20 ರ ನಂತರ 40 ಕ್ಕೂ ಮುನ್ನವೇ ಚಿಕ್ಕ ವಯಸ್ಸಿಗೆ ಬಿಳಿ ಕೂದಲೇ?? ಮನೆಯಲ್ಲಿಯೇ ಹೀಗೆ ಮಾಡಿ ಕೂದಲು ಕಪ್ಪಾಗಿಸಿಕೊಳ್ಳಿ.

ನಮಸ್ಕಾರ ಸ್ನೇಹಿತರೇ ಇವತ್ತಿನ ಪೀಳಿಗೆಯ ಬಹುದೊಡ್ಡ ಸಮಸ್ಯೆ ಬಿಳಿ ಕೂದಲು. ವಯಸ್ಸು 20 ದಾಟುವುದಕ್ಕೂ ಮೊದಲೇ ಕೂದಲು ಬೆಳ್ಳಗಾಗುವುದಕ್ಕೆ ಶುರುವಾಗುತ್ತದೆ. ಇನ್ನು ಹೈಸ್ಕೂಲ್ ಹುಡುಗರಲ್ಲಿಯೂ ಕೂಡ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಹೀಗೆ ಅಕಾಲಿಕ ಬಿಳಿ ಕೂದಲು ಬರಲು ಹಲವು ಕಾರಣಗಳಿವೆ. ಇದು ವಂಶಪಾರಂಪರ್ಯವಾಗಿ ಬರಬಹುದು, ನಮ್ಮ ಇವತ್ತಿನ ಅನಾರೋಗ್ಯಕರ ಜೀವನ ಶೈಲಿಯಿಂದ ಬರಬಹುದು ಅಥವಾ ಹೊರಗಿನ ಧೂಳು ಪ್ರದೂಷಣೆಗೆ ಕೂದಲು ತುತ್ತಾಗಬಹುದು. ಈ ಮೊದಲಾದ ಕಾರಣಗಳಿಂದಾಗಿ ಬಿಳಿ ನೆರಿಗೆ ಬಹುಬೇಗ ಶುರುವಾಗಿ ಬಿಡುತ್ತದೆ. ಕಾರಣಗಳು ಏನೇ ಇರಲಿ ಕೂದಲು ಕಪ್ಪಾಗಿದ್ದರೆನೇ ಮೊಗವು ಚಂದ ಕಾಣುವುದು. ಹಾಗಾಗಿ ಬಿಳಿ ಕೂದಲು ಬರದಂತೆ ಬಂದಿದ್ದು ಮತ್ತೆ ಜಾಸ್ತಿಯಾಗದಂತೆ ಮಾಡಲು ನಾವಿಲ್ಲಿ ಕೆಲವು ಟಿಪ್ಸ್ ಗಳನ್ನು ನೀಡುತ್ತಿದ್ದೇವೆ. ತಪ್ಪದೇ ಇವುಗಳನ್ನು ಮಾಡಿ ಬದಲಾವಣೆಯನ್ನು ನೀವೇ ಗಮನಿಸಿ.

ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರ ಎಂದರೆ ಅದು ನೆಲ್ಲಿಕಾಯಿ. ಹೌದು ಸ್ನೇಹಿತರೆ ನೆಲ್ಲಿಕಾಯಿ ಪುಡಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಕೂದಲಿಗೆ ತುಂಬಾನೇ ಒಳ್ಳೆಯದು. ಮೊದಲು ಅರ್ಧ ಲೀಟರ್ ತೆಂಗಿನೆಣ್ಣೆಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಇದಕ್ಕೆ ಒಂದು ಕಪ್ ನೆಲ್ಲಿಕಾಯಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ 20 ನಿಮಿಷಗಳ ಕಾಲ ಅಂದರೆ ಎಣ್ಣೆ ಸ್ವಲ್ಪ ಕಡಿಮೆ ಆಗುವವರೆಗೂ ಕುದಿಸಿ. ನಂತರ ಇದನ್ನು ತಣಿಸಿ, ಒಂದು ಗಾಜಿನ ಬಾಟಲಿಯಲ್ಲಿ ಹಾಕಿಡಿ. ಇದನ್ನು ಆಗಾಗ ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ.

ಇನ್ನು, ಕರಿಬೇವು. ಕರಿಬೇವಿನಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಹಾಗಾಗಿ ನಾವು ಪ್ರತಿನಿತ್ಯ ಕರಿಬೇವನ್ನು ಅಡುಗೆಯಲ್ಲಿ ಬಳಸಿಯೇ ಬಳಸುತ್ತೇವೆ. ಕರಿಬೇವು, ನೆಲ್ಲಿಕಾಯಿ ಪುಡಿ ಹಾಗೂ ಬ್ರಾಹ್ಮಿ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ ವಾರದಲ್ಲಿ 2 ದಿನ ತಲೆಗೆ ಹಚ್ಚಿ. ಇದು ಕೂದಲಿಗೆ ತಂಪನ್ನು ನೀಡುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಗೋರಂಟಿ ಸೊಪ್ಪು ಅಥವಾ ಮದರಂಗಿ ಸೊಪ್ಪು ನಿಮಗೆ ಗೊತ್ತೇ ಇದೆ. ಇದು ಕೈಗೆ ಬಣ್ಣಕೊಡುವುದು ಮಾತ್ರವಲ್ಲ, ಕೂದಲಿನ ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ. ಹಾಗಾಗಿ ಗೋರಂಟಿ ಎಲೆಗಳನ್ನು ಪೇಸ್ಟ್ ರೀತಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.

ತೆಂಗಿನೆಣ್ಣೆ ಹಾಗೂ ನಿಂಬೆರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೆಯೇ ಚಹಾದ ಎಲೆಗಳು. ಇವುಗಳನ್ನು ನೀರಿನಲ್ಲಿ 20 ನಿಮಿಷ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸರ್ ಜಾರ್ ನಲ್ಲಿ ಹಾಕಿ ರುಬ್ಬಿ. ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇವುಗಳಲ್ಲಿ ನಿಮಗೆ ಸುಲಭವಾದ ಯಾವುದೇ ಔಷಧಿಯನ್ನು ಮನೆಯಲ್ಲಿಯೇ ತಯಾರಿಸಿ ಆಗಾಗ ಕೂದಲಿಗೆ ಹಚ್ಚುವುದರ ಮೂಲಕ ಕೂದಲಿನ ಆರೈಕೆ ಮಾಡಿ. ಇವು ಬಿಳಿ ಕೂದಲಿನ ನಿವಾರಣೆ ಮಾತ್ರವಲ್ಲದೆ ಕೂದಲು ಸದೃಢವಾಗಿಯೂ, ನಾಯವಾಗಿಯೂ ಕಾಣಲು ಸಹಾಯಮಾಡುತ್ತವೆ.

Post Author: Ravi Yadav