ಯುಎಇನಲ್ಲಿ ನಡೆಯಲಿರುವ ಐಪಿಎಲ್ ಗೆ ಮುನ್ನ ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿಸುದ್ದಿ, ಏನು ಗೊತ್ತಾ?? ವಿರಾಟ್ ಕೊಹ್ಲಿ ಫುಲ್ ಖುಷ್

ಯುಎಇನಲ್ಲಿ ನಡೆಯಲಿರುವ ಐಪಿಎಲ್ ಗೆ ಮುನ್ನ ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿಸುದ್ದಿ, ಏನು ಗೊತ್ತಾ?? ವಿರಾಟ್ ಕೊಹ್ಲಿ ಫುಲ್ ಖುಷ್

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ನಡೆದ ಐಪಿಎಲ್ ಮೊದಲರ್ಧದಲ್ಲಿ ಆರ್ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡಿದೆ, ಒಂದು ವೇಳೆ ಟೂರ್ನಿ ನಿಲ್ಲದೆ ಹೋಗಿದ್ದರೆ ಖಂಡಿತವಾಗಲೂ ಕೂಡ ಆರ್ಸಿಬಿ ತಂಡ ಕಪ್ ಗೆಲ್ಲುತ್ತಿತ್ತು ಎಂಬುದು ಈ ಬಾರಿ ಅಭಿಮಾನಿಗಳ ಲೆಕ್ಕಾಚಾರ ವಲ್ಲ ಬದಲಾಗಿ ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರವಾಗಿತ್ತು. ಆಟವಾಡಿದ ಏಳು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು ಬೀಗಿರುವ ಆರ್ಸಿಬಿ ತಂಡ ಇನ್ನು ಉಳಿದಿರುವ ಏಳು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಗೆದ್ದರೆ ಸಾಕು ಕ್ವಾಟರ್ ಫೈನಲ್ ತಲುಪುವುದು ಖಚಿತವಾಗಲಿದೆ, ಹೀಗೆ ಗೆಲುವು ದಾಖಲಿಸುತ್ತಿದ್ದರು ಕೂಡ ಆರ್ಸಿಬಿ ತಂಡಕ್ಕೆ ಒಂದು ಚಿಂತೆ ಗೆದ್ದು ಕಾಣುತ್ತಿತ್ತು.

ಬ್ಯಾಟ್ಸ್ಮನ್ಗಳು ಯಶಸ್ವಿಯಾಗುತ್ತಿದ್ದರೂ ಹಾಗೂ ಬೌಲರ್ ಗಳು ಕೊನೆಯ ಓವರ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ಮಧ್ಯಮ ವರ್ಗಗಳಲ್ಲಿ ವಿಕೆಟ್ ಪಡೆಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಯುಜ್ವೇಂದ್ರ ಚಾಹಲ್ ರವರು ಫಾರ್ಮ್ ಇರಲಿಲ್ಲ. ಆರ್ಸಿಬಿ ತಂಡದಲ್ಲಿ ಸಾಕಷ್ಟು ಹೆಸರು ಗಳಿಸಿ ಹಲವಾರು ಪಂದ್ಯಗಳಿಗೆ ಪ್ರಮುಖ ತಿರುವನ್ನು ನೀಡಿರುವ ಯುಜ್ವೇಂದ್ರ ಚಾಹಲ್ ರವರು ಅಗತ್ಯದ ಸಮಯದಲ್ಲಿ ವಿಕೆಟ್ಟು ಪಡೆಯುವುದರಲ್ಲಿ ನಿಸ್ಸೀಮರು ಎಂದು ಎಲ್ಲರಿಗೂ ತಿಳಿದಿತ್ತು. ಆದರೆ ಈ ಐಪಿಎಲ್ ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ ಅದೇ ಕಾರಣಕ್ಕಾಗಿ ಆರ್ಸಿಬಿ ಸ್ಪಿನ್ ವಿಭಾಗ ಯಶಸ್ಸು ಕಂಡಿರಲಿಲ್ಲ.

ಇನ್ನು ಈ ಬಾರಿ ಮುಂದಿನ ಪಂದ್ಯಗಳು ನಡೆಯುತ್ತಿರುವುದು ಯುಎಇ ದೇಶದಲ್ಲಿ ಅಲ್ಲಿ ಹೆಚ್ಚು ಸ್ಪಿನ್ನರುಗಳಿಗೆ ಪಿಚ್ ಸಹಕಾರಿಯಾಗಿರುವ ಕಾರಣ ಯುಜ್ವೇಂದ್ರ ಚಾಹಲ್ ರವರು ಫಾರಂಗೆ ಮರಳಿ ಬರುವುದು ಅಗತ್ಯವಾಗಿತ್ತು, ಈ ಸಮಯದಲ್ಲಿ ಶ್ರೀಲಂಕಾದಲ್ಲಿ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಿರುವ ಯುಜ್ವೇಂದ್ರ ಚಹಾಲ್ ರವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಅಗತ್ಯದ ಸಮಯದಲ್ಲಿ ವಿಕೆಟ್ ಪಡೆಯಬೇಕು ಎಂದರೆ ಚಹಲ್ ರವರು ಇದ್ದಾರೆ ಎಂಬ ಭರವಸೆ ಮೂಡಿಸುವಂತೆ ಯುಜ್ವೇಂದ್ರ ಚಾಹಲ್ ರವರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಹಾಗೂ ತಂಡಕ್ಕೆ ಖುಷಿ ತಂದಿದೆ.