ಈ ಸಿನಿಮಾ ಏನಾದರೂ ರವಿ ಚಂದ್ರನ್ ರವರು ಮಾಡಿದರೇ ಬಾಕ್ಸಾಫೀಸ್ ಲೂಟಿ ಗ್ಯಾರಂಟಿ ಚಿತ್ರ, ಆ ಚಿತ್ರ ಯಾವುದು ಗೊತ್ತಾ??
ಈ ಸಿನಿಮಾ ಏನಾದರೂ ರವಿ ಚಂದ್ರನ್ ರವರು ಮಾಡಿದರೇ ಬಾಕ್ಸಾಫೀಸ್ ಲೂಟಿ ಗ್ಯಾರಂಟಿ ಚಿತ್ರ, ಆ ಚಿತ್ರ ಯಾವುದು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕೆಲವು ಚಿತ್ರಗಳೇ ಹಾಗೆ ಕೆಲವು ನಾಯಕ ನಟರು ನಟಿಸಿದರೆ ಮಾತ್ರ ಚಿತ್ರಕ್ಕೆ ಒಂದು ಬೆಲೆ ಹಾಗು ಆ ಪಾತ್ರಕ್ಕೊಂದು ಗೌರವ. ಇಂದಿನ ವಿಚಾರದಲ್ಲಿ ನಾವು ಹೇಳಹೊರಟಿರುವ ವಿಷಯ ಕೂಡ ಇದೇ ವಿಷಯಕ್ಕೆ ಸಂಬಂಧಪಟ್ಟಿದ್ದಾಗಿದೆ. ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಕಂಡ ಪ್ಯಾಶನೇಟ್ ನಿರ್ಮಾಪಕ ನಟ ಹಾಗೂ ನಿರ್ದೇಶಕರಲ್ಲಿ ಅಗ್ರಗಣ್ಯ ರಲ್ಲಿ ಒಬ್ಬರು. ಕ್ರೇಜಿಸ್ಟಾರ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಿಗ್ ಬಜೆಟ್ ನ ಸಿನಿಮಾ ಮಾಡಲು ಹೊರಟವರಲ್ಲಿ ಮೊದಲಿಗರು.
ಕನ್ನಡ ಚಿತ್ರರಂಗದಲ್ಲಿ ಶ್ರೀಮಂತಿಕೆಯನ್ನು ಹೊರಜಗತ್ತಿಗೆ ಪರಿಚಯಿಸಿದ ಖ್ಯಾತಿ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಸಲ್ಲುತ್ತದೆ. ಪರಭಾಷೆಯ ಸ್ಟಾರ್ ಗಳನ್ನು ಕನ್ನಡ ಚಿತ್ರರಂಗಕ್ಕೆ ಬರುವಂತೆ ಮಾಡಿದವರು ಕೂಡ ಇವರೇ. ಈಗ ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರದಲ್ಲಿ ರವಿಚಂದ್ರನ್ ರವರು ನಟಿಸಿದರೆ ಈ ಚಿತ್ರ ನೆಕ್ಸ್ಟ್ ಲೆವೆಲ್ಲಿಗೆ ಹೋಗುತ್ತದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಆಗುತ್ತಿದೆ.
ಹೌದು ಸ್ನೇಹಿತರೆ ಈ ಚಿತ್ರ ಇನ್ಯಾವುದು ಅಲ್ಲ ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಮೆಜಾನ್ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿರುವ ದೃಶ್ಯಂ 2 ಚಿತ್ರದ ರಿಮೇಕ್. ಹೌದು ಸ್ನೇಹಿತರೆ ದೃಶ್ಯ ಚಿತ್ರದ ಮೊದಲ ಪಾರ್ಟ್ ನಲ್ಲಿ ಈಗಾಗಲೇ ಈ ವಾಸುರವರ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ನಟಿಸಿ ಎಲ್ಲರ ಮನಗೆದ್ದಿದ್ದಾರೆ. ಇನ್ನು ದೃಶ್ಯ ಪಾರ್ಟ್ 2 ಚಿತ್ರ ಚಿತ್ರೀಕರಣಕ್ಕೆ ಸಜ್ಜಾಗಿದ್ದು ಮಲಯಾಳಂ ಚಿತ್ರದ ಜನಪ್ರಿಯತೆ ನೋಡಿದರೆ ಕನ್ನಡದಲ್ಲಿ ಕೂಡ ಇದು ಸಾಕಷ್ಟು ಸದ್ದು ಮಾಡಲಿದೆ ಎಂಬ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.