ಬಿಗ್ ಬಾಸ್ ಶೋ ಅನ್ನು ಮಂಜು ಗೆಲ್ಲಲು ಮನರಂಜನೆ ಕಾರಣವಲ್ಲ, ಮತ್ತೇನು ಗೊತ್ತೆ?? ಕೇವಲ ಇದರಿಂದ ಮಾತ್ರ ಮಂಜು ಗೆದ್ದದ್ದು

ನಮಸ್ಕಾರ ಸ್ನೇಹಿತರೇ ಜೆಪಿನಗರದ ಪೆಟ್ರೋಲ್ ಬಂಕ್ ನಿಂದ ಮಜಾಭಾರತ ವರೆಗೆ ಮಂಜು ಪಾವಗಡ ರವರು ಕಷ್ಟಪಟ್ಟು ಬಂದು ತಮ್ಮ ಪ್ರತಿಭೆಯ ಮೂಲಕ ಕನ್ನಡ ಜನತೆಯ ಮನ ಗೆದ್ದಿದ್ದಾರೆ. ಈಗ ತಮ್ಮ ಪ್ರತಿಭೆಯ ಮೂಲಕವಷ್ಟೇ ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಟ್ರೋಫಿಯನ್ನು ಗೆದ್ದಿದ್ದಾರೆ. ಹೌದು ಸ್ನೇಹಿತರೆ ಮಂಜು ಮೊದಲು ಬಿಗ್ ಬಾಸ್ ಮನೆಗೆ ಬಂದಾಗ ದಿವ್ಯ ಸುರೇಶ್ ರವರ ಜೊತೆಗೆ ಇದ್ದದ್ದು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ.

ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾದ ನಂತರ ಮಂಜು ಪಾವಗಡ ರವರು ಮೊದಲಿಗಿಂತ ಹೆಚ್ಚಾಗಿ ಲವಲವಿಕೆಯಿಂದ ಹಾಗೂ ಎಲ್ಲರ ಜೊತೆಗೆ ಸೇರಿ ಕಾಣಿಸಿಕೊಳ್ಳುತ್ತಿದ್ದರು. ಇದು ಅವರ ಗೆಲುವಿಗೆ ಒಂದು ಮುಖ್ಯ ಕಾರಣವೆಂದು ಹೇಳಬಹುದು. ಇನ್ನು ಮಂಜು ಪಾವಗಡ ರವರು ಗೆದ್ದಿರುವುದಕ್ಕೆ ಬೇರೆ ಸ್ಪರ್ಧಿಗಳ ಅಭಿಮಾನಿಗಳು ಸಾಕಷ್ಟು ಕಾರಣಗಳನ್ನು ಅಲ್ಲಗಳೆಯುತ್ತಿದ್ದಾರೆ. ಕೆಲವೊಮ್ಮೆ ಶಿಫಾರಸ್ಸಿನ ಕಾರಣ ಹೇಳುತ್ತಿದ್ದಾರೆ. ಆದರೆ ಈಗ ಮಂಜು ಪಾವಗಡ ರವರ ಗೆಲುವಿಗೆ ಇನ್ನೊಂದು ಕಾರಣವನ್ನು ಕೂಡ ಹೇಳುತ್ತಿದ್ದಾರೆ ಆ ಕಾರಣ ಏನು ಗೊತ್ತೆ.

ಹೌದು ಸ್ನೇಹಿತರೆ ಮಂಜು ಪಾವಗಡ ರವರು ಬಡಕುಟುಂಬದಿಂದ ಬಂದ ಕಾರಣದಿಂದಾಗಿ ಸಿಂಪತಿ ಹಾಗೂ ಬಡವನೆಂಬ ಕಾರಣದಿಂದಾಗಿ ಅವರನ್ನು ಗೆಲ್ಲಿಸಿದ್ದಾರೆ ಎಂಬುದಾಗಿ ಸ್ಪರ್ಧಿಗಳ ಅಭಿಮಾನಿಗಳು ಈಗ ದೂರುತ್ತಿದ್ದಾರೆ. ಬಡತನ ಹಾಗೂ ಸಿಂಪತಿ ಮೂಲಕ ಗೆಲ್ಲಿಸುವುದಾದರೆ ನೀವು ಏಕೆ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಮಾಡಬೇಕು ಎಂಬುದಾಗಿ ಕೂಡ ಪ್ರಶ್ನಿಸಿದ್ದಾರೆ. ಬೇರೆ ಸ್ಪರ್ಧಿಗಳ ಅಭಿಮಾನಿಗಳು ಏನೇ ಹೇಳಲಿ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಇದ್ದ ಜನರಲ್ಲಿ ಅತ್ಯಂತ ಮನೋರಂಜನೆಯ ವ್ಯಕ್ತಿಯೆಂದರೆ ಅದು ಖಂಡಿತವಾಗಿಯೂ ಮಜಾಭಾರತ ಖ್ಯಾತಿಯ ಮಂಜು ಪಾವಗಡ ಎಂದರೆ ತಪ್ಪಾಗಲಾರದು. ನಿಮ್ಮ ಪ್ರಕಾರ ಮಂಜು ಪಾವಗಡ ರವರು ಗೆದ್ದಿರುವುದು ನ್ಯಾಯಸಮ್ಮತವೇ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav