ಮತ್ತೊಬ್ಬ ಟಾಪ್ ಆಸ್ಟ್ರೇಲಿಯಾ ಆಟಗಾರನಿಗೆ ಬಲೆ ಬೀಸಿದ ಆರ್.ಸಿ.ಬಿ?? ಒಪ್ಪಿಕೊಂಡ ಟಾಪ್ ಆಟಗಾರ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯಲ್ ಲೀಗ್ ಅಥವಾ ಐಪಿಎಲ್ ಗೆ ಮನಸೋಲದ ಆಟಗಾರರೇ ಇಲ್ಲ. 2008 ರಿಂದ ಶುರುವಾದ ಲೀಗ್ ಪ್ರತಿ ವರ್ಷ ತನ್ನ ಜನಪ್ರಿಯತೆಯನ್ನ ಮುಂದುವರಿಸಿಕೊಂಡೇ ಬರುತ್ತಿದೆ. ಅದರಲ್ಲೂ ಐಪಿಎಲ್ ನ ಇತಿಹಾಸದಲ್ಲಿಯೇ ಇದೇ ಮೊದಲು ಅನಿಸುತ್ತಿದೆ. ಅರ್ಧಕ್ಕೆ ಐಪಿಎಲ್ ಸರಣಿ ನಿಂತಿದ್ದರೂ, ಅದರ ಮುಂದುವರಿದ ಭಾಗವನ್ನ ಬೇರೆ ದೇಶದಲ್ಲಿ ನಡೆಸುತ್ತಿರುವುದು. ಇದೇ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಸರಣಿ ನಡೆಯಲಿದೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಆರ್.ಸಿ.ಬಿ ತಂಡ ಈ ಭಾರಿಯಾದರೂ ಕಪ್ ಗೆಲ್ಲಲಿದೆ ಎಂಬ ಅಭಿಮಾನಿಗಳ ಆಸೆಗೆ ಸ್ವಲ್ಪ ಪುಷ್ಠಿ ಸಿಕ್ಕಿತ್ತು. ಆದರೇ ಅರ್ಧಕ್ಕೆ ನಿಂತ ಕಾರಣ ಆ ಕನಸು ಮುಂದೆ ಹೋಗಿತ್ತು. ಈ ವೇಳೆ ಐಪಿಎಲ್ ನಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ , ಅರ್ಧಕ್ಕೆ ತೊರೆದಿದ್ದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಂ ಜಂಪಾ ಆರ್.ಸಿ.ಬಿ ತಂಡದಿಂದ ಹೊರನಡೆದಿದ್ದರು. ಇವರ ಬದಲು ಆರ್.ಸಿ.ಬಿ ತಂಡ ಇತ್ತಿಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗಾರವರನ್ನ , ಆಡಂ ಜಂಪಾ ಬದಲು ರಿಪ್ಲೇಸ್ ಮಾಡಬೇಕು ಎಂದು ಬಿಸಿಸಿಐ ಗೆ ಕೇಳಿಕೊಂಡಿತ್ತು. ಈಗ ಆರ್.ಸಿ.ಬಿ ತನ್ನ ಬೌಲಿಂಗ್ ಲೈನ್ ಅಪ್ ನನ್ನು ಮತ್ತಷ್ಟು ಉತ್ತಮಗೊಳಿಸಲು ಆಸ್ಟ್ರೇಲಿಯಾದ ಪ್ರಸಿದ್ದ ಆಟಗಾರನಿಗೆ ಬಲೆ ಬೀಸಿದೆ. ಬನ್ನಿ ಆ ಆಟಗಾರ ಯಾರು ಎಂಬುದನ್ನ ತಿಳಿದುಕೊಳ್ಳೋಣ.

ಹೌದು ನಿಮ್ಮ ಊಹೆ ಸರಿ, ಆ ಆಟಗಾರ ಬೇರೆ ಯಾರೂ ಅಲ್ಲ, ಜಗತ್ತಿನ ಶ್ರೇಷ್ಠ ಬೌಲರ್ ಮಿಚೆಲ್ ಸ್ಟಾರ್ಕ್. ಈ ಹಿಂದೆ ಆರ್.ಸಿ.ಬಿ ಯಲ್ಲಿ ಮಿಂಚಿದ್ದ ಮಿಚೆಲ್ ಸ್ಟಾರ್ಕ್, ಮಧ್ಯೆ ಐಪಿಎಲ್ ನಿಂದ ಬಿಡುವು ಪಡೆದಿದ್ದರು. ಆದರೇ ಈ ಭಾರಿ ತಾವು ಮತ್ತೊಮ್ಮೆ ಆರ್.ಸಿ.ಬಿ ತಂಡದ ಪರ ಆಡಬೇಕು ಎಂಬ ತಮ್ಮ ಮನದಾಸೆಯನ್ನ ಹೊರಹಾಕಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ಸ್ಟಾರ್ಕ್, ಆರ್.ಸಿ.ಬಿ ಪರ ಆಡಲು ನನ್ನ ಮನ ತುಡಿಯುತ್ತದೆ, ಆದಷ್ಟು ಬೇಗ ನಾನು ಆರ್.ಸಿ.ಬಿ ತಂಡ ಸೇರಬೇಕು ಎಂದು ಹೇಳಿಕೊಂಡಿದ್ದಾರೆ. ಸದ್ಯ ಕೊನೆಯ ಓವರ್ ಗಳಲ್ಲಿ ಸ್ವಲ್ಪ ಲಯದ ಬೌಲಿಂಗ್ ನಿಂದ ತೊಂದರೆ ಅನುಭವಿಸುತ್ತಿರುವ ಆರ್.ಸಿ.ಬಿ ಗೆ ಸ್ಟಾರ್ಕ್ ಆಗಮಿಸಿದರೇ ಖಂಡಿತ ಅದು ವರದಾನವಾಗಲಿದೆ. ನ್ಯೂಜಿಲೆಂಡ್ ನ ವೇಗಿ ಕೈಲ್ ಜೇಮಿಸನ್ , ಭಾರತದ ಮಹಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಮತ್ತು ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಜೊತೆಗೆ ಮಿಚೆಲ್ ಸ್ಟಾರ್ಕ್ ಸಹ ಕೂಡಿಕೊಂಡರೇ ಆರ್.ಸಿ.ಬಿಯ ಬೌಲಿಂಗ್ ಯೂನಿಟ್ ಸಖತ್ ಸಾಲಿಡ್ ಆಗಿರುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav