ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಾಲಿಬಾನಿಗಳ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ. ಭಾರತಕ್ಕೆ ದೊಡ್ಡ ಸಮಸ್ಯೆ ಆಫ್ಗನ್ ತಾಲಿಬಾಲಿಗಳಲ್ಲ, ಮತ್ಯಾರು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆಫ್ಘಾನಿಸ್ತಾನ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತಕ್ಕೆ ಯಾವೆಲ್ಲಾ ರೀತಿಯ ಸಮಸ್ಯೆ ಆಗಬಹುದು ಎಂಬುದರ ಕುರಿತು ಎಲ್ಲೆಡೆ ಚರ್ಚೆಗಳು ಆರಂಭವಾಗಿವೆ. ಆಫ್ಘಾನಿಸ್ತಾನದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದ ಭಾರತಕ್ಕೆ ಇದೀಗ ಇದರಿಂದ ನಷ್ಟ ಉಂಟಾಗುತ್ತಿದ್ದರೂ ಕೂಡ ಯಾರು ಹೆಚ್ಚಾಗಿ ನಷ್ಟದ ಕುರಿತು ಆಲೋಚನೆ ಮಾಡುತ್ತಿಲ್ಲ ಬದಲಾಗಿ ಭಾರತದ ಆಂತರಿಕ ಭದ್ರತೆಯ ವಿಚಾರ ಇದೀಗ ಚರ್ಚೆಯ ವಿಷಯವಾಗಿದೆ.

ಸಾಕಷ್ಟು ಜನ ಭಾರತ ಆಫ್ಘಾನಿಸ್ತಾನದಲ್ಲಿ ಮಾಡಿದ್ದ ಹೂಡಿಕೆ ವ್ಯರ್ಥವಾಯಿತು ಎನ್ನುತ್ತಿರುವ ಸಮಯದಲ್ಲಿ ಭಾರತದ ಆಂತರಿಕ ವಿಚಾರ ಕೂಡ ಸಾಕಷ್ಟು ಚರ್ಚೆ ಸೃಷ್ಟಿಸಿದೆ, ಯಾಕೆಂದರೆ ಇದು ಹೂಡಿಕೆ ಕುರಿತು ಆಲೋಚನೆ ಮಾಡುವ ಸಮಯವಲ್ಲ ಎಂಬುದು ಮತ್ತಷ್ಟು ಜನರ ಲೆಕ್ಕಾಚಾರವಾಗಿದೆ. ಇನ್ನು ಹೀಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆ ರವರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರಿಗೆ ಏನು ಹೇಳಿದ್ದಾರೆ ಎಂಬುದನ್ನು ನಾವು ಕೆಳಗಡೆ ತಿಳಿಸಿದ್ದು ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಆರೆಸ್ಸೆಸ್ ಸಂಘ ಸಂಸ್ಥೆಯನ್ನು ಹಲವಾರು ಬಾರಿ ತಾಲಿಬಾನಿಗಳು ಎಂದು ವ್ಯಂಗ್ಯವಾಡಿದ್ದಾರೆ, ಈ ಮಾತನ್ನು ಇದೀಗ ನೆನಪಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ರವರು ಆರೆಸ್ಸೆಸ್ ಸಂಘ ಸಂಸ್ಥೆ ಯನ್ನು ಮೊದಲಿನಿಂದಲೂ ಕಾಂಗ್ರೆಸ್ ನಾಯಕರು ತಾಲಿಬಾನಿಗಳು ಎಂದು ಹೇಳುತ್ತಿರುತ್ತಾರೆ, ಆದರೆ ತಾಲಿಬಾನಿಗಳು ಆಫ್ಘಾನಿಸ್ತಾನದಲ್ಲಿ ಮಾಡುತ್ತಿರುವ ಕೆಲಸಗಳನ್ನು ಬೆಂಬಲಿಸುತ್ತಿದ್ದಾರೆ, ಈ ರೀತಿಯ ಬೆಂಬಲ ಭಾರತ ದೇಶಕ್ಕೆ ಒಳ್ಳೆಯದಲ್ಲ. ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಪದ್ಧತಿಯನ್ನು ತೆಗೆದಿರುವ ಕಾರಣ ಭಾರತಕ್ಕೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ, ನಮಗೆ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನಿ ಗಳಿಗಿಂತ ಹೆಚ್ಚಾಗಿ ತಾಲಿಬಾನಿಗಳನ್ನು ಇಲ್ಲಿ ಬೆಂಬಲಿಸುತ್ತಿರುವ ವ್ಯಕ್ತಿಗಳೇ ದೊಡ್ಡ ಸಮಸ್ಯೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.