ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇದ್ದಕ್ಕಿದ್ದ ಹಾಗೆ ರಾಹುಲ್ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಆಕಾಶ್ ಚೋಪ್ರಾ, ಏನಂತೆ ಗೊತ್ತೇ???

3

ನಮಸ್ಕಾರ ಸ್ನೇಹಿತರೇ ಕನ್ನಡಿಗ ಕೆ.ಎಲ್ ರಾಹುಲ್ ಬಹಳ ವರ್ಷಗಳ ನಂತರ ಟೆಸ್ಟ್ ಕ್ರಿಕೇಟ್ ಗೆ ವಾಪಸಾತಿ ಮಾಡಿ ಹಲವಾರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ನಾಟಿಂಗ್ಹ್ಯಾಮ್ ನ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 84 ಹಾಗೂ ದ್ವೀತಿಯ ಇನ್ನಿಂಗ್ಸ್ ನಲ್ಲಿ 26 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ನ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಹಾಗೇ ನೋಡಿದರೇ ರಾಹುಲ್ ಟೆಸ್ಟ್ ಆರಂಭವಾಗುವ ಮುಂಚಿನ ಎರಡು ದಿನಗಳಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದೇ ಇರಲಿಲ್ಲ.

ಆದರೇ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರವಾಲ್ ನೆಟ್ಸ್ ನಲ್ಲಿ ಇಂಜುರಿಗೊಂಡ ಕಾರಣ ಅನಿವಾರ್ಯವಾಗಿ ರಾಹುಲ್ ಗೆ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನ ಎರಡು ಕೈಯಲ್ಲಿ ಬಳಸಿಕೊಂಡ ರಾಹುಲ್ ಮಿಂಚಿದರು. ಈ ಬಗ್ಗೆ ಈಗ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ರಾಹುಲ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೌದು ಮಯಾಂಕ್ ಅಗರವಾಲ್ ಫಿಟ್ ಆಗಿರುವ ಕಾರಣ ಅವರು ಎರಡನೇ ಟೆಸ್ಟ್ ನಲ್ಲಿ ರಾಹುಲ್ ರವರ ಸ್ಥಾನವನ್ನ ತುಂಬಲಿದ್ದಾರೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಆದರೇ ಅದನ್ನು ಅಲ್ಲಗಳೆದಿರುವ ಆಕಾಶ್ ಚೋಪ್ರಾ , ಕೆ.ಎಲ್.ರಾಹುಲ್ ರವರೇ ಇನ್ನುಳಿದ ಸರಣಿಗೆ ಭಾರತದ ಪರ ಇನ್ನಿಂಗ್ಸ್ ಆರಂಭಿಸುತ್ತಾರೆ, ಒಂದು ವೇಳೆ ಹೀಗೆ ನಡೆಯದಿದ್ದರೇ, ನನ್ನ ಹೆಸರನ್ನು ಬೇಕಾದರೇ ಬದಲಾಯಿಸಿ ಎಂದು ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.

ಇಷ್ಟು ದಿವಸ ರಾಹುಲ್ ಬೇಡ ಪೃಥಿವಿ ಶಾಹ್ ಬೇಕು ಎನ್ನುತ್ತಿದ್ದ ಆಕಾಶ್ ಇದ್ದಕ್ಕಿದ್ದ ಹಾಗೆ ಹೀಗೆ ಹೇಳಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಈ ಮೊದಲು ಆರಂಭಿಕರಾಗಿ ಶುಭಮಾನ್ ಗಿಲ್ ಇದ್ದರು. ಆದರೇ ಅವರು ಇಂಜುರಿಗೊಂಡ ಕಾರಣ ಮಯಾಂಕ್ ಅವಕಾಶ ಪಡೆದಿದ್ದರು. ಆದರೇ ಮಯಾಂಕ್ ಸಹ ಇಂಜುರಿಗೊಂಡ ಕಾರಣ ಅಂತಿಮ ಘಳಿಗೆಯಲ್ಲಿ ರಾಹುಲ್ ಗೆ ಅವಕಾಶ ಸಿಕ್ಕಿತು. ಹಾಗಾಗಿ ಮುಂಬರುವ ನಾಲ್ಕು ಟೆಸ್ಟ್ ಗಳಲ್ಲಿ ಫಾರ್ಮ್ ಗೆ ಮರಳಿರುವ ರಾಹುಲ್ ರನ್ನೇ ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. ಎರಡನೇ ಟೆಸ್ಟ್ ಗೆ ಮಹಮದ್ ಸಿರಾಜ್ ಬದಲು ಇಶಾಂತ್ ಶರ್ಮಾರಿಗೆ ಅವಕಾಶ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.