ಯುಎಇ ಪಿಚ್ಚು ಗಳಿಗೆ ನೆರವಾಗುವಂತೆ ಹೊಸ ಬಲಾಢ್ಯ ಆಟಗಾರನಿಗೆ ಮಣೆ ಹಾಕಲು ಮುಂದಾದ ಆರ್ಸಿಬಿ, ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ನಲ್ಲಿ ಬಹಳ ಉತ್ತಮ ಪ್ರದರ್ಶನ ನೀಡಿದೆ, ಆದರೆ ಆರ್ಸಿಬಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿ ಅರ್ಧಕ್ಕೆ ಟೂರ್ನಿ ನಿಂತು ಹೋಗಿತ್ತು ಹಾಗೂ ಮುಂದಿನ ಐಪಿಎಲ್ ನಡೆಯುವುದು ಅನುಮಾನವಾಗಿತ್ತು. ಆದರೆ ಬಿಸಿಸಿಐ ಎಲ್ಲಾ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ಒಪ್ಪಿಸಿ ಕ್ರಿಕೆಟ್ ಆಟಗಾರರನ್ನು ಕರೆತಂದು ವಿಶ್ವಕಪ್ ಟೂರ್ನಿಗೂ ಮುನ್ನ ಯುಎಇ ದೇಶದಲ್ಲಿ ಸೆಪ್ಟೆಂಬರ್ 19 ನೇ ತಾರೀಖಿನಿಂದ ಟೂರ್ನಿಯನ್ನು ಮರು ಆರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ.

ಇನ್ನು ಇದೇ ಸಮಯದಲ್ಲಿ ಟೂರ್ನಿ ನಡೆಯುವ ಸಮಯದಲ್ಲಿ ಆಡಮ್ ಜಂಪಾ ರವರು ಹಾಗೂ ಕೆನ್ ರಿಚರ್ಡ್ಸನ್ ರವರು ಐಪಿಎಲ್ ಆಯೋಜನೆಯ ಕುರಿತು ಮಾತನಾಡಿ ಬಯೋ ಬಬಲ್ ಸರಿಯಿಲ್ಲವೆಂದು ಟೂರ್ನಿ ನಿಂತುಹೋಗುವ ಮುನ್ನವೇ ತಮ್ಮ ದೇಶಕ್ಕೆ ತೆರಳಲು ಮುಂದಾಗಿ ನಿರ್ಧಾರ ಮಾಡಿ ಆರ್ ಸಿ ಬಿ ತಂಡವನ್ನು ತೊರೆದಿದ್ದರು, ಇವರು ಹೋದಾಗ ಆರ್ಸಿಬಿ ತಂಡಕ್ಕೆ ಯಾವುದೇ ನಷ್ಟ ವಿರಲಿಲ್ಲ ಯಾಕೆಂದರೆ ಆರ್ಸಿಬಿ ತಂಡದ ಹನ್ನೊಂದರ ಬಳಗ ಬಹಳ ಬಲಿಷ್ಠವಾಗಿತ್ತು ಆದರೆ ಇವರು ಹೋದದ್ದು ಒಳ್ಳೆಯದಾಗಿತ್ತು ಎಂಬ ಆಲೋಚನೆ ಮೂಡುವಂತೆ ಇದೀಗ ಆರ್ಸಿಬಿ ತಂಡ ಮತ್ತೊಂದು ಹೆಜ್ಜೆ ಇಟ್ಟಿದೆ.

ಹೌದು ಸ್ನೇಹಿತರೇ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಆರ್ಸಿಬಿ ಮುಂದಾಗಿದ್ದು ಹೇಗಿದ್ದರೂ ನೀವು ಯುಎಇ ಪಿಚ್ ಗಳಲ್ಲಿ ಸ್ಪಿನ್ನರ್ ಗಳು ಮೋಡಿ ಮಾಡುತ್ತಾರೆ ಆದಕಾರಣ ಆಡಮ್ ಜಂಪಾ ಬದಲು ಭಾರತ ದೇಶದ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಶ್ರೀಲಂಕಾ ದೇಶದಲ್ಲಿ ಶ್ರೀಲಂಕನ್ನರ ಸರಣಿಯ ಗೆಲುವಿಗೆ ಕಾರಣರಾಗಿರುವ ವನಿಂದು ಹಸರಂಗ ರವರನ್ನು ಆಡಮ್ ಜಂಪಾ ಬದಲಿಗೆ ಸೇರಿಸಿಕೊಳ್ಳುವ ನಿರ್ಧಾರ ಆರ್ಸಿಬಿ ತಂಡ ಮಾಡಿದೆ, ವನಿಂದು ಹಸರಂಗ ರವರು ಆಟವಾಡಿದ್ದ ಮೂರು ಟಿ20 ಪಂದ್ಯಗಳಲ್ಲಿ ಏಳು ವಿಕೆಟ್ ಗಳನ್ನು ಪಡೆದಿದ್ದಾರೆ ಹಾಗೂ 9ರಂದು ನೀಡಿ 4 ವಿಕೆಟ್ ಪಡೆದಿರುವುದು ಶ್ರೇಷ್ಠ ಬೌಲಿಂಗ್ ಎನಿಸಿದೆ. ಈ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನಕ್ಕೆ ಕೂಡ ವನಿಂದು ಹಸರಂಗ ರವರು ಭಾಗಿಯಾಗಿದ್ದಾರೆ. ಅದೇ ಕಾರಣಕ್ಕಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಮುಂದಾಗಿದ್ದು ಬಿಸಿಸಿಐ ಸಂಸ್ಥೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

Post Author: Ravi Yadav