ಮತ್ತೊಂದು ಮಹತ್ವದ ಬೆಳವಣಿಗೆ, ಭಾರತಕ್ಕೆ ಸಿಗಲಿದೆಯೇ ಅದೃಷ್ಟದ ಚಿನ್ನದ ಪದಕ, ನಡೆದ್ದದೇನು ಗೊತ್ತಾ??
ಮತ್ತೊಂದು ಮಹತ್ವದ ಬೆಳವಣಿಗೆ, ಭಾರತಕ್ಕೆ ಸಿಗಲಿದೆಯೇ ಅದೃಷ್ಟದ ಚಿನ್ನದ ಪದಕ, ನಡೆದ್ದದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ದಿನವೇ ಸಿಹಿ ಸುದ್ದಿ ದೊರಕಿತ್ತು. 1999 ರ ವಿಶ್ವಕಪ್ ನಲ್ಲಿ ಕರುಣಂ ಮಲ್ಲೇಶ್ವರಿ ಕಂಚಿನ ಪದಕವನ್ನು ಪಡೆದಿದ್ದರು. ಆ ನಂತರ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಪದಕ ಸಿಕ್ಕಿರಲಿಲ್ಲ.ಮಹಿಳಾ ಮಣಿಗಳೇ ಭಾರತಕ್ಕೆ ಮೊದಲ ಪದಕ ಗೆದ್ದು ಕೊಡುತ್ತಿದ್ದಾರೆ. ಸೈನಾ ನೆಹ್ವಾಲ್, ಪಿ.ವಿ.ಸಿಂಧು ಹೀಗೆ ಒಬ್ಬೊಬ್ಬರಾಗಿ ಪ್ರತಿ ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ಕೊಡುತ್ತಿದ್ದಾರೆ.
ಈ ಭಾರಿಯ ಸರಣಿ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಮೊದಲ ದಿನವೇ ಬೆಳ್ಳಿಯ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದರು. 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು ಒಟ್ಟು 202 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ ಒಟ್ಟು 210 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದರು. ಇನ್ನು ಇಂಡೋನೆಷ್ಯಾದ ಕಂಟಿಕ್ ವಿಂಡೈ ಆಯೆಯಾ ಒಟ್ಟು 194 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಮೀರಾಬಾಯಿ ಚಾನುರವರ ಈ ಸಾಧನೆಗೆ ಸಂಪೂರ್ಣ ಭಾರತವೇ ಸಂಭ್ರಮಿಸಿತ್ತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಘಟಾನುಘಟಿಗಳೆಲ್ಲಾ ಶುಭ ಕೋರಿದರು.
ಈಗ ಬೆಳ್ಳಿ ಪದಕ ಪಡೆದು ಸಂಭ್ರಮಿಸಿದ್ದ ಭಾರತಕ್ಕೆ ಸಂಭ್ರಮ ಡಬಲ್ ಆಗುವ ಸಾಧ್ಯತೆ ಇದೆ. ಹೌದು ಚಿನ್ನ ಗೆದ್ದ ಚೀನಾದ ಹ್ಯೂ ಜಿಹೈ ಅವರನ್ನ ಒಲಂಪಿಕ್ ಉದ್ದೀಪನ ಮದ್ದಿನ ಪರೀಕ್ಷೆಗೆ ಕಳಿಸಿದೆ. ಅವರು ಒಂದು ವೇಳೆ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾದರೇ, ಆಗ ಅವರು ಗೆದ್ದ ಚಿನ್ನದ ಪದಕ ಮೀರಾಬಾಯಿ ಚಾನುರವರ ಪಾಲಾಗಲಿದೆ. ಬೆಳ್ಳಿ ಗೆದ್ದ ಮೀರಾಬಾಯಿ ಇಂದು ಭಾರತಕ್ಕೆ ಆಗಮಿಸಿದರು. ಪರೀಕ್ಷೆಯ ಸಲುವಾಗಿ ಹ್ಯೂ ಜಿಹೈರವರನ್ನು ಟೋಕಿಯೋದಲ್ಲೇ ಉಳಿಸಿಕೊಳ್ಳಲಾಗಿದೆ. ಸದ್ಯ ಒಂದು ಬೆಳ್ಳಿ ಪದಕ ಪಡೆದ ಭಾರತ 12 ನೇ ಸ್ಥಾನದಲ್ಲಿದೆ. ಒಂದು ವೇಳೆ ಮೀರಾಬಾಯಿ ಚಾನುರವರಿಗೆ ಬೆಳ್ಳಿ ಬದಲು ಬಂಗಾರದ ಪದಕ ಲಭ್ಯವಾದರೇ ಭಾರತ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಮತ್ತಷ್ಟು ಎತ್ತರ ಏರುವ ಸಾಧ್ಯತೆ ನಿಚ್ಚಳವಾಗಿದೆ.