ಈ ವಾರದಿಂದ ಶ್ರೇಷ್ಠ ಶ್ರಾವಣ ಮಾಸ ಆರಂಭ, ಈ ಋತುವಿನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಗೊತ್ತೇ??
ಈ ವಾರದಿಂದ ಶ್ರೇಷ್ಠ ಶ್ರಾವಣ ಮಾಸ ಆರಂಭ, ಈ ಋತುವಿನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಆಶಾಢ ಕಳೆದು ಶ್ರಾವಣ ಮಾಸ ಬಂದೇ ಬಿಡ್ತು. ಅಗಷ್ಟ್ ತಿಂಗಳಿನಲ್ಲಿ ಶುರುವಾಗುವ ಶ್ರಾವಣ ಮಾಸದ ಮೊದಲ ಸೋಮವಾರ ಅತ್ಯಂತ ಶ್ರೇಷ್ಠ. ಶಿವನ ಭಕ್ತರಿಗೆ ಇದು ಅತ್ಯಂತ ಮುಖ್ಯವಾದ ದಿನ. ಶಿವನ ಭಕ್ತಾದಿಗಳು ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳುತ್ತಾರೆ ಈ ಶ್ರಾವಣ ಮಾಸದಲ್ಲಿ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಶಿವನಿಗೆ ಪ್ರೀತಿಪಾತ್ರರಾಗುತ್ತೇವೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದಲ್ಲಿ ಕೆಲವು ನೇಮ ನಿಷ್ಠೆಗಳನ್ನು ಮೈಗೂಡಿಸಿಕೊಂಡರೆ ಅದು ಶಿವನ ಭಕ್ತಿಯನ್ನು ತೋರಿಸುವುದು ಮಾತ್ರವಲ್ಲದೇ ನಮ್ಮಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಶ್ರಾವಣ ಮಾಸದಲ್ಲಿ ಏನೆಲ್ಲಾ ವಿಧಿ ವಿಧಾನಗಳನ್ನು ಅನುಸರಿಸಬೇಕು ಹಾಗೂ ಉಳಿದ ದಿನದಲ್ಲಿ ಮಾಡುವಂತ ಯಾವ ಚಟುವಟಿಕೆಯನ್ನು ಮಾಡದಿರುವುದು ಉತ್ತಮ ಎಂಬಿತ್ಯಾದಿ ವಿಷಯಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.
ಶ್ರಾವಣ ಮಾಸದಲ್ಲಿ ಮುಂಜಾನೆ ಮಿಂದು ಶಿವನ ಪೂಜೆ ಮಾಡಿ ನಂತರ ಉಪಹಾರ ಮಾಡುವುದು ಒಳ್ಳೆಯದು. ಈ ಸಮಯದಲ್ಲಿ ಶಿವನಿಗೆ ಅಭಿಷೇಕಕ್ಕಿಂತ ಹೆಚ್ಚಾಗಿ ’ಓಂ ನಮ ಶಿವಾಯಃ’ ಮಂತ್ರವನ್ನು ತಪ್ಪದೇ ಪಠಿಸಬೇಕು. ಇನ್ನು ಶಿವನಿಗೆ ಇಷ್ಟವಾದ ಬಿಲ್ವಪತ್ರೆಯನ್ನು ಎಲ್ಲಿದ್ದರೂ ತಂದು ಶಿವನಿಗೆ ಅರ್ಪಿಸುವುದು ಅತ್ಯಂತ ಶ್ರೇಷ್ಠ. ಶಿವನ ಜೊತೆ ಶ್ರಾವಣದಲ್ಲಿ ತಾಯಿ ಪಾರ್ವತಿಯನ್ನೂ ಕೂಡ ಅಷ್ಟೇ ನಿಷ್ಠೆಯಿಂದ ಪೂಜಿಸಬೇಕು. ಶ್ರಾವಣ ಸೋಮವಾರ ಉಪವಾಸ ಮಾಡುವುದು ಹಾಗೆಯೇ ರುದ್ರಾಭಿಶೇಷ ಮಾಡುವುದು ಕೂಡ ಶಿವನ ಕೃಪೆಗೆ ಪಾತ್ರರಾಗುವ ಒಂದು ಬಗೆ.
ಇನ್ನು ರುದ್ರಾಕ್ಷಿಯನ್ನು ನೀವು ಧರಿಸಬೇಕೆಂದುಕೊಂಡಿದ್ದರೆ, ಶ್ರಾವಣ ಮಾಸ ಇದಕ್ಕೆ ಸೂಕ್ತ ಸಮಯ. ಆದರೆ ಇದಕ್ಕೂ ನೇಮ ನಿಷ್ಠೆ ಬೇಕು. ಶ್ರಾವಣ ಮುಗಿದ ಮೇಲೂ ಸರಿಯಾದ ಪೂಜಾ ಕ್ರಮವನ್ನು ಅನುಸರಿಸುವುದಾದರೆ ಮಾತ್ರ ರುದ್ರಾಕ್ಷಿಯನ್ನು ಧರಿಸುವುದು ಸೂಕ್ತ. ಹಾಗಾಗಿ ರುದ್ರಾಕ್ಷಿಯಲ್ಲಿ ಯಾವ ರುದ್ರಾಕ್ಷಿ ಬಳಸಿದರೆ ಉತ್ತಮ ಹೇಗೆ ಧರಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದವರಿಂದ ಕೇಳಿ ಧರಿಸಿ.
ಇನ್ನು ಶ್ರಾವಣದಲ್ಲಿ ಏನು ಮಾಡಬಾರದು ಎಂಬುದಾದರೆ, ಶುಭ್ರ ಹಾಗೂ ಸ್ವಚ್ಛವಾದ ಬಟ್ಟೆಯನ್ನೇ ಧರಿಸಬೇಕು. ಸ್ನಾನ ಮಾಡಿ, ಶಿವನ ಆರಾಧನೆ ಮಾಡಿ ಉಪಹಾರ ಮಾಡಬೇಕು. ಈ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಬಳಸದೇ ಇರುವುದು ಉತ್ತಮ. ಹಾಗೆಯೇ ಮದ್ಯಪಾನ, ಧೂಮಪಾನ ಮೊದಲಾದ ವ್ಯಸನಗಳಿಂದ ದೂರವಿರಬೇಕು. ಮಾಂಸಹಾರವನ್ನೂ ಕೂಡ ಶ್ರಾವಣ ಮಾಸದಲ್ಲಿ ತಿನ್ನಬಾರದು. ಈ ಎಲ್ಲಾ ಕ್ರಮಗಳನ್ನು ಅನುಸರಿಸಿ ಭಕ್ತಿಯಿಂದ ಶ್ರದ್ಧೆಯಿಂದ ಶಿವವನ್ನು ನೆನೆದರೆ ಸದ್ಗತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.