ಸೋಲನ್ನೇ ಕಾಣದ ಪವರ್ ಸ್ಟಾರ್, ಸತತ 6 ವರ್ಷಗಳ ಕಾಲ ಸೋತಿದ್ದೇಕೆ?? ಅವರು ಸೋತಿದ್ದಾದರೂ ಎಲ್ಲಿ ಗೊತ್ತೇ??
ಸೋಲನ್ನೇ ಕಾಣದ ಪವರ್ ಸ್ಟಾರ್, ಸತತ 6 ವರ್ಷಗಳ ಕಾಲ ಸೋತಿದ್ದೇಕೆ?? ಅವರು ಸೋತಿದ್ದಾದರೂ ಎಲ್ಲಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರವನ್ನು ತೆಗೆದುಕೊಂಡಾಗ ಇಂದಿನ ದಿನಗಳಲ್ಲಿ ಫ್ಯಾಮಿಲಿ ಆಡಿಯನ್ಸ್ ಮೆಚ್ಚುವಂತಹ ಅತ್ಯಂತ ನೆಚ್ಚಿನ ನಟ ಎಂದರೆ ಅದು ಖಂಡಿತವಾಗಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಾವು ಆರು ತಿಂಗಳ ಮಗುವಾಗಿದ್ದಾಗಲೇ ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪಾದಾರ್ಪಣೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲನಟನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಸಾರ್ ನಟರಿಗಿಂತ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡರು.
1985 ರಲ್ಲಿ ಬಿಡುಗಡೆಯಾದ ಅಂತಹ ಬೆಟ್ಟದ ಹೂವು ಚಿತ್ರಕ್ಕಾಗಿ ನ್ಯಾಷನಲ್ ಅವಾರ್ಡ್ ಪಡೆದಂತಹ ಮೊದಲ ಕನ್ನಡದ ಬಾಲನಟನಾಗಿ ಪ್ರಖ್ಯಾತಿಯನ್ನು ಪಡೆದುಕೊಂಡರು. ಎಲ್ಲ ಚಿತ್ರಗಳ ನಂತರ ಅವರು ಮತ್ತೊಮ್ಮೆ ನಟನಾಗಿ ಎಂಟ್ರಿಕೊಟ್ಟಿದ್ದು ಅಪ್ಪು ಚಿತ್ರದ ಮೂಲಕ. ಚಿತ್ರರಂಗದಲ್ಲಿ ಅವರು ಮೊದಮೊದಲಿಗೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ತಲುಪಿಸಿದ್ದರು. ಆದರೆ ಅವರಿಗೆ ಮೊದಲ ಫ್ಲಾಪ್ ಕಂಡಿದ್ದು ಬಿಂದಾಸ್ ಚಿತ್ರದ ಮೂಲಕ. ಇದಾದ ನಂತರ ರಾಜ್ ಚಿತ್ರವೂ ಕೂಡ ಫ್ಲಾಪ್ ಆಯಿತು. ನಂತರ ಸಂಪೂರ್ಣ ವಿದೇಶದಲ್ಲಿ ಚಿತ್ರೀಕರಣಗೊಂಡ ನಿನ್ನಿಂದಲೇ ಚಿತ್ರ ಕೂಡ ಫ್ಲಾಪ್ ಆಯಿತು.
ಒಟ್ಟು ಆರು ವರ್ಷದ ಅವಧಿಯಲ್ಲಿ ಆರಕ್ಕೂ ಹೆಚ್ಚಿನ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಯಿತು. ಇದಾದ ನಂತರ ಅವರು ಕಂಬ್ಯಾಕ್ ಮಾಡಿದ್ದು ರಾಜಕುಮಾರ ಚಿತ್ರದ ಮೂಲಕ. ಆದರೆ ಅದಾದ ನಂತರ ಬಂದ ಯುವರತ್ನ ಚಿತ್ರ ಕೂಡ ಹೇಳುವಷ್ಟು ಯಶಸ್ಸನ್ನು ಕಾಣಲಿಲ್ಲ. ಅಪ್ಪು ಎಂದರೆ ಗೆಲುವಿನ ಚಿತ್ರಗಳ ಸರದಾರ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ಅವರ ಸ್ಕ್ರಿಪ್ಟು ಸೆಲೆಕ್ಷನ್ ಹಾಗೂ ಚಿತ್ರಗಳ ಪ್ರಮೋಷನ್ ಚಿತ್ರವನ್ನು ಗೆಲ್ಲಿಸುವಲ್ಲಿ ಸಾಕಷ್ಟು ಎಡವುತ್ತಿವೆ ಎಂಬುದು ಪ್ರೇಕ್ಷಕರ ಹಾಗೂ ಅವರ ಅಭಿಮಾನಿಗಳ ದೂರು. ಇದೇನೇ ಇರಲಿ ಸ್ನೇಹಿತರೆ ಇವನ್ನೆಲ್ಲ ಮೆಟ್ಟಿನಿಂತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೊಮ್ಮೆ ಪವರ್ಫುಲ್ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ನೀಡಲು ಸಿದ್ಧರಾಗಿರುವುದು ಗ್ಯಾರಂಟಿ.