ಭಾರತ ಮಾತೆಯ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ ರವರು ಆಸ್ಪತ್ರೆಗೆ ದಾಖಲು, ಗುಣಮುಖರಾಗಲಿ ಎಂದು ನೆಟ್ಟಿಗರ ಹಾರೈಕೆ.
ಭಾರತ ಮಾತೆಯ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ ರವರು ಆಸ್ಪತ್ರೆಗೆ ದಾಖಲು, ಗುಣಮುಖರಾಗಲಿ ಎಂದು ನೆಟ್ಟಿಗರ ಹಾರೈಕೆ.
ನಮಸ್ಕಾರ ಸ್ನೇಹಿತರೇ ಈಗ ಚಿನ್ನದ ಹುಡುಗ ಎಂದರೆ ಮೊದಲು ನೆನಪಿಗೆ ಬರುವ ಹೆಸರೇ ನೀರಜ್ ಚೋಪ್ರಾ. ಭರ್ಚಿ ಎಸೆತ ಅಥವಾ ಜಾವಲಿನ್ ಎಸೆತದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದು ನೀರಜ್ ಚೋಪ್ರಾ. ಅಗಸ್ಟ್ ನಲ್ಲಿ ಜಪಾನ್ ದೇಶದಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್- 2020 ಯಲ್ಲಿ ನೀರಜ್ ಚೋಪ್ರಾ ಅವರು ಜಾವಲಿನ್ ಎಸೆತದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡರು. ಹೌದು ಸ್ನೇಹಿತರೆ ನೀರಜ್ ಚೋಪ್ರಾ ಅವರು ಜಾವಲಿನ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬಂಗಾರದ ಪದಕ ಗೆದ್ದು ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ನೀರಜ್ ಅವರು ಜಾವೆಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರದ ತಮ್ಮ ಎಸೆತದಿಂದ ಸ್ವರ್ನ ಗೆದ್ದು ಸಾಧನೆ ಮಾಡಿದ್ದಾರೆ. ಒಲಂಪಿಕ್ಸ್ ನ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದ ಮೊದಲ ಚಿನ್ನದ ಪದಕ ಇದಾಗಿದೆ. ನೀರಜ್ ಸಾಧನೆಗೆ ಸ್ವತಃ ಪ್ರಧಾನ ಮಂತ್ರಿ ಮೋದಿಯವರೇ ಶುಭಾಶಯ ಕೋರಿದ್ದಾರೆ. ಇನ್ನು ಚಿನ್ನದ ಹುಡುಗನಿಗೆ ಚಿನ್ನ ಗೆದ ಸಂಭ್ರಮದ ಜೊತೆಗೆ ಇನ್ನೂ ಅನೇಕ ಸಂಸ್ಥೆಗಳು, ಹಾಗೂ ವಿವಿಧ ಮೂಲಗಳಿಂದ ಪ್ರಶಸ್ತಿ ಹಾಗೂ ಗೌರವಗಳು, ಗೌರವ ಧನ ಸಿಗುತ್ತಿದೆ. ನೀರಜ್ ಮಾಡಿದ ಸಾಧನೆಗೆ ಸಾಕಷ್ಟು ಸುದ್ದಿಯಲ್ಲಿರುವ ನೀರಜ್, ಸೋಶಿಯಲ್ ಮೀಡಿಯಾಗಳಲ್ಲಿಯೂ ಸ್ಟಾರ್ ಪ್ಲೇಸ್ ನಲ್ಲಿದ್ದಾರೆ ಈಗ.
ಒಲಂಪಿಕ್ಸ್ ನಲ್ಲಿ ಪದಕ ಗೆದ್ದ, ಸಾಧನೆ ಗೈದ ಎಲ್ಲಾ ಕ್ರೀಡಾ ಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಉಪಹಾರಕ್ಕೆ ಆಹ್ವಾನಿಸಿ ಅಭಿನಂದನೆ ಸಲ್ಲಿಸಿದರು. ಈ ಸಮಾರಂಭದಲ್ಲಿ ನೀರಜ್ ಚೋಪ್ರಾ ಕೂಡ ಭಾಗವಹಿಸಿದ್ದರು. ಇದೀಗ ನೀರಜ್ ಚೋಪ್ರಾ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಕೇಳಿಬರುತ್ತಿದೆ. ನೀರಜ್ ಅವರು ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓಲಂಪಿಕ್ಸ್ ನಿಂದ ಮರಳಿದ ನಂತರ ಹಲವಾರು ಕಾರ್ಯಕ್ರಮಗಳಿಗೆ ಭಾಗಿಯಾಗಿದ್ದ ನೀರಜ್ ಸುಸ್ತಿನಿಂದ ಜ್ವರ ಬಂದು ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ. ಈಗಾಗಲೇ ನೀರಜ್ ಚೇತರಿಸಿಕೊಂಡಿದ್ದು ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.