ಕೊರೊನ ನಡುವೆಯೂ ಬಿಡುಗಡೆಯಾಗಿ ಯಶಸ್ಸು ಗಳಿಸಿದ ಹಾಗೂ ಫ್ಲಾಪ್ ಆದ ಚಿತ್ರಗಳು ಯಾವ್ಯಾವು ಗೊತ್ತೇ??

ಕೊರೊನ ನಡುವೆಯೂ ಬಿಡುಗಡೆಯಾಗಿ ಯಶಸ್ಸು ಗಳಿಸಿದ ಹಾಗೂ ಫ್ಲಾಪ್ ಆದ ಚಿತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ 2021 ವರ್ಷ ಕನ್ನಡ ಚಿತ್ರರಂಗಕ್ಕೆ ಅಥವಾ ಭಾರತೀಯ ಚಿತ್ರರಂಗಕ್ಕೆ ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಕಾರಣ ನಿಮಗೆಲ್ಲರಿಗೂ ಗೊತ್ತೇ ಇದೆ‌. ಆದರೂ ಕೂಡ ಈ ವರ್ಷದಲ್ಲಿ ಹಲವಾರು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಇದರಲ್ಲಿ ಯಶಸ್ವಿಯಾಗಿರುವ ಚಿತ್ರಗಳು ಯಾವುವು ಹಾಗೂ ಫ್ಲಾಪ್ ಆಗಿರುವ ಚಿತ್ರಗಳು ಯಾವುವು ಎಂಬುದನ್ನು ನಾವು ನಿಮಗೆ ಎಂದು ಹೇಳುತ್ತೇವೆ.

ರಾಜತಂತ್ರ ರಾಘವೇಂದ್ರ ರಾಜಕುಮಾರ್ ನಟನೆಯ ರಾಜತಂತ್ರ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಸೋಲನ್ನು ಅನುಭವಿಸಿತು. ಮಾಸ್ಟರ್ ತಮಿಳಿನ ತಲಪತಿ ವಿಜಯ್ ನಟನೆಯ ಮಾಸ್ಟರ್ ಚಿತ್ರ ಕನ್ನಡದಲ್ಲಿ ಕೂಡ ಬಿಡುಗಡೆಯಾಗಿತ್ತು. ಒಟ್ಟಾರೆಯಾಗಿ ಚಿತ್ರ 200 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿ ಯಶಸ್ವಿ ಚಿತ್ರ ಎನಿಸಿತು.

ರಾಮಾರ್ಜುನ ಅನಿಷ್ ತೇಜೇಶ್ವರ್ ನಿರ್ದೇಶಿಸಿ ನಾಯಕ ನಟನಾಗಿ ನಟಿಸಿದಂತಹ ರಾಮಾರ್ಜುನ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದರೂ ಸಹ ಚಿತ್ರಮಂದಿರಗಳಲ್ಲಿ ಉಳಿದುಕೊಳ್ಳಲು ವಿಫಲವಾಯಿತು. ಶ್ಯಾಡೋ ವಿನೋದ್ ಪ್ರಭಾಕರ್ ನಟನೆಯ ಶ್ಯಾಡೋ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸನ್ನು ಸಾಧಿಸಲಿಲ್ಲ. ಮಂಗಳವಾರ ರಜಾದಿನ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ನಟನೆಯ ಮಂಗಳವಾರ ರಜಾದಿನ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ನಾಯಕನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರು ಆಗಿದ್ದರೂ ಕೂಡ ಚಿತ್ರವನ್ನು ನೋಡಲು ಪ್ರೇಕ್ಷಕರು ಮಂದಿರಕ್ಕೆ ಬಂದಿದ್ದು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಅತಿಥಿ ಪಾತ್ರಕ್ಕಾಗಿ.

ಪೊಗರು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪೊಗರು ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ನಲವತ್ತು ಕೋಟಿಗೂ ಅಧಿಕ ಕಲೆಕ್ಷನ್ನು ಪಡೆಯಿತು. ಸೂಪರ್ ಹಿಟ್ ಎಂಬ ಪಟ್ಟವನ್ನು ಕೂಡ ಪಡೆದಿತ್ತು. ಕುಷ್ಕ ಚಂದು ಗೌಡ ಹಾಗೂ ಸಂಜನಾ ಆನಂದ್ ನಟನೆಯ ಕುಷ್ಕ ಬಾಕ್ಸಾಫೀಸ್ ನಲ್ಲಿ ಹೇಳಹೆಸರಿಲ್ಲದಂತೆ ಮಾಯವಾಯಿತು. ಹೀರೋ ರಿಷಬ್ ಶೆಟ್ಟಿ ನಟನೆಯ ಹೀರೋ ಚಿತ್ರ ಪ್ರೇಕ್ಷಕರ ಮನಗೆದ್ದಿದ್ದರು ಸಹ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದ ರಿಂದ ಚಿತ್ರಮಂದಿರಗಳಿಂದ ಚಿತ್ರ ಕಾಣೆಯಾಯಿತು.

ರಾಬರ್ಟ್ ಈ ವರ್ಷದ ಅತ್ಯಂತ ಹೆಚ್ಚು ಯಶಸ್ಸು ಪಡೆದಂತಹ ಕನ್ನಡ ಚಿತ್ರವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಬಾಕ್ಸಾಫೀಸ್ ನಲ್ಲಿ 80 ಕೋಟಿಗೂ ಅಧಿಕ ಹೆಚ್ಚು ಕಲೆಕ್ಷನ್ ಅನ್ನು ಪಡೆದಿದೆ. ಮುಂದುವರೆದ ಅಧ್ಯಾಯ ಆದಿತ್ಯ ನಟನೆಯ ಮುಂದುವರೆದ ಅಧ್ಯಾಯ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪ್ರೇಕ್ಷಕರಿಗೆ ರುಚಿಸಲಿಲ್ಲ. ರಣಂ ಚೇತನ್ ಕುಮಾರ್ ಹಾಗೂ ಚಿರಂಜೀವಿ ಸರ್ಜಾ ನಟನೆಯ ರಣಂ ಚಿತ್ರ ಬಿಡುಗಡೆಯಾದರೂ ಸಹ ಪ್ರೇಕ್ಷಕರಿಗೆ ತಿಳಿಯಲಿಲ್ಲ. ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಕ್ಷಣ ಚಿತ್ರಮಂದಿರಗಳು ಲಾಕ್ ಡೌನ್ ಕಾರಣದಿಂದಾಗಿ ಮುಚ್ಚಿದ್ದವು. ಆದರೆ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರಕಿದೆ.