ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿರಾ ಎಂದು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಕೊಟ್ಟ ಶಾಕಿಂಗ್ ಉತ್ತರ ಏನು ಗೊತ್ತೇ‌??

ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿರಾ ಎಂದು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಕೊಟ್ಟ ಶಾಕಿಂಗ್ ಉತ್ತರ ಏನು ಗೊತ್ತೇ‌??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡ ಎರಡು ತಂಡಗಳಾಗಿ ಆಟವಾಡುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಒಂದು ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೇಟ್ ಗೆ ಸಿದ್ದತೆ ನಡೆಸುತ್ತಿದ್ದರೇ, ಮತ್ತೊಂದು ತಂಡ ಶ್ರೀಲಂಕಾ ವಿರುದ್ದ ಏಕದಿನ ಹಾಗೂ ಟಿ20 ಸರಣಿಯನ್ನು ಮುಗಿಸಿ ವಾಪಸ್ ಭಾರತಕ್ಕೆ ಬಂದಿದೆ. ಇಂಗ್ಲೆಂಡ್ ನಲ್ಲಿರುವ ತಂಡಕ್ಕೆ ರವಿಶಾಸ್ತ್ರಿಯವರು ಕೋಚ್ ಆಗಿದ್ದರೇ, ಶ್ರೀಲಂಕಾದಲ್ಲಿ ಆಡಿದ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಶ್ರೀಲಂಕಾದಲ್ಲಿ ಮೊದಲು ನಡೆದ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲೆರೆಡು ಪಂದ್ಯಗಳನ್ನು ಜಯಿಸಿತ್ತು. ನಂತರದ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ಆಟಗಾರರಿಗೆ ಅವಕಾಶ ನೀಡುವ ಮೂಲಕ ಕೊನೆಯ ಪಂದ್ಯದಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು.ಇನ್ನು ಟಿ 20 ಪಂದ್ಯದಲ್ಲಿ ಮೊದಲ ಪಂದ್ಯವನ್ನು ಗೆದ್ದಿತ್ತು.

ಆದರೇ ಕೃನಾಲ್ ಪಾಂಡ್ಯ ಕಾರಣದಿಂದ ತಂಡದ ಎಂಟು ಆಟಗಾರರು ಎರಡನೇ ಹಾಗೂ ಮೂರನೇ ಪಂದ್ಯದಿಂದ ಹೊರಗುಳಿದ ಕಾರಣ ಟಿ 20 ಸರಣಿಯನ್ನ ಭಾರತ ಸೋಲಬೇಕಾಯಿತು. ಆದರೇ ತಂಡಕ್ಕೆ ಆಯ್ಕೆಯಾದ ಆಟಗಾರರೆಲ್ಲರಿಗೂ ಅಂತರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡುವಂತೆ ಮಾಡಿದ ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದ ಬಗ್ಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ದ್ರಾವಿಡ್ ಭಾರತದ ತಂಡಕ್ಕೆ ಹೆಡ್ ಕೋಚ್ ಆಗಬೇಕು ಎಂಬ ಅಭಿಯಾನಗಳು, ಅಭಿಪ್ರಾಯಗಳು ಜೋರಾಗಿ ಕೇಳಿಬರುತ್ತಿವೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಹುಲ್ ಕೊಟ್ಟ ಉತ್ತರ ಮಾತ್ರ ಪ್ರಭುದ್ಧವಾಗಿತ್ತು. ನಾನು ಈಗ ಕಿರಿಯರ ಹಾಗೂ 19 ವರ್ಷ ಒಳಗಿನವರ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಆ ಜವಾಬ್ದಾರಿಯಲ್ಲಿ ಬಹಳಷ್ಟು ತೃಪ್ತಿಯಿದೆ.

ಇದರ ಹೊರತಾಗಿ ನನಗೆ ಬೇರೆ ಯಾವ ಆಲೋಚನೇಯೂ ಇಲ್ಲ. ಸದ್ಯ ಎನ್.ಸಿ.ಎ ಯ ಮುಖ್ಯಸ್ಥನಾಗಿದ್ದು ಭಾರತೀಯ ಕ್ರಿಕೇಟ್ ರಂಗವನ್ನು ಮತ್ತಷ್ಟು ಉತ್ಕೃಷ್ಠ ದರ್ಜೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಉತ್ತರದ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದೆ. ಈಗಿನ ಕೋಚ್ ರವಿಶಾಸ್ತ್ರಿ ಅವಧಿ ಈ ವರ್ಷ ಮುಗಿಯುತ್ತಿರುವ ಕಾರಣ ಭಾರತ ತಂಡಕ್ಕೆ ಹೊಸ ಕೋಚ್ ಬರಬೇಕಿದೆ. ವಿದೇಶಿ ಕೋಚ್ ಗಳಿಗಿಂತಲೂ ದೇಶಿಯ ಕೋಚ್ ಬಗ್ಗೆಯೇ ಒಲವನ್ನ ಈಗ ಬಿಸಿಸಿಐ ವ್ಯಕ್ತಪಡಿಸುತ್ತದೆ. ಕನ್ನಡಿಗ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೇಟ್ ತಂಡದ ಮುಖ್ಯ ಕೋಚ್ ಆಗಬೇಕೆ ಬೇಡವೇ ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.