ಬಿಗ್ ಬಾಸ್ ಕ್ಯೂಟ್ ಬೆಡಗಿ ದಿವ್ಯ ಸುರೇಶ್ ನಿಜಕ್ಕೂ ಯಾರು ಗೊತ್ತೇ?? ಖುದ್ದು ಮಾತನಾಡಿ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ. ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ಕ್ಯೂಟ್ ಬೆಡಗಿ ದಿವ್ಯ ಸುರೇಶ್ ನಿಜಕ್ಕೂ ಯಾರು ಗೊತ್ತೇ?? ಖುದ್ದು ಮಾತನಾಡಿ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಈಗಾಗಲೇ ಗ್ರಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಹೌದು ಸ್ನೇಹಿತರೆ ಇನ್ನೇನು ಕೆಲವು ಅಂದರೆ 12 ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯಲು ತಯಾರಿ ನಡೆಯುತ್ತಿದೆ. ಫೆಬ್ರವರಿ ತಿಂಗಳಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯೊಂದಿಗೆ ಶುಭಾರಂಭವನ್ನು ಪಡೆದುಕೊಂಡಿತ್ತು. ನಂತರದ ದಿನಗಳಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಬ್ಬೊಬ್ಬರಾಗಿ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತೊಡಗಿದರು.

ಅಂದುಕೊಂಡಂತೆ ಪ್ರೇಕ್ಷಕರು ನಿರೀಕ್ಷಿತ ಮಟ್ಟದ ಮನೋರಂಜನೆ ನೀಡದಿದ್ದರೂ ಕೆಲವು ಅನಿರೀಕ್ಷಿತ ಸ್ಪರ್ಧಿಗಳು ಪ್ರೇಕ್ಷಕರ ಮನಗೆದ್ದು ಇಂದು ಫೈನಲ್ಗೆ ತೇರ್ಗಡೆಯಾಗದ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಹಲವಾರು ಸ್ಪರ್ಧಿಗಳು ಯಾವುದೇ ಜನಪ್ರಿಯತೆ ಇಲ್ಲದೆ ಬಿಗ್ ಬಾಸ್ ಗೆ ಬಂದು ಈಗ ಬಿಗ್ ಬಾಸ್ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿ ಕೊನೆಯವರೆಗೂ ಕೂಡ ಉಳಿದುಕೊಂಡಿದ್ದಾರೆ. ಇದರಲ್ಲಿ ನಟಿ ದಿವ್ಯ ಸುರೇಶ ಕೂಡ ಒಬ್ಬರು. ಅಷ್ಟೊಂದು ಜನಪ್ರಿಯತೆ ಇಲ್ಲದೆ ಬಂದು ಬಿಗ್ಬಾಸ್ ಮನೆಗೆ ಕಾಲಿಟ್ಟು ಟಾಸ್ಕ್ ಗಳನ್ನು ಪೂರೈಸಿ ಪ್ರೇಕ್ಷಕರ ಮನ ಗೆದ್ದು ಈಗ ಫೈನಲ್ ಗೆ ತೇರ್ಗಡೆಯಾಗದ ಎಲ್ಲಾ ಸಾಧ್ಯತೆಗಳಿವೆ.

ಇನ್ನು ದಿವ್ಯ ಸುರೇಶ್ ಹಾಗೂ ಜೋಶ್ ಚಿತ್ರದ ಖ್ಯಾತ ನಟ ರಾಕೇಶ್ ಅಡಿಗರವರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಖುದ್ದಾಗಿ ರಾಕೇಶ್ ಅಡಿಗ ರವರು ಏನು ಹೇಳಿದ್ದಾರೆ ಗೊತ್ತಾ. ಹೌದು ಸ್ನೇಹಿತರೆ ಇದಕ್ಕೆ ಪ್ರತಿಕ್ರಿಯಿಸಿರುವ ನಟ ರಾಕೇಶ್ ಅಡಿಗ ನಾವಿಬ್ಬರು ಈ ಹಿಂದೆ ನಾಲ್ಕೈದು ವರ್ಷಗಳು ಜೊತೆಯಾಗಿ ಇದ್ದೆವು. ಈಗ ನಮ್ಮ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ಈಗ ನಾವಿಬ್ಬರು ಒಟ್ಟಿಗೆ ಇಲ್ಲ, ದಿವ್ಯ ಸುರೇಶ್ ರವರಿಗೆ ಜೀವನದ ದೊಡ್ಡ ತಿರುವು ನೀಡುವಂತಹ ಒಂದು ದೊಡ್ಡ ಅವಕಾಶ ಸಿಕ್ಕಿದೆ, ಆ ದಾರಿಯಲ್ಲಿ ಅವರು ಸಾಧನೆ ಮಾಡುತ್ತಿದ್ದಾರೆ, ಈ ಕುರಿತಂತೆ ಇನ್ಯಾವುದೂ ವಿಷಯಗಳು ಪ್ರಚಾರ ಆಗುವುದು ಬೇಡ ಎಂದಿದ್ದಾರೆ. ಹಳೆಯ ಫೋಟೋಗಳನ್ನು ಈಗ ಮತ್ತೆ ಮತ್ತೆ ಇದಕ್ಕೆ ಅವರಿಗೆ ಬೇಸರವನ್ನುಂಟು ಮಾಡುವುದು ಬೇಡ ಎಂಬುದಾಗಿ ಹೇಳಿದ್ದಾರೆ.