ಮಂಜು ಫಿನಾಲಿ ಗೆ ಆಯ್ಕೆಯಾದ ತಕ್ಷಣ, ಲೈವ್ ಗೆ ಬಂದ ಸೆಲೆಬ್ರಿಟಿಗಳು ಎಲ್ಲರಿಗೂ ಶಾಕ್ ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಬಾರಿಯ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂಬುದು ನಿರ್ಧಾರವಾಗಲಿದೆ. ಪ್ರತಿಯೊಬ್ಬರು ಕೂಡ ಆ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ, ಇಂತಹ ಸಮಯದಲ್ಲಿ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂಬುದರ ಕುರಿತು ಹಲವಾರು ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಟಾಪ್ ಐದರ ಸ್ಪರ್ಧಿಗಳು ಯಾರು ಎಂದು ನಿರ್ಧಾರವಾಗಿದ್ದು, ದಿವ್ಯ ಸುರೇಶ್ ರವರು ಕೊನೆಯದಾಗಿ ಮನೆಯಿಂದ ಹೊರ ಬಂದಿದ್ದಾರೆ.

ಇನ್ನು ಫೈನಲ್ನಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರ್ಗಿ, ವೈಷ್ಣವಿ ಹಾಗೂ ದಿವ್ಯ ಉರುಡುಗರವರು ಸ್ಥಾನ ಪಡೆದು ಕೊಂಡಿದ್ದಾನೆ, ಇಂತಹ ಸಮಯದಲ್ಲಿ ಮಂಜುರವರು ಬಹುತೇಕ ಗೆಲ್ಲುವುದು ಖಾಯಂ ಆದಂತೆ ಕಾಣುತ್ತಿದೆ ಇವರಿಗೆ ಅರವಿಂದ್ ಹಾಗೂ ಪ್ರಶಾಂತ ಸಂಬರ್ಗಿ ರವರು ಮಾತ್ರ ಪೈಪೋಟಿ ನೀಡುವ ಲಕ್ಷಣಗಳು ಕೂಡ ತಳ್ಳಿ ಹಾಕುವಂತಿಲ್ಲ. ಬಹುಶಹ ಅದೇ ಕಾರಣಕ್ಕಾಗಿ ಇರಬೇಕು ಎಲ್ಲಾ ಸ್ಪರ್ಧಿಗಳಿಗೆ ಒಮ್ಮೆಲೆ ಸೆಲೆಬ್ರೆಟಿಗಳು ಲೈವ್ ಬಂದು ಮಾತನಾಡುತ್ತಿದ್ದಾರೆ.

ಹೌದು ಸ್ನೇಹಿತರೇ ಕೆಲವೊಂದು ನಟಿಯರು ಮಾತ್ರ ವೈಷ್ಣವಿ ರವರಿಗೆ ಬೆಂಬಲ ಸೂಚನೆ ಮಾಡುತ್ತಿದ್ದಾರೆ, ಇನ್ನುಳಿದಂತೆ ಸರಿಗಮಪ ಆಶಾ ಭಟ್ ರವರು ಪ್ರಶಾಂತ್ ಸಂಭರ್ಗಿ ರವರಿಗೆ ಬೆಂಬಲ ಸೂಚಿಸಿದ್ದಾರೆ, ಇವರನ್ನು ಹೊರತು ಪಡಿಸಿದರೇ ಸುವರ್ಣ ಚಾನೆಲ್ ಜಯಪ್ರಕಾಶ್, ನಿರೂಪಕಿ ಅನುಪಮಾ ಗೌಡ, ಸಂಗೀತ ರಾಜೀವ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮಂಜು ಪಾವಗಡ ರವರನ್ನು ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಹೀಗೆ ಇವರೆಲ್ಲರ ಅಭಿಮಾನಿಗಳು ಒಟ್ಟಾಗಿ ಸೇರಿಕೊಂಡರೆ ಖಂಡಿತ ಮಂಜು ಪಾವಗಡ ರವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav