ರಾಕಿಂಗ್ ಸ್ಟಾರ್ ಯಶ್ ವರ್ಸಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರಲ್ಲಿ ನಂಬರ್ 1 ಯಾರು ?? ಯಶ್ 30 ಕೋಟಿ, ದರ್ಶನ್ ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಜೋಡೆತ್ತುಗಳು ಎಂದು ಖ್ಯಾತಿ ಪಡೆದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್. ಇವರಿಬ್ಬರ ನಡುವಿನ ಸಹೋದರತ್ವದ ಬಾಂಧವ್ಯ ಈ ಹೆಸರು ಬರಲು ಕಾರಣವಾಗಿದೆ. ಇನ್ನು ಸ್ಯಾಂಡಲ್ವುಡ್ನಲ್ಲಿ ಇವರಿಬ್ಬರ ನಟನೆಯ ಚಿತ್ರ ಕ್ಕಾಗಿ ಇವರಿಬ್ಬರ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮಾರುಕಟ್ಟೆ ರಾಬರ್ಟ್ ಚಿತ್ರದಿಂದಾಗಿ ಪರಭಾಷೆಯ ತೆಲುಗಿನಲ್ಲಿ ಕೂಡ ಉತ್ತಮ ಮಟ್ಟಕ್ಕೆ ಕಾಣಿಸಿಕೊಂಡಿದೆ‌.

ಇನ್ನು ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 1 ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆಯನ್ನು ರಾಷ್ಟ್ರಾದ್ಯಂತ ಕೊಂಡಾಡುವಂತೆ ಮಾಡಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೊದಲ ಚಿತ್ರ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ರಾಮಮೂರ್ತಿಯವರು ಇವರಿಬ್ಬರನ್ನು ಹಾಕಿಕೊಂಡು ಚಿತ್ರ ಮಾಡಲು ಈಗಾಗಲೇ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಜೋಡೆತ್ತು ಎಂಬ ಟೈಟಲನ್ನು ರಿಜಿಸ್ಟರ್ ಮಾಡಿದ್ದಾರೆ. ಇವರಿಬ್ಬರ ಡೇಟ್ ಹೊಂದಾಣಿಕೆಯಾದರೆ ಖಂಡಿತವಾಗಿ ಇವರಿಬ್ಬರನ್ನು ಒಂದು ಚಿತ್ರಕ್ಕೆ ತರಲು ಸಾಕಷ್ಟು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇನ್ನು ಇತ್ತೀಚಿಗೆ ಸ್ಯಾಂಡಲ್ವುಡ್ನಲ್ಲಿ ದರ್ಶನ್ ಹಾಗೂ ಅವರ ನಡುವೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಎಂಬುದು ನಾವು ಹೇಳಲು ಹೊರಟಿದ್ದೇವೆ ಬನ್ನಿ.

ಅದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಚಾಪ್ಟರ್ 1 ಕ್ಕೆ ಎಂಟರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇನ್ನು ಕೆಜಿಎಫ್ ಚಾಪ್ಟರ್ 2 ಕ್ಕೆ ಲಾಭದಲ್ಲಿ ಪಾಲು ಸೇರಿಸಿ ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುವ ಸಾಧ್ಯತೆ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಐತಿಹಾಸಿಕ ಚಿತ್ರಗಳಾದ ರಾಜ ವೀರ ಮದಕರಿ ನಾಯಕ ಹಾಗೂ ಸಿಂಧೂರ ಲಕ್ಷ್ಮಣ ಕೆ ಲಾಭ ಸೇರಿಸಿ ಹಾಗೂ ಸಂಭಾವನೆಯನ್ನು ಸೇರಿಸಿ ಬರೋಬ್ಬರಿ 35 ರಿಂದ 40 ಕೋಟಿ ರೂಪಾಯಿ ಪಡೆಯುವ ಸಾಧ್ಯತೆ ಇದೆ.

Post Author: Ravi Yadav