ಮತ್ತೊಂದು ಮಾದರಿ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಏನು ಗೊತ್ತಾ??

ಮತ್ತೊಂದು ಮಾದರಿ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮುಖ್ಯಮಂತ್ರಿ ಆದ ಕ್ಷಣದಿಂದ ಬಸವರಾಜ ಬೊಮ್ಮಾಯಿ ಅವರು ಚಿಕ್ಕ ವಿಷಯಗಳಾದರೂ ಕೂಡ ಕೆಲವೊಂದು ಉತ್ತಮ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಅದರಲ್ಲಿಯೂ ರಾಜ್ಯದ ತೆರಿಗೆದಾರರ ಹಣವನ್ನು ಎಲ್ಲೆಂದರಲ್ಲಿ ಪೋಲು ಮಾಡದೆ ಚಿಕ್ಕ ಚಿಕ್ಕ ಸಭೆಗಳ ಮೇಲೆ ಕೂಡ ಕಣ್ಣು ಹಾಕಿ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುತ್ತಿರುವ ನಿರ್ಧಾರಗಳು ನಿಜಕ್ಕೂ ಸಂತಸ ನೀಡುತ್ತಿದೆ. ಇವು ಕೇವಲ ಒಂದು ಚಿಕ್ಕ ನಿರ್ಧಾರಗಳು ಎನಿಸಬಹುದು ಆದರೆ ಪ್ರತಿ ದಿನವೂ ಈ ರೀತಿಯ ಸಭೆಗಳು ನಡೆದಾಗ ಪ್ರತಿಯೊಂದಕ್ಕೂ ಕೂಡ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ.

ಹೀಗೆ ಒಂದು ಸಭೆಗೆ ಸಾವಿರದ ಲೆಕ್ಕಗಳಲ್ಲಿ ಸಂಖ್ಯೆಗಳು ಕೇಳಿ ಬಂದರೆ ಕೆಲವು ದಿನಗಳ ಬಳಿಕ ಆ ಲೆಕ್ಕ ಲಕ್ಷ ವಾಗುತ್ತದೆ ಹಾಗೆ ಕೋಟಿಗಳಿಗೆ ಕೂಡ ತಲುಪುತ್ತದೆ, ಆದ್ದರಿಂದ ಚಿಕ್ಕ ಚಿಕ್ಕ ಸಭೆಗಳ ಮೇಲೂ ಕೂಡ ಗಮನ ಹರಿಸಿರುವುದು ನಿಜಕ್ಕೂ ಸಂತಸದ ವಿಷಯ. ಇನ್ನು ಇದೇ ಸಮಯದಲ್ಲಿ ಅಂಗಾಂಗ ದಾನದ ಬಗ್ಗೆ ಕೂಡ ಮುಖ್ಯಮಂತ್ರಿಗಳು ಅರಿವು ಮೂಡಿಸುವ ಕೆಲಸ ಮಾಡಿದ್ದರು. ಇದಾದ ಬಳಿಕ ಇದೀಗ ಮತ್ತೊಂದು ನಿರ್ಧಾರವನ್ನು ತೆಗೆದು ಕೊಂಡಿರುವ ಬಸವರಾಜ ಬೊಮ್ಮಾಯಿ ಮತ್ತೊಂದು ಉತ್ತಮ ನಡೆ ತೆಗೆದುಕೊಂಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಎಲ್ಲಾ ನಗರ ಸಂಚಾರಿ ಪೊಲೀಸರಿಗೆ ತಮಗೆ ಜೀರೋ ಟ್ರಾಫಿಕ್ ಅಗತ್ಯತೆ ಇಲ್ಲ. ಕೆಲವು ಕಡೆ ವಾಹನ ದಟ್ಟಣೆ ಹೆಚ್ಚಿರುವ ಕಡೆ ಮಾತ್ರ ಸಿಗ್ನಲ್ ಫ್ರೀ ಬಿಡಿ ಸಾಕು ಆದರೆ ಸಾರ್ವಜನಿಕರನ್ನು ತಡೆಯುವ ಕೆಲಸ ಮಾಡಬಾರದು ಹಾಗೂ ನಾನು ಎಂತಹ ಕೆಲಸ ಮಾಡುತ್ತಿದ್ದರು ಕೂಡ ಆಂಬುಲೆನ್ಸ್ ವಾಹನಗಳಿಗೆ ಅನುವು ಮಾಡಿ ಕೊಡಬೇಕು ಎಂದು ಹೇಳಿದ್ದಾರೆ ಹಾಗೂ ಯಾವುದೇ ಝೀರೋ ಟ್ರಾಫಿಕ್ ಮಾಡುತ್ತೇವೆ ಎಂದು ಸಾರ್ವಜನಿಕರನ್ನು ತಡೆಯುವ ಕೆಲಸ ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ.