ಶುಭ ಆಯ್ತು ಶಮಂತ್ ಆಯ್ತು, ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಹೊರಹೋಗುವ ಮತ್ತೊಬ್ಬ ಸ್ಪರ್ಧಿ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಬಹುಶಃ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಅಂತ್ಯವಾಗಲಿದೆ. ಕೊನೆಯ ಫೈನಲ್ ವಾರದಲ್ಲಿ ಕೇವಲ ಐದು ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಉಳಿದು ಕೊಳ್ಳಲಿದ್ದಾರೆ ಅದೇ ಕಾರಣಕ್ಕಾಗಿ ಶನಿವಾರ ಮತ್ತು ಭಾನುವಾರ ಒಬ್ಬೊಬ್ಬರನ್ನು ಎಲಿಮಿನೇಟ್ ಮಾಡಿ ಮನೆಯಲ್ಲಿ ಆರು ಜನ ಉಳಿದುಕೊಳ್ಳುವಂತೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ನಡೆದ ಕಾರ್ಯಕ್ರಮಗಳಲ್ಲಿ ಶುಭ ಪೂಂಜಾ ಹಾಗೂ ಶಮಂತ್ ರವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ.

ಇನ್ನು ಇದೇ ಸಮಯದಲ್ಲಿ ಕಿಚ್ಚ ಸುದೀಪ್ ರವರು ಈ ಕುರಿತು ಮಾತನಾಡಿ ಕೊನೆಯ ವಾರದಲ್ಲಿ ಕೇವಲ ಐದು ಜನ ಉಳಿದು ಕೊಳ್ಳಬೇಕಾಗಿ ಇರುವ ಕಾರಣ ವಾರದ ಮಧ್ಯದಲ್ಲಿ ಮತ್ತೊಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಈಗಾಗಲೇ ಫೈನಲ್ ತಲುಪುವುದಿಲ್ಲ ಎಂದು ಹೇಳಲಾಗುತ್ತಿದ್ದು ಶಮಂತ್ ಹಾಗೂ ಶುಭ ಪೂಂಜಾ ರವರು ಹೊರ ಹೋಗಿರುವ ಕಾರಣ ಇನ್ನು ಫೈನಲ್ ‌ ವಾರದ ಮಧ್ಯದಲ್ಲಿ ಹೊರ ಹೋಗುವ ಸ್ಪರ್ದಿ ಯಾರಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ಪ್ರತಿಯೊಬ್ಬರೂ ಕೂಡ ತಮ್ಮ ನೆಚ್ಚಿನ ಸ್ಪರ್ಧೆಯ ಕುರಿತು ಇವರು ಫೈನಲ್ ಗೆ ಬರುತ್ತಾರೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದು, ಇಂದಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವಂತೆ ದಿವ್ಯ ಹುಡುಗ ಅಥವಾ ದಿವ್ಯ ಸುರೇಶ್ ರವರು ಮನೆಯಿಂದ ಹೊರಗೆ ಹೋಗುವುದು ಬಹುತೇಕ ಖಚಿತವಾಗಿದೆ. ಇಬ್ಬರೂ ಸ್ಪರ್ಧಿಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಸ್ಪರ್ಧಿಗಳು ಬಹುತೇಕ ಫೈನಲ್ ವಾರದವರೆಗೆ ತಲುಪುವ ಸ್ಪರ್ಧಿಗಳಾಗಿದ್ದಾರೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಈ ಸಮಯದಲ್ಲಿ ಯಾರು ಫೈನಲ್ ವಾರದವರೆಗೂ ತಲುಪದೆ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದು ನಿಜಕ್ಕೂ ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav