ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದು ಕಾಲದಲ್ಲಿ ಫೋಟೋಶಾಪ್ ನಲ್ಲಿ ಕೆಲಸ ಮಾಡುತ್ತಿದ್ದವರು ಇಂದು ಕನ್ನಡದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಯಾರು ಗೊತ್ತೇ??

ಒಂದು ಕಾಲದಲ್ಲಿ ಫೋಟೋಶಾಪ್ ನಲ್ಲಿ ಕೆಲಸ ಮಾಡುತ್ತಿದ್ದವರು ಇಂದು ಕನ್ನಡದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಯಾರು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂದು ಅದೆಷ್ಟೋ ಪ್ರತಿಭೆಗಳು ಎಲ್ಲರಿಗೂ ಸ್ಪೂರ್ತಿ ಆಗುವಂತೆ ತಮ್ಮ ಕಾರ್ಯಗಳ ಮೂಲಕ ಯಶಸ್ವಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಅವರ ನಿಜವಾದ ಕಷ್ಟ ಪರಿಶ್ರಮಗಳ ಕುರಿತಂತೆ ನಿಮಗೆ ಗೊತ್ತಿರುವುದು ಕೊಂಚಮಟ್ಟಿಗೆ ಮಾತ್ರ ಎಂದು ನಮಗೆ ತಿಳಿದಿದೆ. ಇಂದು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು ಒಬ್ಬರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ ಸ್ನೇಹಿತರೇ.

Follow us on Google News

ಹೌದು ಸ್ನೇಹಿತರೆ ಅವರು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗುವ ಮೊದಲು ಫೋಟೋ ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡು ಇಂದು ಹಲವಾರು ಅವಮಾನಗಳನ್ನು ಎದುರಿಸಿ ಕನ್ನಡದಲ್ಲಿ ಅದ್ಭುತ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ರವರ ಬಗ್ಗೆ. ಹೌದು ಸ್ನೇಹಿತರೆ ತಮ್ಮ ಆರಂಭದ ದಿನಗಳಲ್ಲಿ ಅರ್ಜುನ್ ಜನ್ಯ ರವರು ಆಗಲಿದಂತಹ ತಂದೆಯವರ ಫೋಟೋಶಾಪ್ ಒಂದರಲ್ಲಿ ಫೋಟೋ ತೆಗೆದುಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.

ನಂತರ ಬಾಲ್ಯದಲ್ಲಿ ಕಲಿಸಿದಂತಹ ಸಂಗೀತ ಜ್ಞಾನದಿಂದಾಗಿ ಸಾಕಷ್ಟು ಪ್ರಯತ್ನವನ್ನು ಪರಿಶ್ರಮವನ್ನು ಪಟ್ಟರು. ಸಂಗೀತ ನಿರ್ದೇಶಕನಾಗುವ ಮೊದಲು ಅರ್ಜುನ್ ಜನ್ಯ ರವರು ಸಾಕಷ್ಟು ಅವಮಾನಗಳನ್ನು ಕನ್ನಡ ಚಿತ್ರರಂಗದಲ್ಲಿ ಅನುಭವಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಕ್ಷೇತ್ರದಲ್ಲಿ ಆಟೋಗ್ರಾಫ್ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಆದರೆ ಅರ್ಜುನ್ ಜನ್ಯ ರವರಿಗೆ ಸಂಗೀತದಲ್ಲಿ ಅಥವಾ ಸಂಗೀತ ನಿರ್ದೇಶಕನಾಗಿ ಮೊದಲ ಯಶಸ್ಸು ತಂದುಕೊಟ್ಟ ಚಿತ್ರ ಎಂದರೆ ಅದು ಕಿಚ್ಚ ಸುದೀಪ್ ಹಾಗೂ ಕೆಂಪೇಗೌಡ ಚಿತ್ರ. ಹೌದು ಸ್ನೇಹಿತರೆ ಕೆಂಪೇಗೌಡ ಚಿತ್ರದ ಹಾಡುಗಳು ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ಸಾಧಿಸಿದ ಮೇಲೆ ಅರ್ಜುನ್ ಜನ್ಯ ರವರಿಗೆ ಚಂದನವನದಲ್ಲಿ ಅವಕಾಶಗಳ ದಂಡೇ ಹುಡುಕಿಕೊಂಡು ಬಂದಿತ್ತು. ಇದಾದಮೇಲೆ ಇಲ್ಲಿಯವರೆಗೆ ಅರ್ಜುನ್ ಜನ್ಯ ರವರು ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅರ್ಜುನ್ ಜನ್ಯ ರವರ ಬದುಕು ನಮಗೆಲ್ಲಾ ಸ್ಪೂರ್ತಿದಾಯಕ.