ಫೈನಲ್ ಗೂ ಮುನ್ನ ಎಲ್ಲಾ ಸ್ಪರ್ಧಿಗಳಿಗೆ ಒಮ್ಮೆಲೆ ಶಾಕ್ ನೀಡಿದ ಬಿಗ್ಬಾಸ್, ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ನಿರ್ಧಾರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ಆವೃತ್ತಿ 8 ಇದೀಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮುಕ್ತಾಯವಾಗಲಿದೆ ಇಂತಹ ಸಮಯದಲ್ಲಿ ಪ್ರೇಕ್ಷಕರಿಗೆ ಸಾಧ್ಯವಾದಷ್ಟು ಮನರಂಜನೆ ನೀಡಲು ವಿವಿಧ ರೀತಿಯ ಕೆಲಸಗಳನ್ನು ಬಿಗ್ ಬಾಸ್ ಮನೆಯಲ್ಲಿ ಮಾಡಲಾಗುತ್ತದೆ ಪ್ರತಿ ಸೀಸನ್ ನಲ್ಲಿಯೂ ಕೂಡ ಕೊನೆಯ ದಿನಗಳು ಎಂದರೆ ಮನರಂಜನ ದಿನಗಳು ಎಂದರ್ಥ ವಾಗಿತ್ತು,

ಯಾಕೆಂದರೆ ಹಬ್ಬದಂತೆ ಈ ದಿನಗಳನ್ನು ಬಿಗ್ ಬಾಸ್ ಆಯೋಜಿಸುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈ ಬಾರಿ ಹೆಚ್ಚಿನ ಮನರಂಜನೆ ಇರುವುದಿಲ್ಲ ಎಂದು ಖುದ್ದು ಬಿಗ್ ಬಾಸ್ ಡೈರೆಕ್ಟರ್ ಒಪ್ಪಿಕೊಂಡಿದ್ದಾರೆ, ಅದರಲ್ಲಿಯೂ ಕಳೆದ ಏಳು ಸೀಸನ್ ಗಳಲ್ಲಿ ನಡೆಸಿಕೊಂಡು ಬಂದಿರುವ ಆಚರಣೆಯೊಂದು ಈ ಬಾರಿಯ ಬಿಗ್ ಬಾಸ್ ನಲ್ಲಿ ಅಂತ್ಯವಾಗಲಿದೆ, ಇದು ನಮಗೂ ಕೂಡ ಸಾಕಷ್ಟು ಬೇಸರ ತರಿಸಿದೆ ಎಂದು ಬಿಗ್ ಬಾಸ್ ಆಯೋಜಕರು ತಿಳಿಸಿದ್ದಾರೆ. ಹೌದು ಸ್ನೇಹಿತರೇ ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮ ಅಂತ್ಯವಾಗುವ ವಾರಗಳಲ್ಲಿ ಸಾಕಷ್ಟು ಮನರಂಜನೆ ಇದ್ದೇ ಇರುತ್ತದೆ.

ಅದರಲ್ಲಿಯೂ ಪ್ರಮುಖವಾಗಿ ಉಳಿದುಕೊಂಡಿರುವ ಪ್ರತಿಯೊಬ್ಬರು ಸ್ಪರ್ಧಿಗಳ ಮನೆಯವರನ್ನು ಹಾಗೂ ಈಗಾಗಲೇ ಎಲಿಮಿನೇಟ್ ಹಾಗೆ ಹೊರ ಹೋಗಿರುವ ಸ್ಪರ್ಧಿಗಳನ್ನು ಮನೆಯ ಒಳಗಡೆ ಕಳುಹಿಸಿ ಪ್ರೇಕ್ಷಕರಿಗೆ ಮನರಂಜನೆಯನ್ನು ರಸದೌತಣವನ್ನು ಬಡಿಸಲಾಗುತ್ತಿತ್ತು, ಆದರೆ ಈ ಬಾರಿ ಯಾವುದೇ ರೀತಿಯ ಫ್ಯಾಮಿಲಿ ರೌಂಡ್ ಗಳು ಹಾಗೂ ಯಾವುದೇ ಇನ್ನಿತರ ಸ್ಪರ್ಧಿಗಳನ್ನು ಮನೆಯ ಒಳಗಡೆ ಕಳುಹಿಸುವುದಿಲ್ಲ ಎಂದು ಬಿಗ್ ಬಾಸ್ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಯಾಕೆಂದರೆ ಕೋರೋಣ ಶಿಷ್ಟಾಚಾರಗಳನ್ನು ಫಾಲೋ ಮಾಡುವ ನಿಯಮ ಇರುವುದರಿಂದ ಯಾವುದೇ ಮನೆ ಸದಸ್ಯರನ್ನು ಅಥವಾ ಹಳೆಯ ಸ್ಪರ್ಧಿಗಳನ್ನು ಮನೆಯೊಳಗಡೆ ಕಳುಹಿಸಬಾರದು ಎಂದು ಈಗಾಗಲೇ ನಿರ್ಧಾರ ಮಾಡಿಯಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

Post Author: Ravi Yadav