ಹೊಸ ಸಚಿವರ ಗೃಹ ಸಚಿವರ ಹೊಸ ಟಾರ್ಗೆಟ್ ಫಿಕ್ಸ್, ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಹತ್ವದ ಹೇಳಿಕೆ, ಯಾವ್ಯಾವು ಗೊತ್ತೇ??
ಹೊಸ ಸಚಿವರ ಗೃಹ ಸಚಿವರ ಹೊಸ ಟಾರ್ಗೆಟ್ ಫಿಕ್ಸ್, ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಹತ್ವದ ಹೇಳಿಕೆ, ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಕರ್ನಾಟಕದಲ್ಲಿ ಮತ್ತೊಬ್ಬರು ಮುಖ್ಯಮಂತ್ರಿ ಬಂದು ಹೊಸ ಸಂಪುಟ ರಚನೆ ಕೂಡ ಮುಗಿದು ಹೋಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲ ಪಕ್ಷಗಳಲ್ಲಿ ಇರುವಂತೆ ಕೆಲವು ಸಚಿವರು ಬಿಜೆಪಿ ಪಕ್ಷದಲ್ಲಿ ತಮಗೆ ನೀಡಿರುವ ಖಾತೆ ಹಾಗೂ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿರುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಆದರೆ ಇದೇ ಸಮಯದಲ್ಲಿ ಹೊಸದಾಗಿ ಸಚಿವರಾಗಿ ಆಯ್ಕೆಯಾಗಿರುವ ಸಚಿವರು ಯಾವ ರೀತಿಯ ಕೆಲಸ ಮಾಡುವ ಮೂಲಕ ಕರ್ನಾಟಕದಲ್ಲಿನ ಸಮಸ್ಯೆಗಳನ್ನು ನಿರ್ವಹಣೆ ಮಾಡುತ್ತಾರೆ ಎಂಬುದರ ಕುರಿತು ಕೂಡ ಚರ್ಚೆ ನಡೆಯುತ್ತಿದೆ.
ಮೊದಲೇ ಸಮಸ್ಯೆಗಳಿಂದ ತುಂಬಿ ತುಳುಕುತ್ತಿದ್ದ ಕರ್ನಾಟಕದಲ್ಲಿ ಇದೀಗ ಕೋರೋಣ ಹಾವಳಿಯಿಂದ ಬಹುತೇಕ ಆರ್ಥಿಕ ಸಮಸ್ಯೆಗಳು ಮತ್ತೆ ಎದುರಾಗಿದೆ, ಅಷ್ಟೇ ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಸವಾಲುಗಳು ಇದ್ದು ಎಲ್ಲಾ ಸಚಿವರು ತಮ್ಮ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಿದರೆ ಮಾತ್ರ ಕರ್ನಾಟಕ ಮತ್ತೆ ಮೇಲೇಳಲು ಸಾಧ್ಯವಾಗಲಿದೆ. ಇಂತಹ ಸಮಯದಲ್ಲಿ ನೂತನ ಗೃಹ ಸಚಿವರಾಗಿ ಆಯ್ಕೆಯಾಗಿರುವ ಆರಗ ಜ್ಞಾನೇಂದ್ರ ರವರು ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡ ತಕ್ಷಣ ತಮ್ಮ ಕೆಲಸ ಆರಂಭಿಸಿದಂತೆ ಕಾಣುತ್ತಿದೆ.
ಹೌದು ಸ್ನೇಹಿತರೇ ಪ್ರತಿಯೊಬ್ಬ ಇಲಾಖೆಯ ಸಚಿವರು ಕೂಡ ಅವರವರ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದರೆ ಅದಕ್ಕಿಂತ ಉತ್ತಮವಾದ ಕೆಲಸ ಮತ್ತೊಂದಿಲ್ಲ, ಅದೇ ರೀತಿ ಗೃಹ ಸಚಿವರು ಕೂಡ ತಮ್ಮ ಕಾರ್ಯದ ಕುರಿತು ಮಾತನಾಡಿದ್ದು ತಾವು ಒಂದು ಹೊಸ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ, ಈ ಕುರಿತು ಅಧಿಕೃತವಾಗಿ ಮಾತನಾಡಿರುವ ಹೊಸ ಗೃಹ ಸಚಿವರಾದ ಜ್ಞಾನೇಂದ್ರ ರವರು, ಈಗ ಮಾತನಾಡಿ ಕರ್ನಾಟಕದಲ್ಲಿ ಅಕ್ರಮವಾಗಿ ಅದರಲ್ಲಿಯೂ ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ನುಸುಳುಕೋರರನ್ನು ಕರ್ನಾಟಕ ರಾಜ್ಯದಿಂದ ಹೊರಗೆ ಕಳುಹಿಸಿ ಗಡಿಪಾರು ಮಾಡುವುದು ನನ್ನ ಮೊದಲನೇ ಆದ್ಯತೆ ಎಂದು ಹೇಳಿಕೆ ನೀಡಿದ್ದಾರೆ ಹಾಗೂ ಇದೇ ಸಮಯದಲ್ಲಿ ಪೊಲೀಸ್ ಇಲಾಖೆಯಲ್ಲಿಯೂ ಕೂಡ ಮಹತ್ವದ ಬದಲಾವಣೆ ತರಲು ನಾನು ಬದಲಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ನನಗೆ ಜೀರೋ ಟ್ರಾಫಿಕ್ ಅಗತ್ಯತೆ ಇಲ್ಲ ಎಂದು ಕೂಡ ಹೇಳಿದ್ದಾರೆ.