವಾಗಿವೆ.

ಮೊದಲು ಬಿಜೆಪಿ ಪಕ್ಷದ ಜೊತೆ ಸೇರಿಕೊಂಡು 20 ತಿಂಗಳ ಕಾಲ ಆಡಳಿತ ನಡೆಸಿದ ಕುಮಾರಸ್ವಾಮಿ ರವರು ತದ ನಂತರ ಬಿಜೆಪಿ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಡುವ ಸಮಯ ಬಂದಾಗ ಮೈತ್ರಿಯನ್ನು ತಾವೇ ಅಂತ್ಯಗೊಳಿಸುವ ಹಲವಾರು ನಿರ್ಧಾರಗಳನ್ನು ತೆಗೆದು ಕೊಂಡು ಮೈತ್ರಿಗೆ ಇತಿಶ್ರೀ ಹಾಡಿದ್ದರು. ಇದಾದ ಬಳಿಕ ಮತ್ತೊಮ್ಮೆ ಕಳೆದ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದ ಕುಮಾರಸ್ವಾಮಿ ರವರು ಅಲ್ಲಿಯೂ ಕೂಡ ಹಲವಾರು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡ ಕಾರಣ ಬಹುಮತ ಇಲ್ಲದೆ ಅಧಿಕಾರ ಕಳೆದು ಕೊಳ್ಳಬೇಕಾಯಿತು. ಇದೀಗ ಈ ರೀತಿ ಘಟನೆಗಳು ಮರುಕಳಿಸಬಾರದು ಎಂದು ಜೆಡಿಎಸ್ ಪಕ್ಷ ಮತ್ತೊಮ್ಮೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಮುಂದಿನ ಬಾರಿ ಬಹುಮತ ಸಾಧಿಸುತ್ತೇವೆ ಎಂದು ಈಗಾಗಲೇ ಚುನಾವಣಾ ಕಾರ್ಯಗಳನ್ನು ಆರಂಭಿಸಿದೆ.

ಕುಮಾರಪರ್ವ ಎಂಬ ಘೋಷಣೆಯ ಹೆಸರಿನಲ್ಲಿ ಚುನಾವಣಾ ತಯಾರಿಗಳನ್ನು ಆರಂಭಿಸಿರುವ ಜೆಡಿಎಸ್ ಪಕ್ಷ ಅಲ್ಲಲ್ಲಿ ಚುನಾವಣಾ ಸಭೆಗಳನ್ನು ಕೂಡ ಈಗಾಗಲೇ ನಡೆಸುತ್ತಿದೆ. ಇನ್ನು ಇದೀಗ ನಿನ್ನೆ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಕುಮಾರಸ್ವಾಮಿ ರವರು ನಾನು ರಾಜಕೀಯಕ್ಕೆ ಬಂದಿದ್ದು ಕೇವಲ ಆಕಸ್ಮಿಕ, ಅದೇ ರೀತಿ ಮುಖ್ಯಮಂತ್ರಿಯಾಗಿದ್ದು ಕೂಡ ಕೇವಲ ಆಕಸ್ಮಿಕ. ರೈತರ ಸಾಲ ಮನ್ನ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ, ಅದು ಶಾಶ್ವತ ಪರಿಹಾರ ಅಲ್ಲ, ಯಾವ ರೈತನೂ ಕೂಡ ಸಾಲ ಮಾಡದೆ ಇರುವ ಹಾಗೆ ಮಾಡಬೇಕಾಗಿತ್ತು, ನಾನು ಮುಂದಿನ ಬಾರಿ ಮುಖ್ಯಮಂತ್ರಿ ಆದರೆ ಜನರು ನನಗೆ 5 ವರ್ಷ ಸಂಪೂರ್ಣ ಅವಕಾಶ ನೀಡಿದರೆ ದೇಶದ ಎಲ್ಲೆಡೆ ಮಾದರಿಯ ರಾಜ್ಯವಾಗುವಂತೆ ನಮ್ಮ ಕರ್ನಾಟಕ ರಾಜ್ಯವನ್ನು ಕ್ರಾಂತಿಕಾರಿ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ, ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav