ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಫಿನಾಲೆಯಲ್ಲಿ ಅರವಿಂದ ಸೋಲಲು ಸ್ವತಃ ತಾನೇ ಕಾರಣ ಎಂದು ಒಪ್ಪಿಕೊಂಡ ದಿವ್ಯ ಉರುಡುಗ ಹೇಳಿದ್ದೇನು ಗೊತ್ತಾ??

4

ನಮಸ್ಕಾರ ಸ್ನೇಹಿತರೇ ಯಾರೆಂದು ತಿಳಿಯದೆ ಮನೆಯ ಒಳಗಡೆ ಹೋಗಿ ಬಿಗ್ ಬಾಸ್ ಫೈನಲ್ ನವರಿಗೂ ತಲುಪಿ ಮಂಜು ಪಾವಗಡ ರವರ ಎದುರು ಸೋಲನ್ನು ಕಂಡಿರುವ ಅರವಿಂದ್ ಅವರು ಇದೀಗ ಕರ್ನಾಟಕದ ಎಲ್ಲೆಡೆ ಹೆಚ್ಚಿನ ಚರ್ಚೆಯನ್ನು ಸೃಷ್ಟಿ ಹಾಕುವ ಚರ್ಚಾ ವಿಷಯವಾಗಿ ಬಿಟ್ಟಿದ್ದಾರೆ. ಯಾಕೆಂದರೆ ಮನೋರಂಜನೆ ಕ್ಷೇತ್ರದಿಂದ ಬಹಳ ದೂರ ಉಳಿದಿದ್ದ ಅರವಿಂದ್ ರವರು, ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರ ಮಾಡಿದ್ದು ಬಿಟ್ಟರೆ ಮನರಂಜನಾ ಕ್ಷೇತ್ರದಲ್ಲಿ ಯಾವುದೇ ಹೆಚ್ಚಿನ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲ. ಆದರೂ ನೇರವಾಗಿ ಬಿಗ್ ಬಾಸ್ ಮನೆಯ ಒಳಗಡೆ ಹೋಗಿ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಅಭಿಮಾನಿಗಳನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದ್ದರು.

ಹೀಗೆ ಇಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ಕೊನೆ ಕ್ಷಣದಲ್ಲಿ ಅರವಿಂದ ಅವರು ಸೋಲನ್ನು ಒಪ್ಪಿ ಕೊಳ್ಳಬೇಕಾಯಿತು, ಆದ ಕಾರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಚರ್ಚೆಗಳು ಆರಂಭವಾಗಿದ್ದು, ಬಹುತೇಕ ಅಭಿಮಾನಿಗಳು ಅರವಿಂದ ರವರು ಸೋಲಲು ದಿವ್ಯ ಉರುದುಗ ರವರೇ ಕಾರಣ ಎನ್ನುತ್ತಿದ್ದಾರೆ, ಯಾಕೆಂದರೆ ದಿವ್ಯ ಉರುಡುಗ ರವರ ಜೊತೆ ಹೆಚ್ಚಿನ ಸಮಯ ಕಳೆದು ಅರವಿಂದ್ ರವರು ತಮ್ಮ ಸೋಲನ್ನು ತಾವೇ ಬರೆದುಕೊಂಡರು ಎನ್ನಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗ ದಿವ್ಯ ಉರುಡುಗ ರವರು ಈ ಕುರಿತು ಮಾತನಾಡಿ ಹೇಳಿರುವ ಹೇಳಿಕೆಗಳು ಬಾರಿ ವೈರಲ್ ಆಗಿದೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ದಿವ್ಯ ಉರುಡುಗ ರವರು ನಾನು ಫಿನಾಲಿ ವರೆಗೂ ತಲುಪಿದ ಕಾರಣ ಅವರು ಗೆಲ್ಲಲು ಸಾಧ್ಯವಾಗಿಲ್ಲ, ನಾನು ಮೊದಲೇ ಹೊರ ಬರಬೇಕಾಗಿತ್ತು, ನನಗೆ ತುಂಬಾ ಬೇಜಾರಾಗಿದೆ, ನಾನು ಒಂದು ವೇಳೆ ಮನೆಯಿಂದ ಹೊರ ಬಂದಿದ್ದರೇ ನಾನೇ ನನ್ನ ಅಭಿಮಾನಿಗಳಿಗೆ ಹೇಳಿ ಅರವಿಂದ್ ಅವರಿಗೆ ಹೆಚ್ಚಿನ ಬೆಂಬಲ ನೀಡುವಂತೆ ಮಾಡುತ್ತಿದ್ದೆ, ಆಗ ಅರವಿಂದ್ ರವರು ಸೋಲು ಕಾಣುತ್ತಿರಲಿಲ್ಲ, ಖಂಡಿತ ನಾನು ಅರವಿಂದ್ ರವರನ್ನು ಗೆಲ್ಲಿಸುತ್ತಿದ್ದೆ, ನಾನೇ ಒಂದು ರೀತಿಯಲ್ಲಿ ಅರವಿಂದ್ ರವರ ಸೋಲಿಗೆ ಕಾರಣನಾದೆ ನಾನು ಮೊದಲು ಹೊರ ಬರಬೇಕಾಗಿತ್ತು ಎಂದು ಕಣ್ಣೀರು ಹಾಕಿದ್ದಾರೆ.