ಬಿಗ್ ನ್ಯೂಸ್: ರವಿಶಾಸ್ತ್ರಿ ರವರು ಕೋಚ್ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಫಿಕ್ಸ್, ಮುಂದಿನ ಕೋಚ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಶತಮಾನಗಳಿಂದಲೂ ಭಾರತದಲ್ಲಿ ಗುರುವಿಗೆ ಅಗ್ರಸ್ಥಾನ. ಅದು ದ್ರೋಣಾಚಾರ್ಯರಿಂದ ಹಿಡಿದು ಇಂದಿನ ಕೋಚ್ ಗಳ ತನಕ. ಒಂದು ತಂಡದ ಕೀರ್ತಿ ಹಾಗೂ ಅಪಕೀರ್ತಿ ನಡುವೆ ಗುರುಗಳ ಅಥವಾ ಕೋಚ್ ಗಳ ಪಾತ್ರ ಮಹತ್ವದ್ದು. ಅದರಲ್ಲೂ ಭಾರತ ಕ್ರಿಕೇಟ್ ತಂಡದ ಕೋಚ್ ಗಳ ಪೈಕಿ ಅತಿ ಹೆಚ್ಚು ಯಶಸ್ವಿಯಾದದ್ದು ಗ್ಯಾರಿ ಕಸ್ಟನ್, ಜಾನ್ ರೈಟ್ ಮತ್ತು ರವಿಶಾಸ್ತ್ರಿ. 2017ರಲ್ಲಿ ತಂಡದ ಕೋಚ್ ಆದ ರವಿಶಾಸ್ತ್ರಿ ಅವಧಿ ಇದೇ ಅಕ್ಟೋಬರ್ ಗೆ ಮುಗಿಯಲಿದೆ. ಹಾಗಾಗಿ ಸದ್ಯ ಭಾರತ ಕ್ರಿಕೇಟ್ ತಂಡ ಹೊಸ ಕೋಚ್ ನತ್ತ ಗಮನ ಹರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸದ್ಯ ಭಾರತ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಕಾರ್ಯನಿರ್ವಹಿಸುತ್ತಿದ್ದರೇ, ಬೌಲಿಂಗ್ ಕೋಚ್ ಆಗಿ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋರ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಆರ್.ಶ್ರೀಧರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೇ ವಿಪರ್ಯಾಸವೆಂಬಂತೆ ರವಿಶಾಸ್ತ್ರಿ ಕೋಚ್ ಆದಾಗಿನಿಂದ ಭಾರತ ತಂಡ ಒಂದೇ ಒಂದು ವಿಶ್ವ ಚಾಂಪಿಯನ್ ಟ್ರೋಫಿಯನ್ನು ಗೆದ್ದಿಲ್ಲ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2019 ರ ಏಕದಿನ ವಿಶ್ವಕಪ್ ಹಾಗೂ 2021 ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹೀಗೆ ಈ ಮೂರು ಮಹತ್ವದ ಟೂರ್ನಿಗಳಲ್ಲಿ ಭಾರತ ಸೋಲನ್ನು ಕಂಡಿತ್ತು. ಆದರೇ ಹೊಸಬರೆಲ್ಲಾ ಸೇರಿಕೊಂಡು ಕಳೆದ ವರ್ಷ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದು ಭಾರತ ತಂಡದ ಶ್ರೇಷ್ಠ ಸಾಧನೆಯಾಯಿತು.

ಹಾಗಾಗಿ ಈ ವರ್ಷ ಅಕ್ಟೋಬರ್ ನವೆಂಬರ್ ನಲ್ಲಿ ನಡೆಯಲಿರುವ ವಿಶ್ವ ಟಿ 20 ಚಾಂಪಿಯನ್ ಶಿಪ್ ನಡೆದ ನಂತರ ಕೋಚ್ ಗಳನ್ನ ಬದಲಾಯಿಸುವ ಸಾಧ್ಯತೆ ನಿಚ್ಚಳವಾಗಿದೆ. ರವಿಶಾಸ್ತ್ರಿ ನಂತರ ಮುಂದೆ ಯಾರು ಎಂಬ ಪ್ರಶ್ನೆಗೆ ಈಗ ಹಲವಾರು ಉತ್ತರಗಳು ಬರುತ್ತಿವೆ‌. ಬಹುತೇಖ ಜನ ಕನ್ನಡಿಗ ರಾಹುಲ್ ದ್ರಾವಿಡ್ ಪರ ದನಿ ಎತ್ತಿದರೇ, ಇನ್ನು ಕೆಲವರು ವಿದೇಶಿ ಕೋಚ್ ಮೊರೆ ಹೋಗುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೇ ತಂಡದ ಹಿತದೃಷ್ಠಿಯಿಂದ ಹಾಗೂ 2022ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2023 ರ ವಿಶ್ವಕಪ್ ದೃಷ್ಠಿಯಿಂದ ಭಾರತ ತಂಡಕ್ಕೆ ಒಬ್ಬ ಸೂಕ್ತ ಹಾಗೂ ಸಮರ್ಥ ಕೋಚ್ ರನ್ನ ನೇಮಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಭಾರತ ತಂಡದ ಕೋಚ್ ಆಗಲು ಯಾರು ಸೂಕ್ತ ಎಂಬ ನಿಮ್ಮ ಮುಕ್ತ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav