ಅಮೀರ್ ಖಾನ್ ಅವರ ಪಿಕೆ ಚಿತ್ರದ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕೆಜಿಎಫ್, ಯಾವ ದಾಖಲೆ ಗೊತ್ತಾ??
ಅಮೀರ್ ಖಾನ್ ಅವರ ಪಿಕೆ ಚಿತ್ರದ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕೆಜಿಎಫ್, ಯಾವ ದಾಖಲೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತ ಚಿತ್ರರಂಗದಲ್ಲಿ ಕೇವಲ ಕೆಜಿಎಫ್ ಚಾಪ್ಟರ್ 2 ಚಿತ್ರದ್ದೇ ಹವಾ. ಹೌದು ಸ್ನೇಹಿತರೆ ಪ್ರಶಾಂತ್ ನಿರ್ದೇಶನದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿ ಬಂದಂತಹ ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಈಗಾಗಲೇ ಭಾರತ ಚಿತ್ರರಂಗದಾದ್ಯಂತ ಕೆಜಿಎಫ್ ಚಾಪ್ಟರ್ 2 ಚಿತ್ರದ ಬೇಡಿಕೆ ಊಹಿಸಿದ ಮಟ್ಟಕ್ಕಿಂತಲೂ ಹೆಚ್ಚಾಗಿ ಜಾಸ್ತಿಯಾಗಿದೆ. ಹೌದು ಸ್ನೇಹಿತರೆ ಈಗಾಗಲೇ ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ಭಾರತದ ಎಲ್ಲ ಮೇಲೆ ವಿದೇಶಿಗರಿಗೂ ಕೂಡ ಕುತೂಹಲವನ್ನು ಜಾಸ್ತಿ ಮಾಡುತ್ತಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಲಹರಿ ಮ್ಯೂಸಿಕ್ ಗೆ ದಾಖಲೆಯ ಮೊತ್ತಕ್ಕೆ ತನ್ನ ಮ್ಯೂಸಿಕ್ ಆಲ್ಬಮ್ ಅನ್ನು ಸೇಲ್ ಮಾಡಿ ಈಗಾಗಲೇ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿ ಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು ಆದರೆ ಲಾಕ್ಡೌನ್ ಕಾರಣದಿಂದಾಗಿ ಮತ್ತು ಚಿತ್ರಮಂದಿರದಲ್ಲಿ 100% ಸೀಟಿಂಗ್ ಅವಕಾಶ ಬಂದ ನಂತರ ಬಿಡುಗಡೆಯಾಗುವ ಯೋಚನೆ ಇದೆ. ಇನ್ನು ಕೆಜಿಎಫ್ ಚಾಪ್ಟರ್ 2 ರ ಕಿರೀಟಕ್ಕೆ ಇನ್ನೊಂದು ದಾಖಲೆ ಗರಿ ಸೇರಿಕೊಂಡುಬಿಟ್ಟಿದೆ. ಹೌದು ಸ್ನೇಹಿತರೆ ಕೆಜಿಎಫ್ ಚಾಪ್ಟರ್ 2 ಮಾಡಿರುವುದು ಅಂತಿಂಥ ಚಿಕ್ಕಪುಟ್ಟ ಸಾಧನೆಯಲ್ಲ.
ಅಮೀರ್ ಖಾನ್ ರವರ ಪಿಕೆ ಚಿತ್ರವನ್ನು ಕೂಡ ಮೀರಿಸುವಂತಹ ಸಾಧನೆಯನ್ನು ಮಾಡಿದೆ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಚಿತ್ರ. ಹೌದು ಸ್ನೇಹಿತರೆ ಒರಿಸ್ಸಾ ರಾಜ್ಯದ ಓಡಿಯ ಚಿತ್ರರಂಗದ ವಿತರಕರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಒಡೆಯ ಭಾಷೆಯಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕುರಿತಂತೆ ಈಗಾಗಲೇ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ಪಿಕೆ ಚಿತ್ರ ಓಡಿಯ ಭಾಷೆಯಲ್ಲಿ 50ಲಕ್ಷ ಡಬ್ಬಿಂಗ್ ರೈಟ್ಸ್ ಗೆ ಮಾರಾಟವಾಗಿತ್ತು. ಈಗ ಒಡೆಯ ಚಿತ್ರರಂಗದ ವಿತರಕರು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಒಂದು ಕೋಟಿಗೂ ಅಧಿಕ ಮೊತ್ತವನ್ನು ನೀಡಿ ಡಬ್ಬಿಂಗ್ ರೈಟ್ಸ್ ಅನ್ನು ಕೊಂಡುಕೊಳ್ಳಲು ಹಾತೊರೆಯುತ್ತಿದ್ದಾರೆ.