ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಾತನಾಡದೆ ವಿಡಿಯೋ ಮೂಲಕ ಫೇಮಸ್ ಆಗಿರುವ ಈ ವ್ಯಕ್ತಿಯ ಆದಾಯ ಎಷ್ಟು?? ಈತನ ಗರ್ಲ್ಫ್ರೆಂಡ್ ಹೇಗಿದ್ದಾಳೆ ಗೊತ್ತಾ??

3

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಾಗೂ ಕಿರು ವಿಡಿಯೋಗಳು ಸಾಕಷ್ಟು ಸಂಚಲನ ಉಂಟು ಮಾಡುತ್ತಿವೆ. ಟಿಕ್ ಟಾಕ್ ಭಾರತದಲ್ಲಿ ಬಳಸಲಾರದ ಹಾಗೆ ಆದ ಮೇಲಂತೂ ಇನ್ಸ್ಟಾಗ್ರಾಮ್ ರೀಲ್ಸ್ ಗಳು ಈಗಾಗಲೇ ಸಾಕಷ್ಟು ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿವೆ ಹಾಗೂ ಅದೆಷ್ಟು ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶವನ್ನು ಕೂಡ ನೀಡಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹಲವಾರು ಯುವ ಪ್ರತಿಭೆಗಳು ಸ್ಟಾರ್ ಆಗಿ ಮೆರೆದಾಡುತ್ತಿದ್ದಾರೆ.

ಅವರಲ್ಲಿ ಇಂದು ನಾವು ಒಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ. ಸಾಮಾಜಿಕ ಜಾಲತಾಣಗಳ ದುನಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ಒಬ್ಬ ಯುವಕನ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನೀವು ಈಗಾಗಲೇ ಗೆಸ್ ಕೂಡ ಮಾಡಿರಬಹುದು. ನಾವು ಮಾತನಾಡಲು ಹೊರಟಿರುವುದು ಜಾಗತಿಕವಾಗಿ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಕಬಾನೆ ಲೇಮ್. ಸಾಮಾಜಿಕ ಜಾಲತಾಣಗಳಲ್ಲಿ ಇವರು ಕಾಬಿ ಲೇಮ್ ಎಂದೇ ಪ್ರಖ್ಯಾತರಾಗಿದ್ದಾರೆ.

ಇನ್ನು ಇವರು ಟಿಕ್ ಟಾಕ್ ನಲ್ಲಿ 9 ಕೋಟಿಗೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದು, ಜಗತ್ತಿನಲ್ಲಿ ಅತ್ಯಂತ ಅಧಿಕ ಫಾಲೋವರ್ಸ್ ಹೊಂದಿರುವ ಎರಡನೇ ವ್ಯಕ್ತಿಯಾಗಿದ್ದಾರೆ. ಅದು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಇವರು ಅದನ್ನು ಸಾಧಿಸಿದ್ದಾರೆ. ಇನ್ನು ಇವರಿಗೆ ಕೇವಲ 21 ವರ್ಷ ವಯಸ್ಸಷ್ಟೇ. ಇನ್ನು ಇವರು ಇಟಲಿಯಲ್ಲಿ ನೆಲೆಸಿರುವ ನಾಗರಿಕ. ಇನ್ನು ಇವರು ತಮ್ಮ ವಿಡಿಯೋದಲ್ಲಿ ಬೇರೆಯ ವ್ಯಕ್ತಿಗಳು ಕೆಲಸ ಮಾಡಲು ಕಷ್ಟಪಡುವುದನ್ನು ಸುಲಭವಾಗಿ ತೋರಿಸುವ ವಿಡಿಯೋ ಮಾಡುತ್ತಾರೆ. ಈ ವೀಡಿಯೋ ದಿಂದಲೇ ಇವರು ಫೇಮಸ್ ಆಗಿ ನಂತರದ ದಿನಗಳಲ್ಲಿ ಖ್ಯಾತ ಸೆಲೆಬ್ರಿಟಿಗಳೊಂದಿಗೆ ಕೊಲಬರೇಟ್ ಕೂಡ ಮಾಡಿದ್ದಾರೆ.

ಇನ್ನು ಯಾವುದೇ ವಿಡಿಯೋದಲ್ಲಿ ಕಾಬಿ ಮಾತಾಡಿದ್ದು ಇದುವರೆಗೂ ಕಂಡುಬಂದಿಲ್ಲ ಆದರೂ ಸಹ ಅವರ ಹಾವಭಾವಗಳು ಜನರಿಗೆ ಅತ್ಯಂತ ಅಚ್ಚುಮೆಚ್ಚಿನದ್ದಾಗಿದೆ. ಇನ್ನು ಇವರ ವಿಡಿಯೋಗಳು ಟ್ರೋಲ್ ಪೇಜ್ ಗಳು ಬಳಸುವ ಮೀಮ್ ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇನ್ನು ಟಿಕ್ಟಾಕ್ ನಲ್ಲಿ ಕೂಡ ಹೆಸರಾಂತ ಹಾಲಿವುಡ್ ನಟರ ಗಿಂತಲೂ ಹೆಚ್ಚಾಗಿ ಫಾಲೋವರ್ಸ್ ಅನ್ನು ಕಾಬಿ ಅವರು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೂಡ 3 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಈ ಸೋಶಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್. ಇನ್ನು ಇವರು ವಿಡಿಯೋಗಳಿಂದ ಗಳಿಸುತ್ತಿರುವ ಸಂಭಾವನೆ ಹಾಗೂ ಇವರ ಗರ್ಲ್ ಫ್ರೆಂಡ್ ಯಾರು ಎಂಬುದನ್ನು ನಿಮಗೆ ನಾವು ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಕಾಬಿ ಕೇವಲ ವಿಡಿಯೋಗಳನ್ನು ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಮಾತ್ರ ಪೋಸ್ಟ್ ಮಾಡುತ್ತಾರೆ. ನಿಮ್ಮೆಲ್ಲರಿಗೂ ಯೂಟೂಬ್ನಲ್ಲಿ ಕೂಡ ಪೋಸ್ಟ್ ಮಾಡಲು ಪ್ರಾರಂಭಿಸಿದರೆ ಇವರ ಗಳಿಕೆ ಇನ್ನಷ್ಟು ದುಪ್ಪಟ್ಟಾಗುತ್ತಿತ್ತು. ಸದ್ಯಕ್ಕೆ ಇವರು ಯಾವುದೇ ಪ್ರಮೋಷನ್ ಮಾಡದಿದ್ದರೂ ಸಹ ಕೇವಲ ವಿಡಿಯೋ ಗಳಿಂದಲೇ 14 ಕೋಟಿಗೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಾಂಡ್ ಪ್ರಮೋಷನ್ ಮಾಡಿದರೆ ಇದಕ್ಕಿಂತಲೂ ದ್ವಿಗುಣ ಹಣವನ್ನು ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕಾಬಿ ರವರಿಗೆ ಜರಿಯನ್ನು ನೂಸಿ ಎಂಬ ಸುಂದರ ಗರ್ಲ್ಫ್ರೆಂಡ್ ಕೂಡ ಇದ್ದಾಳೆ. ಇವರು ವಿಧರ ಮೂಲಕ ಯಶಸ್ವಿಯಾದರೆ ಸಾಕು ಯಾವ ಕಪ್ಪು ಹುಡುಗನ ಕುರೂಪಿ ಯಲ್ಲ ಎಂಬುದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ. ಅತ್ಯಂತ ವೇಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನಗೆದ್ದ ಅಂತಹ ವ್ಯಕ್ತಿತ್ವ ಎಂದರೆ ಅದು ಖಂಡಿತವಾಗಿಯೂ ಕಾಬಿ ಲೇಮ್. ಇವರು ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸೋಣ. ಭಾರತದಲ್ಲಿ ಕೂಡ ಇವರನ್ನು ಹಿಂಬಾಲಿಸುವವರು ಕಡಿಮೆಯೇನಿಲ್ಲ. ನೀವು ಕೂಡ ಇವರ ಅಭಿಮಾನಿಯಾಗಿದ್ದರೆ ತಪ್ಪದೇ ಅವರ ಕುರಿತಂತೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.