ಐಸಿಯು ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯನ್ನು ಒಳಗೆ ಕಳುಹಿಸಿ ಎಂದು ಜಯಂತಿ ರವರು ಹೇಳಿದ್ದು ಯಾರಿಗೆ ಗೊತ್ತೇ?? ಆ ಬಿಗ್ ಬಾಸ್ ಸ್ಪರ್ದಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವು ಕಲಾವಿದರೇ ಹಾಗೆ ಅವರ ನಟನೆ ಬಹುಕಾಲದವರೆಗೆ ನಮ್ಮನ್ನು ಕಾಡುತ್ತಿರುತ್ತದೆ. ಅಂಥವರಲ್ಲಿ ಇವರು ಕೂಡ ಹೌದು. ಹೌದು ನಾವು ಮಾತನಾಡುತ್ತಿರುವುದು ಅಭಿನಯ ವಿಶಾರದೆ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಜಯಂತಿ ಅಮ್ಮನವರ ಬಗ್ಗೆ. ಹೌದು ಸ್ನೇಹಿತರೆ 1945 ರಲ್ಲಿ ಬಳ್ಳಾರಿಯಲ್ಲಿ ಜನ್ಮಪಡೆದ ಕಮಲ ಕುಮಾರಿಯವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದು ಜಯಂತಿ ಎಂಬ ನಾಮಕರಣವನ್ನು ಪಡೆದರು. ತಾಯಿ ನೃತ್ಯಗಾರ್ತಿ ಆಗಲಿ ಎಂದು ತಮ್ಮ ಮಗಳನ್ನು ನೃತ್ಯ ಕಲಿಕೆ ಕೇಂದ್ರಕ್ಕೆ ಕಳಿಸಿದ್ದರು ಆದರೆ ಮಗಳು ಕನ್ನಡ ಕಂಡ ಶ್ರೇಷ್ಠ ನಟ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಬರೋಬ್ಬರಿ 45 ಚಿತ್ರಗಳಲ್ಲಿ ನಟಿಸುವಂತಾದರು.

ಜಯಂತಿ ಅಮ್ಮನವರ ವ್ಯಕ್ತಿತ್ವ ಭೂಮಿ ತಾಯಿಗೆ ಹೋಲಿಸುವಷ್ಟು ಸರಳವಾದ ಹಾಗೂ ಕರುಣಾಮಯಿ ವ್ಯಕ್ತಿತ್ವ. ಇನ್ನು ಜಯಂತಿ ಅಮ್ಮನವರು ಬರೋಬ್ಬರಿ ಆರು ಭಾಷೆಗಳಲ್ಲಿ 500ಕ್ಕೂ ಅಧಿಕ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಂದು ಮುಂಜಾನೆ ಅನಾರೋಗ್ಯದ ಕಾರಣದಿಂದಾಗಿ ಅವರು ನಮ್ಮನ್ನೆಲ್ಲ ಬಿಟ್ಟು ಇಹಲೋಕದಲ್ಲಿ ತ್ಯಜಿಸಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ಅವರ ಸರಳತೆ ಕುರಿತಂತೆ ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಅವರು ಐಸಿಯುನಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಆಸ್ಪತ್ರೆಯ ಅವರ ಕೋಣೆಯ ಬಾಗಿಲ ಬಳಿ ನಿಂತಿದ್ದಾಗ ಅವರೇ ಅವರನ್ನು ಒಳಗೆ ಬಿಡಿ ಎಂದು ಕರೆಯುವಷ್ಟು ಸರಳತೆಯನ್ನು ನೆರೆದಿದ್ದರು ವ್ಯಕ್ತಿ ಯಾರು ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ಅನಾರೋಗ್ಯ ಉಲ್ಬಣಿಸಿದಾಗ ಜಯಂತಿ ಅಮ್ಮನವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿತ್ರರಂಗದ ಹಲವಾರು ಗಣ್ಯರು ಹಾಗೂ ನಟ ನಿರ್ದೇಶಕ ನಟಿಯರು ಜಯಂತಿ ಅಮ್ಮನವರ ಆರೋಗ್ಯವನ್ನು ವಿಚಾರಿಸಲು ಆಗಾಗ ಆಸ್ಪತ್ರೆಗೆ ಬರುತ್ತಿದ್ದರು. ಒಮ್ಮೆ ಪ್ರಥಮ್ ರವರು ಜಯಂತಿ ಅಮ್ಮನವರ ಆರೋಗ್ಯವನ್ನು ವಿಚಾರಿಸಲು ಅವರ ಕೋಣೆಯ ಕೊಠಡಿ ಬಾಗಿಲ ಬಳಿ ಬಂದಾಗ ಸ್ವತಃ ಜಯಂತಿ ಅಮ್ಮನವರೇ ಪ್ರಥಮ ಯಾಕೆ ಬಾಗಿಲ ಬಳಿ ನಿಂತಿದ್ದ ಒಳಗೆ ಬನ್ನಿ ಎಂಬುವಷ್ಟು ಸೌಜನ್ಯವನ್ನು ಮೆರೆದು ಕೊಂಚವೂ ಕೂಡ ಅಹಂ ಇಲ್ಲದೆ ಕರೆದಿದ್ದರು. ಇಂದು ಲೋಕ ತ್ಯಜಿಸಿರುವ ಜಯಂತಿ ಅಮ್ಮನವರನ್ನು ನೆನಪಿಸಿಕೊಂಡು ಪ್ರಥಮ್ ರವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಕುರಿತಂತೆ ಹಂಚಿಕೊಂಡಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಜಯಂತಿ ಅಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.

Post Author: Ravi Yadav