ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ವೈಷ್ಣವಿ ಗೌಡ ರವರಿಗೆ ಸಿಕ್ಕಿರುವ ಒಟ್ಟು ಸಂಭಾವನೆ ಎಷ್ಟು ಗೊತ್ತಾ??
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ವೈಷ್ಣವಿ ಗೌಡ ರವರಿಗೆ ಸಿಕ್ಕಿರುವ ಒಟ್ಟು ಸಂಭಾವನೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಎಲ್ಲಿ ನೋಡಿದರೂ ಸಹ ಬಿಗ್ ಬಾಸ್ ಫೈನಲ್ ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಸುದ್ದಿಯದ್ದೇ ಹವಾ. ಈಗಾಗಲೇ ಫಿನಾಲೆ ಯ ಒಂದು ದಿನ ಕಳೆದಿದೆ. ನಿನ್ನಯ ಫಿನಾಲೆ ಯ ಮೊದಲ ದಿನದ ಹಂತವಾಗಿ ಉದ್ಯಮಿ ಪ್ರಶಾಂತ್ ಸಂಬರ್ಗಿ ಹಾಗೂ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಿಂದ ಪ್ರಾರಂಭವಾದಂತಹ,
ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಫಿನಾಲೆ ಮೊದಲ ದಿನದಲ್ಲಿ ಮೊದಲಿಗೆ ಪ್ರಶಾಂತ್ ಸಂಬರ್ಗಿ ಅವರನ್ನು ಐದನೇ ಸ್ಥಾನದಿಂದ ಎಲಿಮಿನೇಟ್ ಮಾಡಿತ್ತು. ಇನ್ನು ಎಲ್ಲರ ನೆಚ್ಚಿನ ಅಭ್ಯರ್ಥಿಯಾಗಿದ್ದ ವೈಷ್ಣವಿ ಗೌಡ ರವರು ಕೂಡ ನಾಲ್ಕನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಗೆಲ್ಲಲು ಫೇವರಿಟ್ ಸ್ಪರ್ಧಿಯಾಗಿದ್ದ ವೈಷ್ಣವಿ ಗೌಡರವರು ನಾಲ್ಕನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿದ್ದು ಅವರ ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರಾಸೆಯನ್ನುಂಟು ಮಾಡಿದೆ. ಏನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಹಿಂಬಾಲಕರನ್ನು ಹಾಗೂ ಅಭಿಮಾನಿಗಳು ಹೊಂದಿದ್ದ ವೈಷ್ಣವಿ ಗೌಡರವರು,
ನಾಲ್ಕನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 17 ವಾರಗಳನ್ನು ಕಳೆದಿರುವ ವೈಷ್ಣವಿ ಗೌಡ ಅವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೇ. ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ನಟಿ ವೈಷ್ಣವಿ ಗೌಡ ರವರು ಬರೋಬ್ಬರಿ ಹದಿನೇಳು ವಾರಗಳನ್ನು ಕಳೆದಿದ್ದಾರೆ. ವೈಷ್ಣವಿ ಗೌಡ ರವರಿಗೆ ಪ್ರತಿ ವಾರಕ್ಕೆ 40 ಸಾವಿರ ಸಂಭಾವನೆ ಯಂತೆ 6 ಲಕ್ಷ 80 ಸಾವಿರ ರೂಪಾಯಿಗಳನ್ನು ಪಡೆದಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಬಂದಿದ್ದ ಕ್ಕಾಗಿ ವಾಹಿನಿಯ ಪರವಾಗಿ ಮೂರುವರೆ ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ಪಡೆದುಕೊಂಡಿದ್ದಾರೆ.