ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಂಜು ಪಾವಗಡ ರವರಿಗೆ ಬಹುಮಾನದ 53 ಲಕ್ಷ ರೂಪಾಯಿ ಪೂರ್ತಿಯಾಗಿ ಸಿಕ್ಕಿಲ್ಲ, ಅಸಲಿಗೆ ನಿಜವಾಗಲೂ ಸಿಕ್ಕಿದೆಷ್ಟು ಗೊತ್ತಾ??

4

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಬಹುದಿನಗಳಿಂದ ಎಲ್ಲಾ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಂತಹ ಆ ದಿನ ಬಂದೇ ಬಿಟ್ಟಿದೆ. ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ನ ವಿಜೇತರು ಯಾರು ಎಂಬುದು ಈಗಾಗಲೇ ಘೋಷಣೆಯಾಗಿ ಬಿಟ್ಟಿದೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಅನ್ನು ಗೆದ್ದಿರುವುದು ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ರವರು. ಉತ್ತಮ ಜೀವನದ ಆಸೆಯಲ್ಲಿ ಬೆಂಗಳೂರಿನ ಬಾಗಿಲು ತಟ್ಟಿ ಬಂದು ಜೆಪಿನಗರದ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದಂತಹ ಮಂಜು ಪಾವಗಡ ರವರು ನಂತರ ಮಜಾಭಾರತ ವೇದಿಕೆಯಲ್ಲಿ ಅವಕಾಶವನ್ನು ಪಡೆದು ಅಲ್ಲಿ ಕೂಡ ಜನರ ಮನಸ್ಸನ್ನು ಗೆಲ್ಲುತ್ತಾರೆ.

ನಂತರ ಅಲ್ಲಿಂದ ಈ ಬಾರಿಯ ಬಿಗ್ ಬಾಸ್ ಗೆ ಆಯ್ಕೆಯಾಗಿ ಬಂದು ಮೊದಲ ಇನ್ನಿಂಗ್ಸ್ನಲ್ಲಿ ಅವರು ದಿವ್ಯ ಸುರೆಶ್ ಅವರೊಟ್ಟಿಗೆ ಇದ್ದಂತಹ ರೀತಿಯನ್ನು ಪ್ರೇಕ್ಷಕರು ಇಷ್ಟಪಟ್ಟಿರಲಿಲ್ಲ. ನಂತರ ಬಿಗ್ ಬಾಸ್ ಸೆಕೆಂಡ್ ಮಿಸ್ಟರನಂತರ ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ನ ಮೂಲಕ ಬಿಗ್ ಬಾಸ್ ಸೆಂಟರ್ ನೀಡಿ ತನ್ನ ತಪ್ಪುಗಳನ್ನೆಲ್ಲಾ ಸರಿಪಡಿಸಿ ಜನರ ಮನಸ್ಸನ್ನು ಗೆಲ್ಲಲು ಯಶಸ್ವಿಯಾದರು. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟರ ಫಲಿತಾಂಶ ಬಂದಿದ್ದು ಮಂಜು ಪಾವಗಡ ರವರು ಮೊದಲನೇ ಸ್ಥಾನದಲ್ಲಿ ಅರವಿಂದ ಕೆಪಿ ರವರು ಎರಡನೇ ಸ್ಥಾನದಲ್ಲಿ ದಿವ್ಯ ಉರುಡುಗ ಅವರು ಮೂರನೇ ಸ್ಥಾನದಲ್ಲಿ ವೈಷ್ಣವಿ ಗೌಡರವರು 4ನೇ ಸ್ಥಾನದಲ್ಲಿ ಹಾಗೂ ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು 5ನೇ ಸ್ಥಾನದಲ್ಲಿದ್ದಾರೆ.

ಇನ್ನು ಬಿಗ್ ಬಾಸ್ ವಿನ್ನರ್ ಗೆ ಕೊಡಮಾಡುವ 53 ಲಕ್ಷ ರೂಪಾಯಿಗಳು ಮಂಜು ಪಾವಗಡ ರವರಿಗೆ ಪೂರ್ಣವಾಗಿ ಸಿಕ್ಕಿಲ್ಲ. ಹಾಗಾದರೆ ಮಂಜು ಪಾವಗಡ ರವರಿಗೆ ಸಿಕ್ಕಿರುವ ಹಣವೆಷ್ಟು ಗೊತ್ತಾ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಮಂಜು ಪಾವಗಡ ರವರಿಗೆ ಬಹುಮಾನದ 53 ಲಕ್ಷ ರೂಪಾಯಿ ಯಲ್ಲಿ 34% ಟ್ಯಾಕ್ಸ್ ಹಣ ಕಳೆದು 34 ಲಕ್ಷದ 92 ಸಾವಿರ ರೂಪಾಯಿ ಮಾತ್ರ ದೊರಕಿದೆ. ಇನ್ನು ಕೇವಲ ಎಷ್ಟು ಮಾತ್ರವಲ್ಲದೆ ಮಂಜು ಪಾವಗಡ ರವರಿಗೆ ಬಿಗ್ ಬಾಸ್ ಮನೆಯಲ್ಲಿ 17 ವಾರಕ್ಕೆ ಸಂಭಾವನೆಯಾಗಿ 5 ಲಕ್ಷದ 10 ಸಾವಿರ ರೂಪಾಯಿ ದೊರಕಿದೆ. ಎಲ್ಲ ಒಟ್ಟು ಸೇರಿ ಸರಿಸುಮಾರು 40 ಲಕ್ಷ ರೂಪಾಯಿ ಬಹುಮಾನಗಳನ್ನು ಸಂಭಾವನೆಯಾಗಿ ಪಡೆದು ಕೊಂಡಿದ್ದಾರೆ ನಮ್ಮ ಮಂಜು ಪಾವಗಡ.