ಭಾರತದಲ್ಲಿ ಹೀರೋ ಆದರೆ ವಿದೇಶದಲ್ಲಿ?? ರೋಹಿತ್ ಶರ್ಮ ರವರ ಕುರಿತ ಬ್ರಾಡ್ ಹಾಗ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ದ್ವಿಶತಕಗಳ ವೀರ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಭಾರತ ಕ್ರಿಕೇಟ್ ಕಂಡ ಶ್ರೇಷ್ಠ ಬ್ಯಾಟ್ಸಮನ್. ತಮ್ಮ ಕರಿಯರ್ ಆರಂಭದ ದಿನಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಆರಂಭಿಸಿದ್ದ ರೋಹಿತ್ ಶರ್ಮಾ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಆದರೇ ಮುಂದೆ ಆರಂಭಿಕ ಬ್ಯಾಟ್ಸಮನ್ ಆಗಿ ಬಂದ ನಂತರವಂತೂ ರೋಹಿತ್ ಶರ್ಮಾ ಅದೃಷ್ಠ ಖುಲಾಯಿಸಿತು. ಶತಕಗಳ ಮೇಲೆ ಶತಕ, ದ್ವಿಶತಕಗಳ ಮೇಲೆ ದ್ವಿಶತಕ ಭಾರಿಸಿದ ರೋಹಿತ್ ಶರ್ಮಾ ಹಿಟ್ ಮ್ಯಾನ್ ಎಂದು ಖ್ಯಾತರಾದರು. ಆ ನಂತರ ಹೆಚ್ಚು ಏಕದಿನ ಹಾಗೂ ಟಿ 20 ಪಂದ್ಯಗಳಲ್ಲಿ ಒಪನರ್ ಆಗಿದ್ದ ರೋಹಿತ್ ಶರ್ಮಾ ಇತ್ತಿಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳಲ್ಲೂ ಸಹ ಆರಂಭಿಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.

ಆದರೇ ರೋಹಿತ್ ಶರ್ಮಾಗಿರುವ ದೊಡ್ಡ ವೀಕ್ ನೆಸ್ ಬಗ್ಗೆ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಆಗಿರುವ ಬ್ರಾಡ್ ಹಾಗ್ ಒಂದು ಬೆಚ್ಚಿಬೀಳಿಸುವ ಸುದ್ದಿಯನ್ನ ತಮ್ಮ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿದ್ದಾರೆ. ಅದೆನೆಂದರೇ ರೋಹಿತ್ ಶರ್ಮಾ ಭಾರತದಲ್ಲಿ ಮಾತ್ರ ಉತ್ತಮ ದಾಖಲೆ ಹೊಂದಿದ್ದಾರೆ ಹೊರತು ವಿದೇಶಿ ನೆಲಗಳಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಮಾಹಿತಿಯನ್ನ ದಾಖಲೆ ಸಮೇತ ಹೊರ ಹಾಕಿದ್ದಾರೆ.

ಅದರಲ್ಲೂ ಮುಂಬರುವ ಭಾರತ – ಇಂಗ್ಲೆಂಡ್ ನ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಇಂಗ್ಲೆಂಡ್ ನ ಸ್ಟಾರ್ ವೇಗಿಗಳಾದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಲಿಯಾಮ್ ಪ್ಲಂಕೇಟ್, ಮಾರ್ಕ್ ವುಡ್ ರಂತಹವರನ್ನ ಎದುರಿಸಬೇಕು. ಅದರಲ್ಲೂ ಇಂಗ್ಲೆಂಡ್ ಮಣ್ಣಿನಲ್ಲಿ ಡ್ಯೂಕ್ ಬಾಲ್ ಗಳನ್ನು ಬಳಸುತ್ತಿದ್ದು ಅದನ್ನ ಎದುರಿಸಲು ರೋಹಿತ್ ಶರ್ಮಾ ಬಹಳಷ್ಟು ತಿಣುಕಾಡುತ್ತಿದ್ದಾರೆ. ಭಾರತ ಇಂಗ್ಲೆಂಡ್ ವಿರುದ್ದ ನಡೆಯುವ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಯಶಸ್ವಿಯಾಗಬೇಕೆಂದರೇ ರೋಹಿತ್ ಆರಂಭಿಕನಾಗಿ ಯಶಸ್ವಿಯಾಗಲೇಬೇಕು. ಇಲ್ಲವಾದಲ್ಲಿ ಭಾರತ ಐದು ಟೆಸ್ಟ್ ಪಂದ್ಯ ಸೋಲುವ ಸಾಧ್ಯತೆ ಇದೆ ಎಂದು ಹೇಳಿದರು. ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಸರಣಿ ಆಗಸ್ಟ್ 4 ರಿಂದ ಆರಂಭವಾಗಲಿದ್ದು ಬಹು ನೀರಿಕ್ಷಿತ ಟೂರ್ನಿ ಇದಾಗಿದೆ. ಈ ಟೂರ್ನಿಯಲ್ಲಿ ಆಡುವ ಹನ್ನೊಂದರ ಬಳಗ ಹೇಗಿರಬೇಕೆಂದು ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ತಿಳಿಸಿ.

Post Author: Ravi Yadav